ಶಿವಮೊಗ್ಗ: ಲಾಕ್‌ಡೌನ್ ವೇಳೆ ಆ್ಯಂಬುಲೆನ್ಸ್‌ನಲ್ಲಿ ತಮಗೆ ಬೇಕಾಗಿರುವ ಜನರನ್ನು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಾಗಿಸಿದ ಇಬ್ಬರು ಚಾಲಕರ ವಿರುದ್ಧ ಶಿವಮೊಗ್ಗದ ತುಂಗಾ ನಗರ ಹಾಗೂ ಸೊರಬ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
![cases filed again ambulance drivers](https://etvbharatimages.akamaized.net/etvbharat/prod-images/6776683_98_6776683_1586777709179.png)
ನಿನ್ನೆ ಬೆಂಗಳೂರಿನಿಂದ ಕೆ.ಬಿ.ಮೋಹನ್ ಎಂಬಾತ ತನ್ನ ಆ್ಯಂಬುಲೆನ್ಸ್‌ನಲ್ಲಿ ಅಕ್ರಮವಾಗಿ ಮೂವರನ್ನು ಕರೆ ತಂದಿದ್ದಾನೆ. ಬೆಂಗಳೂರಿನಿಂದ ಸೊರಬದ ಕಾನಕೇರಿಗೆ ಕರೆ ತಂದ ವಿಚಾರ ತಿಳಿದ ಸೊರಬ ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅದೇ ರೀತಿ ಮಾರ್ಚ್ 25ರಂದು ಭದ್ರಾವತಿಯ ಚಾಲಕ ಸಯ್ಯದ್ ಖಾಸಿಂ ಎಂಬಾತ ಬೆಂಗಳೂರಿನಿಂದ ಶಿವಮೊಗ್ಗ ತಾಲೂಕು ಕಡೆಕಲ್ಲು ಗ್ರಾಮಕ್ಕೆ ಜನರನ್ನು ಆ್ಯಂಬುಲೆನ್ಸ್ ಮೂಲಕ ಕರೆ ತಂದಿದ್ದ. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಎರಡೂ ವಾಹನಗಳನ್ನೂ ವಶಕ್ಕೆ ಪಡೆಯಲಾಗಿದೆ.