ETV Bharat / state

ಅಧಿಕಾರದ ಆಸೆಗಾಗಿ ಕಾಂಗ್ರೆಸ್​ನಿಂದ ದೇಶ ವಿಭಜನೆ: ಕೆ.ಎಸ್.ಈಶ್ವರಪ್ಪ

ಅಧಿಕಾರದ ಆಸೆಗಾಗಿ ಕಾಂಗ್ರೆಸ್​ನವರು ದೇಶವನ್ನು ಭಾರತ ಮತ್ತು ಪಾಕಿಸ್ತಾನವಾಗಿ ವಿಭಜನೆ ಮಾಡಿದರು ಎಂದು ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

former-minister-ks-eshwarappa-slams-congress
ಅಧಿಕಾರದ ಆಸೆಗಾಗಿ ಕಾಂಗ್ರೆಸ್​ನಿಂದ ದೇಶ ವಿಭಜನೆ: ಕೆ.ಎಸ್.ಈಶ್ವರಪ್ಪ
author img

By

Published : Aug 14, 2023, 10:56 PM IST

Updated : Aug 14, 2023, 11:02 PM IST

ಅಧಿಕಾರದ ಆಸೆಗಾಗಿ ಕಾಂಗ್ರೆಸ್​ನಿಂದ ದೇಶ ವಿಭಜನೆ: ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಕಾಂಗ್ರೆಸ್ಸಿಗರು ಅಧಿಕಾರದ ಆಸೆಗಾಗಿ ದೇಶವನ್ನು ವಿಭಜನೆ ಮಾಡಿದವರು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ​ ವಾಗ್ದಾಳಿ ನಡೆಸಿದರು. ನಗರದಲ್ಲಿ ದೇಶ ವಿಭಜನೆಯ ಕರಾಳ ದಿನ - ವಿಭಜನ್ ವಿಭೀಷಿಕ್ ಸ್ಮೃತಿ ದಿವಸ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪಂಜಿನ ಮೆರವಣಿಗೆಯ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಸುದೀರ್ಘ ಹೋರಾಟ ನಡೆದಿದೆ. ಬ್ರಿಟೀಷರು, ಮೊಗಲರು ಎಲ್ಲರ ವಿರುದ್ಧ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ರಾಷ್ಟ್ರ ಭಕ್ತರು. ಆದರೆ ಅಧಿಕಾರದ ಆಸೆಗೋಸ್ಕರ ದೇಶವನ್ನು ಭಾರತ ಮತ್ತು ಪಾಕಿಸ್ತಾನವಾಗಿ ವಿಭಜನೆ ಮಾಡಿದವರು ಕಾಂಗ್ರೆಸ್ಸಿಗರು. ಇದನ್ನು ಕಾಂಗ್ರೆಸ್ ನಾಯಕರೆಲ್ಲ ಒಪ್ಪಿಕೊಂಡು ದೇಶದ ಯುವಜನರ ಕ್ಷಮೆ ಕೇಳಬೇಕು. ನೀವು ಕ್ಷಮೆ ಕೇಳಿದರೆ ರಾಷ್ಟ್ರ ಭಕ್ತರು ಆಗಬಹುದು. ಕಾಂಗ್ರೆಸ್​ ಭಾರತವನ್ನು ವಿಭಜನೆ ಮಾಡಿದರೂ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವನ್ನು ಒಗ್ಗೂಡಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಭಯೋತ್ಪಾದಕ ಚಟುವಟಿಕೆಗಳಿಗೆ ಕಾಂಗ್ರೆಸ್‌ನವರು ಕಾರಣ. ಅವತ್ತು ನೀವು ದೇಶವನ್ನು ಒಡೆದ ಕಾರಣ ದೇಶದ ಮೂಲೆ ಮೂಲೆಗಳಲ್ಲಿ ದೇಶ ವಿರೋಧಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಆದರೆ ಪಾಕಿಸ್ತಾನದ ಜನರು ನರೇಂದ್ರ ಮೋದಿ ಪಾಕಿಸ್ತಾನದ ಪ್ರಧಾನಿ ಆಗಬೇಕೆಂದು ಹೇಳುತ್ತಿದ್ದಾರೆ. ಪಾಕಿಸ್ತಾನ ಭಾರತಕ್ಕೆ ಸೇರುತ್ತದೆ. ಅಖಂಡ ಭಾರತದ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಹಾಗೇ ಕಾಶಿಯಲ್ಲಿ ವಿಶ್ವನಾಥ ದೇವಾಲಯ, ಮಥುರದಲ್ಲೂ ದೇವಾಲಯಗಳು ನಿರ್ಮಾಣವಾಗುತ್ತದೆ ಎಂದು ಈಶ್ವರಪ್ಪ ಹೇಳಿದರು.

ಪಂಜಿನ ಮೆರವಣಿಗೆ : ಬಿಜೆಪಿ ಶಿವಮೊಗ್ಗ ನಗರ ಸಮಿತಿಯಿಂದ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ನಗರದ ಅಶೋಕ ವೃತ್ತದಿಂದ ಶಿವಪ್ಪ ನಾಯಕ ಸರ್ಕಲ್​ವರೆಗೆ ಮೆರವಣಿಗೆ ಸಾಗಿತು. ಕಾರ್ಯಕರ್ತರು ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಕೂಗಿದರು. ಸಂಸದ ಬಿ.ವೈ.ರಾಘವೇಂದ್ರ, ಎಂಎಲ್​ಸಿ ಡಿ.ಎಸ್.ಅರುಣ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಬಿಗಿ ಪೊಲೀಸ್​ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಇದನ್ನೂ ಓದಿ : ಅಧಿಕಾರದ ಆಸೆಗೆ ಕಾಂಗ್ರೆಸ್‌ನಿಂದ ತುಷ್ಟೀಕರಣ ರಾಜಕಾರಣ: ಬೊಮ್ಮಾಯಿ

Last Updated : Aug 14, 2023, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.