ETV Bharat / state

ಕರ್ಫ್ಯೂ ಮಾದರಿಯ ಸಂಪೂರ್ಣ ಲಾಕ್​ಡೌನ್​ಗೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ - ಲಾಕ್​ಡೌನ್​ಗೆ ಉತ್ತಮ ಪ್ರತಿಕ್ರಿಯೆ

ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಲಾಕ್​ಡೌನ್​ ಜಾರಿ ಇರುವುದರಿಂದ ವಾಹನ ಸಂಚಾರ ತಡೆಗೆ ಶಿವಮೊಗ್ಗದ ಪ್ರಮುಖ ರಸ್ತೆ, ಸರ್ಕಲ್​ಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಹಾಗಾಗಿ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿದೆ.

Good response in Shimoga for a full day of lockdown.
ಒಂದು ದಿನದ ಸಂಪೂರ್ಣ ಲಾಕ್​ಡೌನ್​ಗೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ
author img

By

Published : May 24, 2020, 6:23 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಒಂದು ದಿನದ ಸಂಪೂರ್ಣ ಲಾಕ್​ಡೌನ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನರ ಸಂಚಾರ ಸಂಪೂರ್ಣ ತಗ್ಗಿದೆ. ಅಗತ್ಯ ವಸ್ತು ಖರೀದಿ ಹೊರತುಪಡಿಸಿ ಬೇರೆ ಕಾರಣಕ್ಕೆ ಜನರು ಹೊರ ಬರುತ್ತಿಲ್ಲ.

ಪ್ರಮುಖ ರಸ್ತೆ, ಸರ್ಕಲ್​ನಲ್ಲಿ ಬ್ಯಾರಿಕೇಡ್:

ವಾಹನ ಸಂಚಾರ ತಡೆಗೆ ನಗರದ ಪ್ರಮುಖ ರಸ್ತೆ, ಸರ್ಕಲ್​ಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಹಾಗಾಗಿ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿದೆ. ಗೋಪಿ ಸರ್ಕಲ್, ಅಮೀರ್ ಅಹಮದ್ ರಸ್ತೆ, ಸರ್.ಎಂ.ವಿ ರಸ್ತೆಯಲ್ಲಿ ಬ್ಯಾರಿಕೇಡ್​ಗಳನ್ನು ಹಾಕಲಾಗಿದೆ. ಇನ್ನು ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಲಾಕ್​ಡೌನ್​ ಜಾರಿಯಿಂದ ಜಿಲ್ಲೆಯ ಕೆಎಸ್ಆರ್​ಟಿಸಿ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದ್ದು, ಬಸ್ ಸಂಚಾರ ಸ್ಥಗಿತವಾಗಿರುವುದರಿಂದ ನಿಲ್ದಾಣದಲ್ಲಿ ಒಂದು ಬಸ್ ಸಹ ಕಂಡುಬರಲಿಲ್ಲ.

Good response in Shimoga for a full day of lockdown.
ಕರ್ಫ್ಯೂ ಮಾದರಿಯ ಸಂಪೂರ್ಣ ಲಾಕ್​ಡೌನ್​ಗೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ

ಮಟನ್, ಚಿಕನ್, ಮೀನು ಖರೀದಿ ಜೋರು:

ಮಟನ್, ಚಿಕನ್, ಮೀನು ಖರೀದಿಗೆ ಅವಕಾಶವಿತ್ತು. ಹಾಗಾಗಿ ಬೆಳಗ್ಗೆಯಿಂದ ನಗರದ ವಿವಿಧ ಅಂಗಡಿಗಳಲ್ಲಿ ಖರೀದಿ ಜೋರಾಗಿತ್ತು. ಕೆಲವು ಕಡೆ ಸಾಮಾಜಿಕ ಅಂತರ ಕಣ್ಮರೆಯಾಗಿದ್ದರೂ, ಖರೀದಿ ನಿರಂತರವಾಗಿತ್ತು. ಸಿಟಿಯಲ್ಲಿ ಜನ ಸಂಚಾರವನ್ನು ನಿಯಂತ್ರಿಸುವ ಸಲುವಾಗಿ ನಗರದಾದ್ಯಂತ ಪೊಲೀಸರನ್ನು ನಿಯೋಜಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.