ETV Bharat / state

ಶಿವಮೊಗ್ಗ ಜಿಲ್ಲೆಯಲ್ಲಿ ದಿನೆ ದಿನೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ: ಜನರ ಜಾಗೃತಿಯೇ ಮುಖ್ಯ..

ಹಲವು ಆಯಾಮದ‌ ಮೂಲಕ ಗೂತ್ತಿಲ್ಲದೆ ಇರುವವರ ಹಣ ಪಡೆಯುವ ಹೊಸ ಮುಖವನ್ನೆ ಸೈಬರ್ ಕ್ರೈಂ ಎನ್ನಲಾಗುತ್ತದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚೆಗೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತ ಬರುತ್ತಿದೆ.

increasing-cyber-crime-case-in-shimoga-district
ಶಿವಮೊಗ್ಗ ಜಿಲ್ಲೆಯಲ್ಲಿ ದಿನೆ ದಿನೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ
author img

By

Published : Nov 20, 2020, 11:23 PM IST

ಶಿವಮೊಗ್ಗ: ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೆ ಇರುತ್ತಾರೆ. ಅದೇ ರೀತಿ ಆಧುನಿಕತೆ ಬೆಳದಂತೆ ಮೋಸ ಮಾಡುವ ವಿಧಾನ ಸಹ ಬದಲಾವಣೆ ಆಗಿದೆ. ಮೊದಲೆಲ್ಲಾ ಕಳ್ಳತನ, ರಾಬರಿ, ಬೆದರಿಕೆ, ಕನ್ನ ಹೀಗೆ ಹಣ, ಬಂಗಾರ ಕಳ್ಳತನ ಮಾಡಲಾಗುತ್ತಿತ್ತು. ಆದರೆ ಈಗ ಕುಳಿತಲ್ಲಿಯೇ ನಿಮ್ಮ ಖಾತೆಗೆ ಕನ್ನ ಹಾಕುವ, ನಿಮ್ಮ ಖಾತೆಯಿಂದ ಏಕಾಏಕಿ ಹಣ ಲಪಟಾಯಿಸುವ ಕುತಂತ್ರಿಗಳು ಹುಟ್ಟಿ‌ಕೊಂಡಿದ್ದಾರೆ.

increasing-cyber-crime-case-in-shimoga-district
ಶಿವಮೊಗ್ಗ ಜಿಲ್ಲೆಯಲ್ಲಿ ದಿನೆ ದಿನೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ

ಹೀಗೆ ಹಲವು ಆಯಾಮದ‌ ಮೂಲಕ ಗೂತ್ತಿಲ್ಲದೆ ಇರುವವರ ಹಣ ಪಡೆಯುವ ಹೊಸ ಮುಖವನ್ನೆ ಸೈಬರ್ ಕ್ರೈಂ ಎನ್ನಲಾಗುತ್ತದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚೆಗೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತ ಬರುತ್ತಿದೆ.

ಸೈಬರ್ ಕ್ರೈಂ ಎಂದರೆ ಕೇವಲ ಹಣ ಲಪಟಾಯಿಸುವುದಷ್ಟೆ ಅಲ್ಲ, ಬದಲಾಗಿದ ಫೇಸ್ ಬುಕ್, ವಾಟ್ಸಪ್ ‌ಇತರೆ ಸಾಮಾಜಿಕ ತಾಣಗಳ ಮೂಲಕ ವ್ಯಕ್ತಿ, ಸಮುದಾಯವನ್ನು ಅಶ್ಲೀಲವಾಗಿ ಬೈಯ್ಯುವುದು, ಮಹಿಳೆ, ಅಪ್ರಾಪ್ತರು ಹೀಗೆ ಸಮುದಾಯದ ಬಗ್ಗೆ ಹಾನಿಯಾಗುವಂತಹ ಪೋಸ್ಟ್ ಮಾಡುವುದು ಸೇರಿದಂತೆ ಹಲವು ವಿಚಾರಗಳು ಬರುತ್ತವೆ.‌ ಶಿವಮೊಗ್ಗ ಜಿಲ್ಲೆಯಲ್ಲಿ ಸಿಇಎನ್ ಪೊಲೀಸ್ ಠಾಣೆ 2017 ರಲ್ಲಿ ಪ್ರಾರಂಭ ಮಾಡಲಾಗಿದೆ. ಮೊದಲು ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯ ಕೊರತೆ ಇತ್ತು. ಈಗ‌ ಎಲ್ಲಾವು ಸರಿದೂಗಿವೆ.

ವರ್ಷ ಪ್ರಕರಣ ಸಂಖ್ಯೆ

2017 119

2018 124

2019 155

2020 154

ಒಟ್ಟು ಇದುವರೆಗೂ 552 ಪ್ರಕರಣಗಳು ದಾಖಲಾಗಿವೆ.

ಜಿಲ್ಲೆಯಲ್ಲಿ 2018 ರಿಂದ ಇದುವರೆಗೂ ವಂಚನೆಯಾದ ಒಟ್ಡು ಹಣದ ಮಾಹಿತಿ:

* 2018 ರಲ್ಲಿ 47 ಪ್ರಕರಣದಿಂದ 23.538, 163. ರೂ ವಂಚನೆಯಾಗಿದೆ. ಇದರಲ್ಲಿ ರಿಫಂಡ್ ಆದ ಹಣ- 4.37.853 ರೂ, ಫ್ರಿಜ್ ಆದ ಹಣ-4.53.638.

* 2019 ರಲ್ಲಿ 105 ಪ್ರಕರಣದಲ್ಲಿ 16.089.248 ನಷ್ಟು ವಂಚನೆಯಾಗಿತ್ತು. ರಿಫಂಡ್ ಆದ ಹಣ-1.753.999 ರೂ, ಫ್ರೀಜ್ ಆದ ಹಣ-23.67.104 ರೂ.

* 2020 ರಲ್ಲಿ 154 ಪ್ರಕರಣದಿಂದ 23.653.024 ರೂ ವಂಚನೆಯಾಗಿದೆ. ರಿಫಂಡ್ ಆದ ಹಣ- 1.500.078 ರೂ, ಫ್ರೀಜ್ ಆದ ಹಣ-7.80.040 ರೂ.

ಒಟ್ಟು ಮೂರು ವರ್ಷದಲ್ಲಿ 306 ಪ್ರಕರಣ ದಾಖಲಾಗಿ, 63.280.435 ರೂ ವಂಚನೆಯಾಗಿದೆ. ರೀ ಫಂಡ್ ಆದ ಹಣ-3.691.930 ರೂ, ಫ್ರೀಜ್ ಆದ ಹಣ-3.600.782 ರೂ.‌

ದಾಖಲಾದ ಪ್ರಕರಣದಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿದ ಪ್ರಕರಣಗಳ ವಿವರ:

ನಕಲಿ ಫೇಸ್ ಬುಕ್ ಖಾತೆ/ ಅಶ್ಲೀಲ ಚಿತ್ರ ರವಾನೆ/ ಲೈಂಗಿಕ ಕಿರುಕುಳ ಬೆದರಿಕೆ ಪ್ರಕರಣದಲ್ಲಿ 2018 ರಲ್ಲಿ 2, 2019 ರಲ್ಲಿ 10, 2020 ರಲ್ಲಿ 8 ಪ್ರಕರಣದಲ್ಲಿ‌ ದಸ್ತಗಿರಿ ಮಾಡಲಾಗಿದೆ. ಆನ್ ಲೈನ್ ವಂಚನೆ ಪ್ರಕರಣದಲ್ಲಿ‌ 2019 ರಲ್ಲಿ 02, 2020 ರಲ್ಲಿ 01. ಸೈಬರ್ ಟಿಪ್ ಲೈನ್ (ಮಕ್ಕಳ ಅಶ್ಲೀಲ ಚಿತ್ರ ರವಾನೆ) ಪ್ರಕರಣ, 2020 ರಲ್ಲಿ 02 ಪ್ರಕರಣ ನಡೆದಿದೆ. ಇತರೆ ಐಪಿಸಿ ಪ್ರಕರಣದಲ್ಲಿ 2019 ರಲ್ಲಿ 03 ಪ್ರಕರಣ, 2020 ರಲ್ಲಿ 02 ಪ್ರಕರಣ ನಡೆದಿದೆ.

ಐಟಿ ಆಕ್ಟ್ ನಂತೆ ದಾಖಲಾದ ಪ್ರಕರಣಗಳು:

2018 ರಲ್ಲಿ ಗಿಫ್ಟ್ ಫ್ರಾಡ್ -16 ಪ್ರಕರಣ, ಜಾಬ್ ಫ್ರಾಡ್ -10 ಪ್ರಕರಣ, ಓಟಿಪಿ ಪ್ರಕರಣ -20, ಸಾಮಾಜಿಕ ಜಾಲತಾಣದ ಮೂಲಕ ಅಶ್ಲೀಲ ಫೋಟೋ, ಮೆಸೇಜ್ ಅಪ್ಲೋಡ್- 1 ಪ್ರಕರಣ ಒಟ್ಟು 47 ಪ್ರಕರಣ ದಾಖಲಾಗಿವೆ.

2019 ನೇ ಸಾಲಿನಲ್ಲಿ ಗಿಫ್ಟ್ ಫ್ರಾಡ್ -16 ಪ್ರಕರಣ, ಜಾಬ್ ಫ್ರಾಡ್ -13 ಪ್ರಕರಣ, ಓಟಿಪಿ ಪ್ರಕರಣ -62, ಸಾಮಾಜಿಕ ಜಾಲತಾಣದ ಮೂಲಕ ಅಶ್ಲೀಲ ಫೋಟೋ, ಮೆಸೇಜ್ ಅಪ್ಲೋಡ್- 14 ಪ್ರಕರಣ ಒಟ್ಟು 105 ಪ್ರಕರಣ ದಾಖಲಾಗಿವೆ.

2020 ರಲ್ಲಿ ಗಿಫ್ಟ್ ಫ್ರಾಡ್ -34 ಪ್ರಕರಣ, ಜಾಬ್ ಫ್ರಾಡ್ -02 ಪ್ರಕರಣ, ಓಟಿಪಿ ಪ್ರಕರಣ -29, ಸಾಮಾಜಿಕ ಜಾಲತಾಣದ ಮೂಲಕ ಅಶ್ಲೀಲ ಫೋಟೋ, ಮೆಸೇಜ್ ಅಪ್ಲೋಡ್- 18, ಸೈಬರ್ ಟಿಪ್ ಲೈನ್ -06, ಒಎಲ್​​ಎಕ್ಸ್ ಹಾಗೂ ಇತರೆ ಐಪಿಸಿ 44 ಪ್ರಕರಣ ಸೇರಿ ಒಟ್ಟು 140 ಪ್ರಕರಣ ದಾಖಲಾಗಿವೆ. ಜಿಲ್ಲೆಯಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಹೆಚ್ಚಾಗಿ ರಿಕವರಿ ನಡೆಯುತ್ತಿದ್ದು, ಆರೋಪಿಗಳನ್ನು ಗುರುತಿಸಿ ಬಂಧಿಸುವ ಕಾರ್ಯ ಚೆನ್ನಾಗಿ ನಡೆಸಲಾಗುತ್ತಿದೆ.

ಬ್ಯಾಂಕ್ ಮ್ಯಾನೇಜರ್‌ ಹೆಸರಿನಲ್ಲಿ ಓಟಿಪಿ ಪಡೆದು‌ ಮೋಸ ಮಾಡುವ ಹಾಗೂ‌ ನಿಮ್ಮ ಖಾತೆಗೆ ಕೋಟ್ಯಾಂತರ ರೂ. ಹಣ ಬಂದಿದೆ. ನಮ್ಮ ಖಾತೆಗೆ ಹಣ ಹಾಕಿ ಎಂದು ಮೋಸ ಮಾಡುವವರನ್ನು ಹುಡುಕಿಕೊಂಡು ಹೋದಾಗ ಪೊಲೀಸರಿಗೆ ಅಚ್ಚರಿ ಉಂಟಾಗಿದೆ. ಪೋನ್ ಮಾಡಿ ಮೋಸ ಮಾಡಿದವನ ವಿಳಾಸ ಹುಡುಕಿ ಹೋದಾಗ ಆತ, ಗದ್ದೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಇಲ್ಲಿ ಕೂಲಿ ಕೆಲಸ ಮಾಡುವವರೆ ಹೆಚ್ಚಾಗಿರುತ್ತಾರೆ.

ಜನ ಸಹ ಹಣದ ಆಸೆಗೆ, ವಿದ್ಯಾವಂತರೆ ಮೋಸ ಹೋಗುವುದು ಹೆಚ್ಚಾಗಿದೆ. ಗ್ರಾಮಾಂತರ ಭಾಗದ ವೃದ್ದ ಮಹಿಳೆಯನ್ನು ಟಾರ್ಗೆಟ್ ಮಾಡಿ ಅವರಿಂದ ಬ್ಯಾಂಕ್ ಒಟಿಪಿ ಪಡೆದು ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮೊಬೈಲ್, ಈ‌ ಮೇಲ್ ಮೂಲಕ ಆಮಿಷ ತೋರಿಸಿ ಹಣ ಪಡೆಯುವವರು ಇರುತ್ತಾರೆ. ಸಿಇಎನ್ ಪೊಲೀಸರು ಸೈಬರ್ ಕ್ರೈಂ ನ ಎಲ್ಲಾ ರೀತಿ ಜನರಲ್ಲಿ ಬೀದಿ‌ಬೀದಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.