ETV Bharat / state

ಪಿಎಸ್‌ಐ ನೇಮಕಾತಿ ಅಕ್ರಮ: 'ಕಷ್ಟಪಟ್ಟು ಓದಿದವರಿಗೆ ಅನ್ಯಾಯ ಆಗ್ಬಾರ್ದು'- ಆರಗ ಜ್ಞಾನೇಂದ್ರ

ಕಷ್ಟಪಟ್ಟು ಓದಿದವರಿಗೆ ಅನ್ಯಾಯ ಆಗಬಾರದೆಂಬ ದೃಷ್ಟಿಯಿಂದ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ಕುರಿತು ತನಿಖೆಗೆ ಆದೇಶ ಮಾಡಿಸಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Apr 18, 2022, 6:36 PM IST

ಶಿವಮೊಗ್ಗ: ಯಾರು ಕಷ್ಟಪಟ್ಟು ಓದಿದ್ದಾರೋ ಅವರಿಗೆ ಅನ್ಯಾಯ ಆಗಬಾರದೆಂದು ನಾನು ಸಿಒಡಿ ತನಿಖೆಗೆ ಆದೇಶಿಸಿದ್ದೇನೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ. 545 ಪಿಎಸ್ಐ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಅವ್ಯವಹಾರ ಆಗಿದೆ ಎಂದು ಇತ್ತೀಚೆಗೆ ನನ್ನ ಗಮನಕ್ಕೆ ಬಂತು. ನನಗೆ ಒಂದು ಒಎಂಆರ್ ಶೀಟ್ ಸಿಕ್ಕಿತ್ತು. ಅದರಲ್ಲಿ ಆತ 21 ಅಂಕಗಳಿಗೆ ಪರೀಕ್ಷೆ ಬರೆದಿದ್ದ. ಆದರೆ, 100 ಅಂಕ ಬಂದಿತ್ತು.‌ ಇದರಿಂದ ಇದರಲ್ಲಿ ಏನೋ ನಡೆದಿದೆ ಎಂದು ತಕ್ಷಣ ಸಿಎಂ ಗಮನ ಸೆಳೆದು ಸಮಾಲೋಚನೆ ನಡೆಸಿ ತನಿಖೆಗೆ ನಾನೇ ಹಾಕಿಸಿದೆ ಎಂದರು.

ಪಿಎಸ್ಐ ಅಕ್ರಮ ಎಸಗಿರುವ ಗುಲ್ಬರ್ಗಾದ ಸಂಸ್ಥೆಯ ಮಾಲೀಕರ ಮನೆಗೆ ನಾನು ಹೋಗಿದ್ದೆ. ಕಳೆದ ಮೂರು ತಿಂಗಳ ಹಿಂದೆ ಪಕ್ಷದ ಕಾರ್ಯಕ್ರಮಕ್ಕೆ ಹೋದಾಗ ಕಾರ್ಯಕ್ರಮದ ನಂತರ ನಾನು ಐಬಿಗೆ ತೆರಳುವ ಮಾರ್ಗದಲ್ಲಿಯೇ ನಮ್ಮ‌ ಮನೆ ಬನ್ನಿ ಎಂದು ಅವರು ಕರೆದರು. ಆಗ ನಮ್ಮ ಪಕ್ಷದ ಕಾರ್ಯಕರ್ತರು, ನಮ್ಮ ಸ್ಥಳೀಯ ಶಾಸಕರು ಸಹ ಅವರ ಮನೆಗೆ ಹೋಗೋಣ ಎಂದರು. ನಾನು ಅವರ ಮನೆಗೆ ಕೇವಲ ಐದು ನಿಮಿಷ ಮಾತ್ರ ಹೋಗಿದ್ದು ಎಂದರು.

ಪ್ರಿಯಾಂಕ ಖರ್ಗೆಗೆ ತಿರುಗೇಟು: ಪರೀಕ್ಷೆ ತನಿಖೆಯ ವಿಚಾರದಲ್ಲಿ ಪ್ರಿಯಾಂಕ ಖರ್ಗೆ ರಾಜಕೀಯ ಮಾಡಬಾರದು. ಯಾಕಂದ್ರೆ, ಅವರು ನಾನು ಮೂರು ಸಲ ತಪ್ಪು ಉತ್ತರ ನೀಡಿದ್ದೇನೆ ಎಂದು ಹೇಳಿದ್ದಾರೆ. ಹಾಗಾದ್ರೆ ಅವರು ಅಂದೇ ಯಾಕೆ ಪ್ರಶ್ನೆ ಮಾಡಲಿಲ್ಲ ಎಂದರು. ಅಧಿವೇಶನ ನಡೆಯುವಾಗ ನನಗೆ ಅಕ್ರಮ ನಡೆದಿರುವ ಬಗ್ಗೆ ತಿಳಿದಿರಲಿಲ್ಲ. ಅಕ್ರಮ ತಿಳಿದ ಮೇಲೆ ತನಿಖೆಗೆ ನೀಡಲಾಗಿದೆ. ಖರ್ಗೆ ಅವರು ಹೇಳಿದ ಮೇಲೆ ನಾವೇನು ತನಿಖೆಗೆ ನೀಡಿಲ್ಲ ಎಂದರು.

ಇದನ್ನೂ ಓದಿ: ಮಹಾನಾಯಕನ ಬಗ್ಗೆ ನೀವು ಸೀದಾ ಗೋಕಾಕ್‌ಗೆ ಹೋಗಿ ಕೇಳ್ಬೇಕು.. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.