ಶಿವಮೊಗ್ಗ: ನಗರದ ದುರ್ಗಿಗುಡಿ ಬಡಾವಣೆಯಲ್ಲಿರುವ ಪ್ರತಿಷ್ಠಿತ ಶುಭಂ ಹೋಟೆಲ್ನಲ್ಲಿ ಸ್ಟೀಮರ್ ಬ್ಲಾಸ್ಟ್ ಆಗಿ, ನಾಲ್ವರು ಕೆಲಸಗಾರರು ಗಾಯಗೊಂಡಿದ್ದಾರೆ.
ಸ್ಟೀಮರ್ನ ಪ್ರೆಜರ್ ಅನ್ನು ಆಗಾಗ್ಗೆ ಕಡಿಮೆ- ಜಾಸ್ತಿ ಮಾಡ್ತಾ ಇರಬೇಕಾಗುತ್ತದೆ. ಆದರೆ ಇದನ್ನು ಹೋಟೆಲ್ ಸಿಬ್ಬಂದಿ ಸರಿಯಾಗಿ ನಿರ್ವಹಿಸದ ಕಾರಣ ಸ್ಫೋಟವಾಗಿದೆ ಎಂದು ಹೇಳಲಾಗ್ತಿದೆ.
ಸ್ಟೀಮರ್ ಬ್ಲಾಸ್ಟ್ ಆಗಿ ನಾಲ್ಕು ಭಾಗವಾಗಿದೆ. ಈ ವೇಳೆ ಅಡುಗೆ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೀನಾಕ್ಷಮ್ಮ, ಸುರೇಶ್, ಪ್ರವೀಣ್ ಸೇರಿದಂತೆ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟದ ರಭಸಕ್ಕೆ ಅಡುಗೆ ಮನೆಯವರು ಮಾತ್ರವಲ್ಲದೇ ಊಟ ಮಾಡುತ್ತಿದ್ದವರು ತಟ್ಟೆ ಬಿಟ್ಟು ಹೊಟೆಲ್ನಿಂದ ಹೊರ ಓಡಿ ಬಂದಿದ್ದಾರೆ. ಸದ್ಯ ಹೆಚ್ಚಿನ ಅನಾಹುತವಾಗಿಲ್ಲವೆಂದು ತಿಳಿದು ಬಂದಿದೆ. ಸ್ಥಳಕ್ಕೆ ದೊಡ್ಡಪೇಟೆಯ ಎಎಸ್ಐ ಅಂತೋಣಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯಿಂದಾಗಿ ಸದ್ಯ ಹೋಟೆಲ್ನ್ನು ಬಂದ್ ಮಾಡಲಾಗಿದೆ.