ETV Bharat / state

ಶಿವಮೊಗ್ಗದಲ್ಲಿ ಹೂವಾಡಿಗ ಮಾದಯ್ಯನವರ ಜಯಂತಿ ಆಚರಣೆ - ಮಾದಯ್ಯನವರ ಜಯಂತಿ

ಶರಣ ಹೂವಾಡಿಗ ಮಾದಯ್ಯನವರ ಜಯಂತಿಯನ್ನು ಜಿಲ್ಲೆಯಲ್ಲಿ ಆಚರಣೆ ಮಾಡಲಾಗಿದ್ದು, ಇವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ ಕಲಾಮೇಳಗಳು ಮತ್ತಷ್ಟು ಮೆರಗು ತಂದವು.

Shivamogga
author img

By

Published : Sep 26, 2019, 4:09 AM IST

ಶಿವಮೊಗ್ಗ: ಶರಣ ಹೂವಾಡಿಗ ಮಾದಯ್ಯನವರ ಜಯಂತಿಯನ್ನು ಜಿಲ್ಲೆಯಲ್ಲಿ ಆಚರಿಸಲಾಯಿತು.

ಶಿವಮೊಗ್ಗದಲ್ಲಿ ಹೂವಾಡಿಗ ಮಾದಯ್ಯನವರ ಜಯಂತಿ ಆಚರಣೆ

ನಗರದ ಪ್ರಮುಖ ರಸ್ತೆಗಳ ಮೂಲಕ ವಿಶೇಷ ಹೂವಿನ ರಥದಲ್ಲಿ ಹೂವಾಡಿಗ ಮಾದಯ್ಯರ ಭಾವಚಿತ್ರದ ಮೆರವಣಿಗೆ ಮಾಡಿಲಾಯಿತು. ಕಲಾಮೇಳಗಳು ಮೆರವಣಿಗೆಗೆ ಮತ್ತಷ್ಟು ಮೆರಗು ತಂದವು. ಭಾವಚಿತ್ರವನ್ನು ನಗರದ ಕುವೆಂಪು ರಂಗಮಂದಿರದಲ್ಲಿ ಇರಿಸಿ ಜಯಂತಿ ಆಚರಿಸಲಾಯಿತು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೂವಾಡಿ ಸಮಾಜವು ಸ್ವಾಭಿಮಾನಿ ಸಮಾಜವಾಗಿದೆ. ಎಲ್ಲಾ ಮಹಾತ್ಮರು ಜಾತಿ, ಧರ್ಮಗಳನ್ನು ಮೀರಿ ಬೆಳೆದವರು. ಶರಣರ ಮಾದಯ್ಯ ಶಿವನ ಎಲ್ಲಾ ಪರೀಕ್ಷೆಗಳನ್ನು ಗೆದ್ದಿದ್ದಾರೆ. ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಸಮಾಜಕ್ಕೆ ಜಾತ್ಯಾತೀತ ತತ್ವ ಸಾರಿದ್ದಾರೆ ಎಂದರು.

ಬಿಜೆಪಿ ಸರ್ಕಾರ ಹಿಂದುಳಿದ ವರ್ಗವನ್ನು ಗುರುತಿಸುವ ಕೆಲಸ ಮಾಡಿದ್ದು, ಹೂವಾಡಿ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿರುವ ಶಿಕಾರಿಪುರದಲ್ಲಿ ಶೀಘ್ರವೇ ಹೂವಾಡಿಗ ಭವನ ನಿರ್ಮಾಣ ಮಾಡಲಾಗುವುದು ಎಂದರು.

Intro:ಶಿವಮೊಗ್ಗ,
ಹೂವಾಡಿಗ ಸಮಾಜ ಅತ್ಯಂತ ಸ್ವಾಭಿಮಾನಿ ಸಮಾಜ .ಸಂಸದ ಬಿ.ವೈ ರಾಘವೇಂದ್ರ

ಶರಣ ಹೂವಾಡಿಗ ಮಾದಯ್ಯನವರ ಜಯಂತಿ ಯನ್ನು ಸಮಾಜದ ಮುಖಂಡರು ಶಿವಮೊಗ್ಗ ನಗರದ ಪ್ರಮುಖ ರಸ್ತೆ ಗಳ ಮೂಲಕ ವಿಶೇಷ ಹೂವಿನ ರಥದಲ್ಲಿ ಹೂವಾಡಿಗ ಮಾದಯ್ಯರ ಭಾವಚಿತ್ರ ವನ್ನ ಹಾಕಿಕೊಂಡು ಡೊಳ್ಳು , ವಾಧ್ಯಗಳ ಮೂಲಕ ಮೆರವಣಿಗೆ ಮೂಲಕ ನಗರದ ಕುವೆಂಪು ರಂಗ ಮಂದಿರ ದಲ್ಲಿ ಜಯಂತಿ ಆಚರಿಸಲಾಯಿತು.
ಸಂಸದ ಬಿ.ವೈ ರಾಘವೇಂದ್ರ ಶರಣ ಹೂವಾಡಿಗ ಮಾದಯ್ಯ ಜಯಂತಿ ಯನ್ನ ಉದ್ಘಾಟಿಸಿದರು.
ನಂತರದಲ್ಲಿ ಮಾತನಾಡಿದ ಅವರು
ಹೂವಾಡಿ ಸಮಾಜ ವು ಸ್ವಾಭಿಮಾನಿ ಸಮಾಜವಾಗಿದೆ ಎಂದರು.
ಎಲ್ಲ ಮಹಾತ್ಮರು ಜಾತಿ ಧರ್ಮಗಳನ್ನು ಮೀರಿ ಬೆಳೆದವರು. ಶರಣರ ಮಾದಯ್ಯ ಶಿವನ ಎಲ್ಲ ಪರೀಕ್ಷೆಗಳನ್ನು ಗೆದ್ದಿದ್ದಾರೆ ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಸಮಾಜಕ್ಕೆ ಜಾತ್ಯತೀತ ತತ್ವ ಸಾರಿದ್ದಾರೆ.
ಬಿಜೆಪಿ ಸರ್ಕಾರ ಹಿಂದುಳಿದ ವರ್ಗವನ್ನು ಗುರುತಿಸುವ ಕೆಲಸ ಮಾಡಿದ್ದು. ಹೂವಾಡಿ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿರುವ ಶಿಕಾರಿಪುರದಲ್ಲಿ ಶಿಘ್ರವೇ ಹೂವಾಡಿಗ ಭವನ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.