ಶಿವಮೊಗ್ಗ: 6ನೇ ವೇತನ ಆಯೋಗ ಜಾರಿಗಾಗಿ ಆಗ್ರಹಿಸಿ ಕಳೆದ 7 ದಿನಗಳಿಂದ ಕೆಎಸ್ಆರ್ಟಿಸಿ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಇಂದು ಕೂಡ ಭಿಕ್ಷೆ ಬೇಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಭದ್ರಾವತಿಯ ಬಸವೇಶ್ವರ ಸರ್ಕಲ್ ಬಳಿ 10ಕ್ಕೂ ಹೆಚ್ಚು ಸಾರಿಗೆ ಸಿಬ್ಬಂದಿ ಭಿಕ್ಷಾಟನೆ ಮಾಡಿದರು. ನಿನ್ನೆ ಡಿಸಿ ಕಚೇರಿ ಮುಂದೆ ತಮ್ಮ ಕುಟುಂಬ ಸಮೇತ ತಟ್ಟೆ ಲೋಟ ಬಡಿದು ಪ್ರತಿಭಟನೆ ನಡೆಸಿದ್ದರು. ಇಂದು ಭಿಕ್ಷೆ ಬೇಡುವ ಮೂಲಕ ತಮ್ಮ ಆರ್ಥಿಕ ಸ್ಥಿತಿ ಬಿಚ್ಚಿಟ್ಟಿದ್ದಾರೆ.
![Innovative protest by KSRTC employees to begging](https://etvbharatimages.akamaized.net/etvbharat/prod-images/kn-smg-04-ksrtcempoyes-beggingprotest-7204213_13042021171115_1304f_1618314075_932.jpg)
ತಮಗೆ 6ನೇ ವೇತನ ಆಯೋಗ ಜಾರಿ ಮಾಡುವ ತನಕ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ನೌಕರರು ಪಟ್ಟು ಹಿಡಿದಿದ್ದಾರೆ. ಮಾರ್ಚ್ ತಿಂಗಳ ಸಂಬಳವನ್ನು ಬಿಡುಗಡೆ ಮಾಡಬೇಕೆಂದು ಇದೇ ವೇಳೆ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ .. ಗುಳೇದಗುಡ್ಡದಲ್ಲಿ ಯುಗಾದಿ ಭವಿಷ್ಯ ನುಡಿದ ಇಲಾಳ ಕುಟುಂಬಸ್ಥರು