ETV Bharat / state

ಮಲೆನಾಡಿನ ಪ್ರವಾಸಿ ತಾಣಗಳ ಸೌಂದರ್ಯ ಹಾಳು ಮಾಡುತ್ತಿರುವ ಕಸದ ರಾಶಿಗಳು

author img

By

Published : Oct 6, 2020, 10:05 PM IST

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ತಮ್ಮ ಮನೋರಂಜನೆಗಾಗಿ ಆಗಮಿಸುತ್ತಾರೆ. ಹೀಗೆ ಬರುವಾಗ ತಮ್ಮ ಜೊತೆ ಕಸವನ್ನು ಸಹ ತರುತ್ತಾರೆ. ಈ ಕಸಗಳು ಪ್ರವಾಸಿ ತಾಣದ ಸೌಂದರ್ಯವನ್ನೇ ಹಾಳು ಮಾಡುತ್ತದೆ.

Trash piles are ruining the beauty of tourist destinations
ಪ್ರವಾಸಿ ತಾಣಗಳ ಸೌಂದರ್ಯ ಹಾಳು ಮಾಡುತ್ತಿರುವ ಕಸದ ರಾಶಿಗಳು

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಇದರಲ್ಲಿ ಜಗತ್ ಪ್ರಸಿದ್ಧ ಜೋಗ ಸಹ ಒಂದು. ಜೋಗ ಸೇರಿದಂತೆ ಸಕ್ರೆಬೈಲು ಆನೆ ಬಿಡಾರ, ಹುಲಿ ಮತ್ತು ಸಿಂಹಧಾಮ, ಮಂಡಗದ್ದೆ ಪಕ್ಷಿಧಾಮ,‌ ದಕ್ಷಿಣ ಭಾರತದ ಚಿರಾಪುಂಜಿ ಆಗುಂಬೆ, ಕೆಳದಿ, ಇಕ್ಕೆರಿ,‌ ತುಂಗಾಭದ್ರಾ ನದಿ ಸಂಗಮದ ಕೊಡಲಿ ಹೀಗೆ ಹಲವು ಪ್ರವಾಸಿ ತಾಣಗಳಿವೆ.

ಈ ಎಲ್ಲಾ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಭೇಟಿ ಇದ್ದೇ ಇರುತ್ತದೆ. ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು, ತಮ್ಮ ಮನೋರಂಜನೆಗಾಗಿ ಆಗಮಿಸುತ್ತಾರೆ. ಹೀಗೆ ಬರುವಾಗ ತಮ್ಮ ಜೊತೆ ಕಸವನ್ನು ಸಹ ತರುತ್ತಾರೆ. ಈ ಕಸಗಳು ಪ್ರವಾಸಿ ತಾಣದ ಸೌಂದರ್ಯವನ್ನೇ ಹಾಳು ಮಾಡುತ್ತದೆ.

ಪ್ಲಾಸ್ಟಿಕ್ ಹಾವಳಿಯೇ ಹೆಚ್ಚು

ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ತಮ್ಮ ಜೊತೆ ಅಂಗಡಿಗಳಲ್ಲಿ ಸಿಗುವ ಚಿಪ್ಸ್, ಜ್ಯೂಸ್ ಬಾಟಲಿ, ನೀರಿನ ಬಾಟಲಿಗಳನ್ನು ತರುತ್ತಾರೆ. ಕೆಲ ಹೊತ್ತು ಪ್ರವಾಸಿ ತಾಣದಲ್ಲಿ ಕುಳಿತು ಅಲ್ಲಿನ ವಿಶೇಷತೆಯನ್ನು ಗಮನಿಸಿ, ತಾವು ತಂದು ತಿಂಡಿ ತಿಂದು ಅದರ ರ್ಯಾಪರ್ ಅನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ.

ಡಿಎಫ್ಒ ಐ.ಎಂ. ನಾಗರಾಜ್

ಎಲ್ಲಾ ಪ್ರವಾಸಿ ತಾಣದಲ್ಲಿ ಕಸವನ್ನು ಹಾಕಲು ಒಂದು ಜಾಗವನ್ನು‌ ನಿಗದಿ ಮಾಡಿರಲಾಗಿರುತ್ತದೆ. ಇದನ್ನು ಮರೆತ ಪ್ರವಾಸಿಗರು ತಾವು ಕುಳಿತ ನಿಂತ ಜಾಗದಲ್ಲೇ ಕಸವನ್ನು ಹಾಕಿ ಹೊರಟು ಬಿಡುತ್ತಾರೆ. ಇದರಿಂದ ಪ್ರವಾಸಿ ತಾಣಗಳು‌ ಕಸದ ರಾಶಿಯಾಗಿ ಮಾರ್ಪಡಾಗುತ್ತಿವೆ.

ಕಸದ ರಾಶಿಗೆ ಉದಾಹರಣೆ ಮಂಡಗದ್ದೆ ಪಕ್ಷಿಧಾಮ

ಪ್ರತಿಯೊಂದು ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರು ತಮ್ಮ ‌ಜೊತೆಗಿನ ಕಸವನ್ನು‌ ತೆಗೆದುಕೊಂಡು ಹೋಗದೆ, ಅಲ್ಲಿಯೇ‌ ಬಿಟ್ಟು ಹೋಗುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಅಂದರೆ, ಅದು ಜಿಲ್ಲೆಯ ಮಂಡಗದ್ದೆ ಪಕ್ಷಿಧಾಮ. ಇದು ಮಂಗಳೂರು - ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ 169(A) ಪಕ್ಕದಲ್ಲಿಯೇ ಇದೆ. ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮದ ನಿರ್ಲಕ್ಷ್ಯದಿಂದಾಗಿ ಇಲ್ಲಿ ಸ್ವಚ್ಚತೆಯೇ ಮಯಾವಾಗಿದೆ. ಇಲ್ಲಿ ಕಸದ ರಾಶಿ ತುಂಬಿ ಹೋಗಿದೆ. ಇದರಿಂದ ಪ್ರವಾಸಿಗರು ಸಹ ಬಾರದ ಪರಿಸ್ಥಿತಿ ಇದೆ. ಇಲ್ಲಿ ಕಸದ ಜೊತೆಗೆ ಮದ್ಯದ ಬಾಟಲಿಗಳು ಇವೆ. ಈ ಬಗ್ಗೆ ಸ್ಥಳೀಯರು ದೂರು‌ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇನ್ನೂ ಸಕ್ರೆಬೈಲು ಆನೆ ಬಿಡಾರ, ಹುಲಿ ಮತ್ತು ಸಿಂಹಧಾಮ ಸೇರಿದಂತೆ ಉಳಿದ ಎಲ್ಲಾ ಪ್ರವಾಸಿ ತಾಣಗಳಲ್ಲಿ ಲಾಕ್​​ಡೌನ್​ನಿಂದ ಪ್ರವಾಸಿಗರು ಕಡಿಮೆ ಸಂಖ್ಯೆಯಲ್ಲಿ ಬಂದಿರುವ ಕಾರಣ, ಕಸದ ಪ್ರಮಾಣ ಸಹ ಕಡಿಮೆಯಾಗಿದೆ. ಜನರ ಪ್ರವೇಶ ಎಲ್ಲಿ ಇರುವುದಿಲ್ಲವೋ ಅಲ್ಲಿ ಕಸ ಬೀಳುವುದು ಕಡಿಮೆ ಎನ್ನಬಹುದು. ಪ್ರವಾಸಿ ತಾಣಗಳಲ್ಲಿ‌ ಕಸದ ಡಬ್ಬಿಯನ್ನಿಟ್ಟರೂ ಸಹ ಯಾವುದೆ ಪ್ರಯೋಜನವಾಗಿಲ್ಲ.‌

ಪ್ರವಾಸಿಗರಿಂದಲೇ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ..!

ಪ್ರವಾಸಿಗರಿಗೆ ಸ್ವಚ್ಛತೆಯ ಬಗ್ಗೆ ಅರಿವು ಹಾಗೂ ಪ್ರಕೃತಿಯ ಬಗ್ಗೆ ಮನವರಿಕೆ ಮಾಡಿ‌ಕೊಡಲು ಪ್ರವಾಸಿಗರಿಂದಲೇ, ತಾಣದ ಸ್ವಚ್ಛತೆ ಮಾಡಿಸಲಾಗುತ್ತದೆ. ಸಕ್ರೆಬೈಲು ಆನೆ ಬಿಡಾರದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ, ಇಲ್ಲಿ ಬರುವ ಪ್ರವಾಸಿಗರಿಂದ ಸಮೀಪದ‌ ಶಾಲಾ ಮಕ್ಕಳಿಂದ ಸ್ವಚ್ಛತೆ ಮಾಡಿಸಲಾಗುತ್ತದೆ. ಇದರಿಂದ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಬರುತ್ತದೆ. ಪ್ರವಾಸಿಗರು ಕಸವನ್ನು ಎಲ್ಲಿ ಬೇಕಾದಲ್ಲಿ ಹಾಕಿದರೆ ದಂಡವನ್ನು ಹಾಕುವ ಯೋಜನೆ ಜೋಗದಲ್ಲಿ ಪ್ರಾರಂಭಿಸಲಾಗುತ್ತಿದೆ. ಈ ರೀತಿ ಜನತೆಗೆ ಅರಿವು ಬಂದ್ರೆ, ಎಲ್ಲಾ ಪ್ರವಾಸಿ ತಾಣಗಳು ಸ್ವಚ್ಛತೆಯಿಂದ ನಳನಳಿಸುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.