ಶಿವಮೊಗ್ಗ: ನಗರದ ಜನರಿಗೆ ಆಯುರ್ವೇದಿಕ್ ಔಷಧಿ ಕಿಟ್ ವಿತರಣೆ ಕುರಿತು ಸಚಿವ ಕೆ.ಎಸ್. ಈಶ್ವರಪ್ಪ ಪೂರ್ವಭಾವಿ ಸಭೆ ನಡೆಸಿದರು.
ನಗರದ ಮಾರಿಕಾಂಬ ಟ್ರಸ್ಟ್ ಸಂಭಾಗಣದಲ್ಲಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರು ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡರ ಜೊತೆ ನಗರದ ಸಾರ್ವಜನಿಕರಿಗೆ ಉಚಿತವಾಗಿ ಆಯುರ್ವೇದ ಔಷಧ ಕಿಟ್ ವಿತರಿಸುವ ಉದ್ದೇಶ ಹೊಂದಿರುವ ಸಚಿವರು, ಈ ಕುರಿತು ರೂಪು ರೇಷೆಗಳ ಕುರಿತು ಸಭೆ ನಡೆಸಿ ಚರ್ಚಿಸಿದರು.
ಸಭೆಯಲ್ಲಿ ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರುಳಿಧರ್ ಹಾಗೂ ಪಾಲಿಕೆ ವಿಪಕ್ಷ ನಾಯಕ ಚನ್ನಬಸಪ್ಪ, ಆರ್ಯ ವೈಶ್ಯ ನಿಗಮ ಮಂಡಳಿ ಅಧ್ಯಕ್ಷ ಡಿ.ಎಸ್ ಅರುಣ್ ಹಾಗೂ ಪಾಲಿಕೆ ಸದಸ್ಯರು ಮತ್ತು ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.