ಶಿವಮೊಗ್ಗ: ನಗರದ ಪ್ರತಿಷ್ಠಿತ ಮಳಿಗೆಯೊಂದರ ಮೇಲೆ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ರಾತ್ರಿ ಅಂಗಡಿ ಬಂದ್ ಮಾಡುವ ವೇಳೆಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗಾರ್ಡನ್ ಏರಿಯಾದಲ್ಲಿರುವ ಮಳಿಗೆಯೊಂದರ ಮೇಲೆ ಮೂವರು ಐಟಿ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪರಿಶೀಲನೆ ಆರಂಭವಾಗುತ್ತಿದ್ದಂತೆ ಅಂಗಡಿ ಬಾಗಿಲು ಬಂದ್ ಮಾಡಿಸಲಾಗಿದ್ದು, ಅಕೌಂಟ್ಸ್ ಪರಿಶೀಲನೆ ನಡೆಯುತ್ತಿದೆ. ಇಡೀ ರಾತ್ರಿ ದಾಖಲೆಗಗಳ ಪರಿಶೀಲನೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.