ಶಿವಮೊಗ್ಗ: ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೋಂ ಗಾರ್ಡ್ ಚಿಕಿತ್ಸೆ ಫಲಿಸದೇ ಬಲಿಯಾಗಿದ್ದಾರೆ. ರಿಪ್ಪನ್ಪೇಟೆಯ ನಿವಾಸಿ ಅಬ್ದುಲ್ ಖಾದರ್ (47) ಕೊರೊನಾಗೆ ಬಲಿಯಾದ ಹೋಂ ಗಾರ್ಡ್ ಆಗಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಳೆದ ಐದಾರು ವರ್ಷಗಳಿಂದ ಹೋಂ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತ ಅಬ್ದುಲ್ ಖಾದರ್ ಅವರಿಗೆ ಪತ್ನಿ ಹಾಗೂ ಓರ್ವ ಮಗಳಿದ್ದಾಳೆ.