ETV Bharat / state

ಶಿವಮೊಗ್ಗ ಹಿಂದೂ ಮಹಾ ಮಂಡಳಿ ಗಣಪತಿ ನಿಮಜ್ಜನ ಮೆರವಣಿಗೆ ಪ್ರಾರಂಭ: ಸಾವಿರಾರು ಮಂದಿ ಭಾಗಿ - ಗಣಪತಿಯ ನಿಮಜ್ಜನ ಮೆರವಣಿಗೆ

ಶಿವಮೊಗ್ಗ ಹಿಂದೂ ಮಹಾ ಮಂಡಳಿಯ ಗಣಪತಿಯ ನಿಮಜ್ಜನ ಮೆರವಣಿಗೆ ಸಾಂಸ್ಕೃತಿಕ ಕಲಾ ತಂಡಗಳೂಂದಿಗೆ ಸಾಗಿದೆ.

ಗಣಪತಿ ನಿಮಜ್ಜನ ಮೆರವಣಿಗೆ
ಗಣಪತಿ ನಿಮಜ್ಜನ ಮೆರವಣಿಗೆ
author img

By ETV Bharat Karnataka Team

Published : Sep 28, 2023, 3:36 PM IST

Updated : Sep 28, 2023, 3:43 PM IST

ಶಿವಮೊಗ್ಗ ಹಿಂದೂ ಮಹಾ ಮಂಡಳಿ ಗಣಪತಿ ನಿಮಜ್ಜನ ಮೆರವಣಿಗೆ

ಶಿವಮೊಗ್ಗ : ರಾಜ್ಯದ ಪ್ರಸಿದ್ಧ ಗಣಪತಿಗಳಲ್ಲಿ ಒಂದಾದ ಶಿವಮೊಗ್ಗ ಹಿಂದೂ ಮಹಾಸಭಾದ ಅಂಗ ಸಂಸ್ಥೆಯಾದ ಹಿಂದೂ ಮಹಾ ಮಂಡಳಿಯ ಗಣಪತಿಯ ನಿಮಜ್ಜನ ಮೆರವಣಿಗೆಯು ಪ್ರಾರಂಭವಾಗಿದೆ. ನಗರದ ಭೀಮೇಶ್ವರ ದೇವಾಲಯದಲ್ಲಿ ವಿಶೇಷ ಮಹಾಮಂಗಳಾರತಿ ನಡೆಸುವ ಮೂಲಕ ಮೆರವಣಿಗೆ ಶುರುವಾಯಿತು.

ಮೆರವಣಿಗೆ ಪ್ರಾರಂಭವಾಗುತ್ತಿದ್ದಂತಯೇ ಭಕ್ತರು, ಹೂವಿನ ಹಾರ, ಸೇಬಿನ ಹಾರ ಹಾಕುವುದರ ಮೂಲಕ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಮೆರವಣಿಗೆಯು ಎಸ್​ಪಿಎಂ ರಸ್ತೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ. ಇನ್ನೊಂದೆಡೆ ಬೆಕ್ಕಿನ‌ಕಲ್ಮಠದ ಶ್ರೀ ಮುರುಘಾರಾಜೇಂದ್ರ ಸ್ವಾಮೀಜಿಗಳು, ಆರ್​ಎಸ್​ಎಸ್ ನ ದಕ್ಷಿಣ ಕಾರ್ಯವಾಹ ಪಟ್ಟಭಿ ಅವರು, ಬಿಜೆಪಿ ಶಾಸಕ ಎಸ್​ ಎನ್​ ಚನ್ನಬಸಪ್ಪ, ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಮುಖಂಡರಾದ ಶ್ರೀಕಾಂತ್, ರಮೇಶ್, ಜೆಡಿಎಸ್​ನ ಪ್ರಸನ್ನ ಕುಮಾರ್, ಮೇಯರ್ ಶಿವಕುಮಾರ್ ಸೇರಿದಂತೆ ಅನೇಕ ಮುಖಂಡರು ಆಗಮಿಸಿ ಗಣಪನ ದರ್ಶನ ಪಡೆದುಕೊಂಡರು.

ಮೆರವಣಿಗೆಯಲ್ಲಿ ಗಣಪನ ಹಿಂದೆ ಅಖಂಡ ಭಾರತ, ಹಾಗೂ ಹಿಂದೂ ಮಹಾಸಭಾದ ಸಂಸ್ಥಾಪಕ ವೀರ ಸಾವರ್ಕರ್​ ಭಾವಚಿತ್ರ ವಿಶೇಷವಾಗಿತ್ತು. ಅಲ್ಲದೆ, ವಿವಿಧ ಸಾಂಸ್ಕೃತಿಕ ಕಲಾ ತಂಡಗಳೂಂದಿಗೆ ಯುವಕ- ಯುವತಿಯರು ಭರ್ಜರಿ ಡ್ಯಾನ್ಸ್ ಎಲ್ಲರ ಗಮನ ಸೆಳೆದಿದೆ. ಇನ್ನು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರ ಸರ್ಪಗಾವಲು ಇದೆ. ಸುಮಾರು ಎರಡು ಸಾವಿರ ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ನೀರು, ಪ್ರಸಾದದ ವ್ಯವಸ್ಥೆ : ಮೆರವಣಿಗೆ ಸಾಗುವ ದಾರಿಯಲ್ಲಿ ವಿವಿಧ ಸಂಘ ಸಂಸ್ಥೆಗಳು ನೀರು ಪ್ತಸಾದದ ವ್ಯವಸ್ಥೆಯನ್ನು ಮಾಡಿದ್ದಾರೆ. ಕೆಲವರು ಸಿಹಿ ಹಂಚುತ್ತಿದ್ದರು. ಅದೇ ರೀತಿ ಶಿವಮೊಗ್ಗದ ಜೈನ ಸಮಾಜದ ವತಿಯಿಂದ ಎಸ್​ಪಿ‌ಎಂ ರಸ್ತೆಯ ಆದಿನಾಥ ಜೈನ ಮಂದಿರದಲ್ಲಿ ಭಕ್ತರಿಗಾಗಿ ಪ್ರಸಾದವನ್ನು ಏರ್ಪಡಿಸಿದ್ದು, ಇಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಕ್ತರಿಗಾಗಿ ಪುಳಿವೊಗರೆ, ಮೆಣಸಿನಕಾಯಿ ಬೋಂಡ, ಮೈಸೂರು ಪಾಕ್​ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜೈನ ಸಮಾಜದ ಅಧ್ಯಕ್ಷ ಮದನ್ ಲಾಲ್ ತಿಳಿಸಿದ್ದಾರೆ.

ಭದ್ರಾವತಿ ಗಣಪತಿಯ ನಿಮಜ್ಜನ : ಭದ್ರಾವತಿ ಪಟ್ಟಣದ ಹಿಂದೂ ಮಹಾಸಭಾ ಸಮಿತಿ ಪ್ರತಿಷ್ಠಾಪಿಸಿದ್ದ ಗಣಪತಿಯ ನಿಮಜ್ಜನ ಅತ್ಯಂತ ಮಂಗಳವಾರ ಶಾಂತಿಯುತವಾಗಿ ಜರುಗಿತ್ತು. ಭದ್ರಾವತಿ ಪಟ್ಟಣದ ಹೊಸಮನೆ ಬಡಾವಣೆಯಿಂದ ಪ್ರಾರಂಭವಾದ ನಿಮಜ್ಜನ ಮೆರವಣಿಗೆಯು ರಂಗಪ್ಪ‌ ವೃತ್ತದ ಮೂಲಕ ಭದ್ರಾ ನದಿ ಸೇತುವೆ, ಅಂಡರ್ ಬ್ರಿಡ್ಜ್ ವೃತ್ತ, ಹುತ್ತಾ ಕಾಲೋನಿಯ ತನಕ ಸಾಗಿತ್ತು. ಇಲ್ಲಿನ ಪ್ರಾರ್ಥನಾ ಮಂದಿರದ ಮುಂದೆ ಪೊಲೀಸರು ಬಿಗಿ ಬಂದೋಬಸ್ತ್​ ವ್ಯವಸ್ಥೆ ಮಾಡಿದ್ದರು. ನಗರಸಭೆ ಮುಂದೆ ಸಾಗಿದ ಗಣಪನನ್ನು, ಇಲ್ಲಿನ ಭದ್ರಾ ನದಿಯಲ್ಲಿ ನಿಮಜ್ಜನ ಮಾಡಲಾಯಿತು. ಮೆರವಣಿಗೆಯ ದಾರಿಯುದ್ದಕ್ಕೂ ವಿವಿಧ ಯುವಕರ ಸಂಘಗಳು ಅನ್ನ ಸಂತರ್ಪಣೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಇದನ್ನೂ ಓದಿ : ಶಾಂತಿಯುತವಾಗಿ ನಡೆದ ಭದ್ರಾವತಿ ಹಿಂದೂ ಮಹಾಸಭ ಗಣಪತಿ ನಿಮಜ್ಜನ: ಅಪಾರ ಸಂಖ್ಯೆಯ ಭಕ್ತರು ಭಾಗಿ

Last Updated : Sep 28, 2023, 3:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.