ETV Bharat / state

ಶಿವಮೊಗ್ಗ: ಕಾಡುಕೋಣ ದಾಳಿ, ಮಹಿಳೆಗೆ ಗಂಭೀರ ಗಾಯ - ಮಹಿಳೆ ಮೇಲೆ ಕಾಡುಕೋಣ ದಾಳಿ

ಕೂಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಮಹಿಳೆ ಮೇಲೆ ಕಾಡುಕೋಣ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಹೊಸನಗರದಲ್ಲಿ ನಡೆದಿದೆ.

Gaur attack on woman at Hosanagara
ಜಯಮ್ಮ- ಗಾಯಗೊಂಡ ಮಹಿಳೆ
author img

By

Published : Oct 5, 2022, 10:06 AM IST

ಶಿವಮೊಗ್ಗ: ಮಹಿಳೆ ಮೇಲೆ ಕಾಡುಕೋಣ ದಾಳಿ ನಡೆಸಿರುವ ಘಟನೆ ಹೊಸನಗರ ತಾಲೂಕು ಅರಮನೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಕೋಡು ಗ್ರಾಮದ ಜಯಮ್ಮ(45) ಗಂಭೀರ ಗಾಯಗೊಂಡಿರುವ ಮಹಿಳೆ.

ಕೂಲಿ‌ ಕೆಲಸಕ್ಕೆಂದು ಹೋಗುವಾಗ ಏಕಾಏಕಿ ಕಾಡುಕೋಣ ದಾಳಿ ನಡೆಸಿದೆ ಎನ್ನಲಾಗಿದೆ. ದಾಳಿಯಿಂದ ಜಯಮ್ಮ ಅವರ ಎಡಗೈ ಮುರಿದಿದೆ. ಅಲ್ಲದೇ ಜೋರಾಗಿ ನೆಲಕ್ಕೆ ಬಿದ್ದ ಪರಿಣಾಮ ಹೊಟ್ಟೆ ಹಾಗೂ ಕೈ ಕಾಲಿಗೆ ಗಾಯವಾಗಿದೆ.

ಗಾಯಗೊಂಡ ಜಯಮ್ಮ ಅವರನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆಯ ನಂತರ ಮಂಗಳೂರು ಸುರತ್ಕಲ್​​ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿ ಸಂಜಯ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ತೋಟಕ್ಕೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕಾಡುಕೋಣ‌ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.