ಶಿವಮೊಗ್ಗ: ಸ್ಟಾರ್ ನಟ ಮಗನ ರೇವ್ ಪಾರ್ಟಿಯನ್ನು ನಮ್ಮ ದೇಶದ ಪೊಲೀಸರು ಹಿಡಿದು ಡ್ರಗ್ಸ್ ಹರಡುವುದನ್ನು ತಡೆದಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಮಾದಕ ವಸ್ತುಗಳ ಕುರಿತು ಜನ ಜಾಗೃತಿಗೆ ಚಾಲನೆ ನೀಡಿ ಮಾತನಾಡಿದರು. ಖ್ಯಾತ ಹಿಂದಿ ನಟನ ಮಗ ಎರಡೂ ದಿನಗಳ ಕಾಲ ಮಾದಕ ವಸ್ತುಗಳ ರೇವ್ ಪಾರ್ಟಿ ನಡೆಸುತ್ತಿದ್ದ. ಎರಡೆರಡು ದಿನ ಸಮುದ್ರದ ನಡುವೆ ಪಾರ್ಟಿ ಮಾಡಲು ಹೋಗಿ ಸಿಕ್ಕಿಹಾಕಿಕೊಂಡಿದ್ದಾನೆ. ಟನ್ ಗಟ್ಟಲೆ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದರು.
ಶಿವಮೊಗ್ಗವನ್ನು ಕೂಡ ವ್ಯಸನ ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಾದಕ ವಸ್ತುಗಳ ನಿಗ್ರಹಕ್ಕೆ ಪೊಲೀಸರಿಗೆ ಸಾರ್ವಜನಿಕರು ಕೈ ಜೋಡಿಸಬೇಕು. ಯಾರು ಕೂಡ ಮಾದಕ ವಸ್ತುಗಳ ದಾಸರಾಗಬಾರದು. ಮಾದಕ ವಸ್ತುಗಳು ನಮ್ಮ ವಿದ್ಯಾರ್ಥಿಗಳನ್ನು ಮತ್ತು ಯುವಜನತೆ ಹಾಳು ಮಾಡುತ್ತಿದೆ. ಡ್ರಗ್ಸ್ ಸೇವನೆ ಮಾಡುವವರನ್ನು ಪತ್ತೆ ಹಚ್ಚಲು ಹೊಸ ತಂತ್ರಜ್ಞಾನ ಬಂದಿದೆ ಎಂದು ತಿಳಿಸಿದರು.
ಓದಿ: ನಮ್ಮ ಪಕ್ಷದ ಬಗ್ಗೆ ಮಾತನಾಡಲು ಡಿಕೆಶಿಗೆ ನೈತಿಕತೆಯಿಲ್ಲ: ಕುಮಾರಸ್ವಾಮಿ ತಿರುಗೇಟು