ETV Bharat / state

ಸಾಗುವಳಿ ಹಕ್ಕುಪತ್ರ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಾಲ್ಕುಣಿ ಗ್ರಾಮಸ್ಥರ ಪ್ರತಿಭಟನೆ - ಹಾಲ್ಕುಣಿ ಗ್ರಾಮಸ್ಥರಿಂದ ಸಾಗುವಳಿ ಹಕ್ಕುಪತ್ರಕ್ಕಾಗಿ ಪ್ರತಿಭಟನೆ

ಶಿವಮೊಗ್ಗ ತಾಲೂಕಿನ ತುಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಲ್ಕುಣಿ ಗ್ರಾಮಸ್ಥರು ತಮಗೆ ಸಾಗುವಳಿ ಹಕ್ಕುಪತ್ರ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಹಾಲ್ಕುಣಿ ಗ್ರಾಮಸ್ಥರಿಂದ ಪ್ರತಿಭಟನೆ
author img

By

Published : Nov 19, 2019, 2:06 PM IST

ಶಿವಮೊಗ್ಗ: ತಾಲೂಕಿನ ತುಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಲ್ಕುಣಿ ಗ್ರಾಮಸ್ಥರು ತಮಗೆ ಸಾಗುವಳಿ ಹಕ್ಕುಪತ್ರ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಸಾಗುವಳಿ ಹಕ್ಕುಪತ್ರ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಾಲ್ಕುಣಿ ಗ್ರಾಮಸ್ಥರಿಂದ ಪ್ರತಿಭಟನೆ

ಹಾಲ್ಕುಣಿ ಗ್ರಾಮದಲ್ಲಿ ವಾಸ ಮಾಡುತ್ತಿರುವ ಶರಾವತಿ ಮುಳುಗಡೆ ಸಂತ್ರಸ್ತರು ಈ ಗ್ರಾಮಕ್ಕೆ ವಲಸೆ ಬಂದು ಸುಮಾರು ಐದು ದಶಕಗಳೇ ಕಳೆದಿವೆ. ಆದ್ರೆ, ಮುಳುಗಡೆ ಪ್ರದೇಶದ ಗ್ರಾಮಸ್ಥರಿಗೆ ಭೂಮಿಯ ಹಕ್ಕುಪತ್ರ ನೀಡದೆ ಜಿಲ್ಲಾಡಳಿತ ನಿರಾಶ್ರಿತರನ್ನು ಕಡೆಗಣಿಸುತ್ತಿದೆ. ಕಳೆದ ಐವತ್ತು ವರ್ಷಗಳಿಂದ ಭೂಮಿಯ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುವುದರ ಜೊತೆಗೆ ಅದೆಷ್ಟೋ ಬಾರಿ ಮನವಿ ಮಾಡಿದರೂ‌ ಸಹ ಯಾವುದೇ ಪ್ರಯೋಜನವಾಗಿಲ್ಲ. ತುಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇತರೆ ಗ್ರಾಮಗಳಲ್ಲಿ ಬಗರ್ ಹುಕುಂ ಹಕ್ಕುಪತ್ರ ನೀಡಲಾಗಿದೆ. ಆದರೆ ನಮಗೆ ಹಕ್ಕುಪತ್ರ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹಕ್ಕುಪತ್ರ ಇನ್ನೇನು ಬಂತು ಎನ್ನುವಷ್ಟರಲ್ಲಿ ಉಪ ಚುನಾವಣೆ ಬಂದ ಕಾರಣ ಹಕ್ಕುಪತ್ರ ನೀಡಲಿಲ್ಲ. ಈಗಲಾದರೂ ನಮಗೆ ಭೂಮಿ ಉಳುಮೆ ಮಾಡಿಕೊಳ್ಳಲು ಜಮೀನಿನ ಹಕ್ಕುಪತ್ರ ನೀಡಿ ಎಂದು ಒತ್ತಾಯಿಸಿದ್ದಾರೆ.

Intro:ಬಗರ್ ಹುಕುಂ ಹಕ್ಕು ಪತ್ರಕ್ಕಾಗಿ ಒಂದು ಗ್ರಾಮವೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ. ಶಿವಮೊಗ್ಗ ತಾಲೂಕು ತುಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಲ್ಕುಣಿ ಗ್ರಾಮಸ್ಥರು ತಮ್ಮ ಗ್ರಾಮದವರು ತಮಗೆ ಸಾಗುವಳಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಹಾಲ್ಕುಣಿ ಗ್ರಾಮದಲ್ಲಿ ವಾಸ ಮಾಡುತ್ತಿರುವವರು ಶರಾವತಿ ಮುಳುಗಡೆ ಸಂತ್ರಸ್ತರು. ಇವರು ಈ ಗ್ರಾಮಕ್ಕೆ ಬಂದು ಸುಮಾರು ಐದು ದಶಕಗಳಿ ಕಳೆದಿವೆ.

Body:ಇಂತಹ ಮುಳುಗಡೆ ಪ್ರದೇಶದ ಗ್ರಾಮಸ್ಥರಿಗೆ ಹಕ್ಕುಪತ್ರ ನೀಡದೆ ಜಿಲ್ಲಾಡಳಿತ ನಿರಾಶ್ರಿತರನ್ನು ಕಡೆಗಣಿಸುತ್ತಿದೆ. ಕಳೆದ ಐವತ್ತು ವರ್ಷಗಳಿಂದ ಭೂಮಿಯ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುವುದರ ಜೊತೆಗೆ ಮನವಿ ಮಾಡಿದರೂ‌ ಸಹ ಯಾವುದೇ ಪ್ರಯೋಜನವಾಗಿಲ್ಲ. ತುಪ್ಪೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಇತರೆ ಗ್ರಾಮಗಳಲ್ಲಿ ಬಗರ್ ಹುಕುಂ ಹಕ್ಕುಪತ್ರ ನೀಡಲಾಗಿದೆ. ಆದರೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ.

Conclusion:ಹಕ್ಕುಪತ್ರ ಇನ್ನೆನೂ ಬಂತು ಎನ್ನುವಷ್ಟರಲ್ಲಿ ಚುನಾವಣೆ ಬಂದು ಹಕ್ಕುಪತ್ರ ನೀಡಲಿಲ್ಲ. ಈಗಲಾದರೂ ನಮಗೆ ಭೂಮಿ ಉಳುಮೆ ಮಾಡಿಕೊಳ್ಳಲು ಹಕ್ಕುಪತ್ರ ನೀಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹಾಲ್ಕುಣಿ ಗ್ರಾಮದಲ್ಲಿ 40 ಕುಟುಂಬಗಳು ಮಾತ್ರ ವಾಸ ಮಾಡುತ್ತಿವೆ. ನಮಗೆ ಅದಷ್ಟು ಬೇಗ ಹಕ್ಕುಪತ್ರ ನೀಡಿ ಎಂದು ಗ್ರಾಮಸ್ತರು ಆಗ್ರಹಿಸಿದ್ದಾರೆ.

ಬೈಟ್: ರಾಘವೇಂದ್ರ. ಗ್ರಾಮಸ್ಥ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.