ಬೈಕ್ ಮಾರಾಟದ ಹಣ ಕೇಳಿದ್ದಕ್ಕೆ ನಡು ರಸ್ತೆಯಲ್ಲೇ ಗನ್ ತೋರಿಸಿ ಬೆದರಿಕೆ: ಆರೋಪಿ ಅಂದರ್.. - ಅಣ್ಣಾ ನಗರದ ನಿವಾಸಿ ಮೊಹಮ್ಮದ್ ರಿಯಾಬ್
ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್ನ್ನು ಇನ್ನೊಬ್ಬರಿಗೆ ಮಾರಿ ಅದರ ಹಣ ಕೇಳಿದ್ದಕ್ಕೆ ಖರೀದಿದಾರ ನಡು ರಸ್ತೆಯಲ್ಲಿಯೇ ಗನ್ ತೋರಿಸಿ ಬೆದರಿಸಿದ ಘಟನೆ ನಡೆದಿದೆ.
ಶಿವಮೊಗ್ಗ: ಬೈಕ್ ಖರೀದಿ ಮಾಡಿದವನ ಬಳಿ ಬೈಕಿನ ಮಾಲೀಕ ಹಣ ಕೇಳಿದ್ದಕ್ಕೆ ನಡು ರಸ್ತೆಯಲ್ಲಿ ಗನ್ ತೋರಿಸಿ ಬೆದರಿಸಿದವ ಪೊಲೀಸರ ಅತಿಥಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಆರೋಪಿ ಸೆಂಕಡ್ ಹ್ಯಾಂಡ್ ಬೈಕ್ ಖರೀದಿ ಮಾಡಿದ್ದು,ಈತನಿಗೆ ಬೈಕ್ ನೀಡಿದ ಮಾಲೀಕ ಬೈಕ್ನ ಹಣ ಕೇಳಿದ್ದಕ್ಕೆ ನಡು ರಸ್ತೆಯಲ್ಲಿ ಗನ್ ತೋರಿಸಿದ್ದಾನೆ. ಈತನಿಂದ ಕಂಟ್ರಿಮೇಡ್ ಪಿಸ್ತೂಲ್, ಏರ್ ಗನ್ ಬುಲೆಟ್ ಹಾಗೂ 100 ಎಂ ಎಲ್ ನ ಡ್ರಗ್ ಮಿಶ್ರಿತವಾದ ಮೋನೋಕಾಫ್ ಪ್ಲೆಸ್ ನ ಒಟ್ಟು 156 ಬಾಟಲಿಗಳನ್ನು ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಗನ್ ತೋರಿಸಿದ ಘಟನೆಯ ವಿವರ: ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣಾ ನಗರದ ನಿವಾಸಿ ಮೊಹಮ್ಮದ್ ರಿಯಾಬ್(24) ತನಗೆ ಪರಿಚಯದವನಾದ ಅಜರ್(26) ಗೆ ತನ್ನ ದ್ವಿ ಚಕ್ರ ವಾಹನವನ್ನು ಮಾರಾಟ ಮಾಡಿರುತ್ತಾನೆ. ಅಜರ್ ರಿಯಾಬ್ಗೆ ಹಣ ನೀಡದೇ ಸತಾಯಿಸುತ್ತಿರುತ್ತಾನೆ. ಇದರಿಂದ ಏಪ್ರಿಲ್ 8 ರಂದು ರಿಯಾನ್ ಅಜರ್ ನಗರದ ಇಲಿಯಾಜ್ ನಗರಸ ನ್ಯಾಮತ್ ಶಾದಿ ಮಹಲ್ ಬಳಿ ಸಿಗುತ್ತಾನೆ. ಈ ವೇಳೆ ರಿಯಾಬ್ ಅಜರ್ಗೆ ಬೈಕ್ ಹಣ ನೀಡುವಂತೆ ಕೇಳುತ್ತಾನೆ.
ಇದರಿಂದ ಕೋಪಗೊಂಡ ಅಜರ್ ರಿಯಾಬ್ ಗೆ ಥಳಿಸುತ್ತಾನೆ. ನಂತರ ತನ್ನ ಬಳಿ ಇದ್ದ ಗನ್ ತೆಗೆದು ತಲೆ ಹಾಗೂ ಬೆನ್ನಿಗೆ ಮಾರಾಣಾಂತಿಕ ಹಲ್ಲೆ ನಡೆಸಿದ್ದೂ ಅಲ್ಲದೆ ಗನ್ ನಿಂದ ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾನೆ. ಇದರಿಂದ ಹಲ್ಲೆಗೆ ಒಳಗಾದ ರಿಯಾಬ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗುತ್ತಾರೆ. ನಂತರ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಾರಾಣಾಂತಿಕ ಕಾಯ್ದೆ ಅಡಿ ಪ್ರಕರಣ ದಾಖಲಾಗುತ್ತದೆ.
ಪ್ರಕರಣ ದಾಖಲಿಸಿಕೊಂಡ ದೊಡ್ಡಪೇಟೆ ಪೊಲೀಸರು ತನಿಖೆ ಪ್ರಾರಂಭಿಸಿ, ಅಜರ್ ನನ್ನು ಬಂಧಿಸಿದ್ದಾರೆ. ಬಂಧಿಸಿ ವಿಚಾರಣೆ ನಡೆಸಿದಾಗ ತಾನು ಮಾರಾಕಾಸ್ತ್ರ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರಕರಣ ತನಿಖೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ಅಂಜನ್ ಕುಮಾರ್ ಪಿಎಸ್ಐ ವಸಂತ ಕುಮಾರ್, ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಮಂಜುನಾಥ್, ದೊಡ್ಡಪೇಟೆ ಎಎಸ್ಐ ಚೂಡಾಮಣಿ, ಪಿಸಿ ರಮೇಶ್, ರೌಡಿ ನಿಗ್ರಹ ದಳದ ಹಾಲಪ್ಪ, ಅಶೋಕ್, ಮನೋಹರ್, ಗುರುನಾಯ್ಕ್, ನಾಗಪ್ಪ, ಹರೀಶ್ ನಾಯ್ಕ್ ,ವಸಂತ, ರಮೇಶ್, ಆಕಾಶ್, ಶರತ್ ಹಾಗೂ ತಮ್ಮಣ್ಣ ಭಾಗಿಯಾಗಿದ್ದರು. ತಂಡಕ್ಕೆ ಎಸ್ಪಿ ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ.
ಶಿವಮೊಗ್ಗ-ದಾಖಲೆ ಇಲ್ಲದ 30.64 ಲಕ್ಷ ರೂ ವಶಕ್ಕೆ; ಚುನಾವಣೆ ರಂಗು ಇನ್ನೂ ಏರದೇ ಇದ್ದರೂ ದಾಖಲೆ ಇಲ್ಲದ ಹಣದ ಹರಿವು ರೇಸ್ನಲ್ಲಿ ಓಡಾಟ ನಡೆಸುತ್ತಿದೆ. ಇದೇ ರೀತಿ ದಾಖಲೆ ಇಲ್ಲದ ಸುಮಾರು 30.64 ಲಕ್ಷ ರೂ ಗಳನ್ನು ಪೊಲೀಸರು ಚೆಕ್ ಪೊಸ್ಟ್ನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಯ ಚೆಕ್ ಪೊಸ್ಟ್ನಲ್ಲಿ ಸೂಕ್ತ ದಾಖಲೆ ಇಲ್ಲದ ಸುಮಾರು 27.60 ಲಕ್ಷ ರೂಗಳನ್ನು ತಪಾಸಣೆ ವೇಳೆ ವಶಕ್ಕೆ ಪಡೆಯಲಾಗಿದೆ.
ಅದೇ ರೀತಿ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚೆಕ್ ಪೊಸ್ಟ್ ನಲ್ಲಿ ಸೂಕ್ರ ದಾಖಲೆ ಇಲ್ಲದ ಸುಮಾರು 1.79 ಲಕ್ಷ ರೂಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಚೆಕ್ ಪೋಸ್ಟ್ನಲ್ಲಿ ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 1.25 ನ್ನು ಸೀಜ್ ಮಾಡಲಾಗಿದೆ. ಒಟ್ಟಾರೆ ಚುನಾವಣೆಯ ಚೆಕ್ ಪೊಸ್ಟ್ ನಲ್ಲಿ ನಿತ್ಯ ಕೋಟ್ಯಂತರ ರೂ. ಓಡಾಡುತ್ತಿರುವುದು ಪೊಲೀಸರ ಪರಿಶೀಲನೆಯಿಂದ ಕಂಡು ಬರುತ್ತಿದೆ.
ಇದನ್ನೂ ಓದಿ: ಹಾವೇರಿ, ಬೆಳಗಾವಿಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಮದ್ಯ, ಲಕ್ಷಗಟ್ಟಲೆ ಹಣ ವಶ