ಶಿವಮೊಗ್ಗ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ ಬಿನ್ ಡಿ.ರಾಜು ಬಂಧಿತ ಆರೋಪಿ. ಈತ ಮೂಡಲಮನೆ ಅರಣ್ಯ ರಕ್ಷಣಾ ಶಿಬಿರ ಸಿಂಗನ ಬಿದರೆ ಮುಂಭಾಗದಲ್ಲಿ ಅಂದಾಜು 25 ಸಾವಿರ ರೂ. ಮೌಲ್ಯದ 260 ಗ್ರಾಂ ಒಣ ಗಾಂಜಾವನ್ನು ಅಕ್ರಮ ಸಾಗಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕ ಧರ್ಮಪ್ಪ ಕೆ.ಟಿ., ಅಬಕಾರಿ ನಿರೀಕ್ಷಕಿ ಶೀಲಾ ಧಾರಜಕರ್, ಶಿವಮೊಗ್ಗ ವಲಯ-1 ಅಬಕಾರಿ ಉಪ ನಿರೀಕ್ಷಕರಾದ ದಿವ್ಯಾ ಯು. ಮತ್ತು ಹಾಲಾನಾಯ್ಕ್, ಅಬಕಾರಿ ರಕ್ಷಕರಾದ ಕೆಂಪರಾಮು, ಮಧುಸೂಧನ್ ಬಿ.ಸಿ. ಮತ್ತು ಪ್ರಭು ಸಿ ಮತ್ತಿತರ ಅಬಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.