ಶಿವಮೊಗ್ಗ: ಶಿಕಾರಿಪುರದ ಜೆಡಿಎಸ್ ಮುಖಂಡ ಹಾಗೂ ಮಾಜಿ ಅಧಿಕಾರಿ ಹೆಚ್.ಟಿ.ಬಳಿಗಾರ್ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡು ಪಕ್ಷಕ್ಕೆ ಸೇರ್ಪಡೆಯಾದರು.
ನಂತರ ಮಾತನಾಡಿದ ಮಾಜಿ ಸಿಎಂ ಬಿ ಎಸ್ಯ ಡಿಯೂರಪ್ಪ ಬಳಿಗಾರ್ ರವರು 12 ವರ್ಷ ಸರ್ಕಾರಿ ಸೇವೆ ಸಲ್ಲಿಸಿದ್ದಾರೆ. ಶಿಕಾರಿಪುರ ತಾಲೂಕು ಮತ್ತಿಕೋಟೆಯ ನಿವಾಸಿಯಾಗಿರುವ ಇವರು 2013 ರಲ್ಲಿ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಸೇವೆಗೆ ಬಂದರು. 2013 ರಲ್ಲಿ 16.500 ಮತಗಳು, 2018 ರಲ್ಲಿ 13.500 ಮತ ಪಡೆದು ಕೊಂಡಿದ್ದರು. ಬಿಜೆಪಿಯ ಆಡಳಿತ ಹಾಗೂ ಪ್ರಧಾನಿ ಮೋದಿ ಅವರ ಆಡಳಿತ ವೈಖರಿ ನೋಡಿ ಪಕ್ಷವನ್ನು ಸೇರಿದ್ದಾರೆ. ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ನೀಡಲಾಗುವುದು ಎಂದರು.
ಕೆ.ಎಸ್.ಈಶ್ವರಪ್ಪ ಮಾತನಾಡಿ ಬಳಿಗಾರ್ ಅವರಿಗೆ ಬಿಜೆಪಿ ಪರವಾಗಿ ಸ್ವಾಗತ ಕೋರುತ್ತೆನೆ. ಎಸ್ಸಿ, ಎಸ್ಟಿ ಯವರಿಗೆ 50 ವರ್ಷ ದಲ್ಲಿ ಕಾಂಗ್ರೆಸ್ ಮಾಡದ ಕೆಲಸವನ್ನು ಬಿಜೆಪಿ ಕೇವಲ 15 ವರ್ಷದಲ್ಲಿ ಮಾಡಿದೆ. ಇದನ್ನೇ ನೋಡಿ ಅವರೆಲ್ಲಾರ ಬೆಂಬಲ ಪಕ್ಷಕ್ಕೆ ಸಿಗುತ್ತಿದೆ. ಇದಕ್ಕಾಗಿಯೇ ನಮಗೆ ಇಷ್ಟೊಂದು ಸೀಟು ಲಭ್ಯವಾಗುತ್ತಿದೆ. ಮೀಸಲಾತಿ ಹೆಚ್ಚಳದಿಂದ ಅವರೆಲ್ಲ ನಮ್ಮ ಜೊತೆ ಬರುತ್ತಿದ್ದಾರೆ. ಮೋದಿ ಕ್ಯಾಬಿನೆಟ್ ನಲ್ಲಿ ಓಬಿಸಿಯ ಮಂತ್ರಿಗಳನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಇನ್ನೂ ಯಾರ್ಯಾರು ಬಿಜೆಪಿ ಸೇರಲು ಬಯಸುತ್ತಾರೂ ಅವರಿಗೆ ಸ್ವಾಗತಿಸುತ್ತೆನೆ ಎಂದರು.
ಪಕ್ಷಕ್ಕೆ ಸೇರ್ಪಡೆಯಾದ ನಂತರ ಮಾತನಾಡಿದ ಹೆಚ್.ಟಿ.ಬಳಿಗಾರ್ ರವರು, ಪಕ್ಷಕ್ಕೆ ಬರಮಾಡಿಕೊಂಡ ಎಲ್ಲಾರಿಗೂ ಆತ್ಮೀಯ ವಂದನೆಗಳನ್ನು ತಿಳಿಸಿ ಇಂದು ನನ್ನ ಜೀವನ ತಿರುವು ಪಡೆದುಕೊಂಡ ದಿನ. ನಾನು ದೇವರಾಜ್, ಬಂಗಾರಪ್ಪನವರ ಹಿಂಬಾಲಕ. ದೇಶದಲ್ಲಿ ಮೋದಿ ರಾಜ್ಯದಲ್ಲಿ ಬಿಎಸ್ವೈ ಅವರನ್ನು ನೋಡಿ ಪಕ್ಷಕ್ಕೆ ಬಂದಿದ್ದೇನೆ.
ರೈಸ್ ಪಾರ್ಕ್ ಸೇರಿದಂತೆ ಅನೇಕ ಯೋಜನೆಗಳು ನಮ್ಮ ಮನದಲ್ಲಿ ಇವೆ. ನಾನು ಬಿಜೆಪಿಯ ತತ್ವ ಸಿದ್ದಾಂತ ಒಪ್ಪಿ ಬಿಜೆಪಿಗೆ ಸೇರುತ್ತಿದ್ದೇನೆ. ಅವರು ಸಹ ನನಗೆ ಗೌರವಯುತವಾಗಿ ನಡೆಸಿಕೊಂಡು ಜವಾಬ್ದಾರಿಯನ್ನು ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು, ಈ ವೇಳೆ ಜೆಡಿಎಸ್ ನಿಂದ 50 ಕ್ಕೂ ಹೆಚ್ಚು ಮಂದಿ ಬಿಜೆಪಿ ಸೇರ್ಪಡೆಯಾದರು.
ಇದನ್ನೂ ಓದಿ:ಮುಂದಿನ ಚುನಾವಣೆಯಲ್ಲಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ: ಸಿದ್ದರಾಮಯ್ಯ