ETV Bharat / state

ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಉತ್ತರದ ಮೂರು ರಾಜ್ಯಗಳು ಗೆಲುವಿನ ಗಿಫ್ಟ್ ಕೊಟ್ಟಿವೆ: ಕೆ.ಎಸ್.ಈಶ್ವರಪ್ಪ - 4 ರಾಜ್ಯಗಳ ಚುನಾವಣೆ ರಿಸಲ್ಟ್​ 2023

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​​​ಗಢದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

former-dcm-ks-eshwarappa-reaction-on-election-results
ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸಂಭ್ರಮಾಚರಣೆ
author img

By ETV Bharat Karnataka Team

Published : Dec 3, 2023, 3:34 PM IST

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ

ಶಿವಮೊಗ್ಗ : ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು ಎಂದು ರಾಜಸ್ಥಾನ, ಮಧ್ಯಪ್ರದೇಶ ಜೊತೆಗೆ ಛತ್ತೀಸ್​ಗಢವನ್ನು ಜನರು ಉಡುಗೊರೆಯಾಗಿ ಕೊಟ್ಟಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗದ ತಮ್ಮ‌ ನಿವಾಸದಲ್ಲಿ ಮಾತನಾಡಿದ ಅವರು, ಇಂದಿನ ಚುನಾವಣಾ ಫಲಿತಾಂಶದಲ್ಲಿ ರಾಜಸ್ಥಾನ ಗೆದ್ದರೆ ಬಹಳ ಸಂತೋಷ ಆಗುತ್ತೆ ಅಂದುಕೊಂಡಿದ್ವಿ, ಇಷ್ಟಕ್ಕೆ ತೃಪ್ತಿಪಡಬೇಡಿ. ಆದರೆ, ದೇಶದ ಜನ ನಿಮ್ಮ ಜೊತೆ ಇದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ದೇಶದ ಜನತೆ ಸಂದೇಶ ನೀಡಿದ್ದಾರೆ. ಇದು ದೇಶದ ಜನತೆಗೆ ದೊಡ್ಡ ಆನಂದವನ್ನುಂಟು ಮಾಡಿದೆ ಎಂದರು.

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗ್ತಾರೆ: ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ ನವರು ಐದಕ್ಕೆ ಐದು ರಾಜ್ಯಗಳಲ್ಲಿ ಗೆಲ್ಲುತ್ತೀವಿ ಅಂತಿದ್ದರು. ಆದರೆ, ಫಲಿತಾಂಶ ಈಗ ಉಲ್ಟಾ ಆಗಿದೆ. ತೆಲಂಗಾಣದಲ್ಲಿ ಅಲ್ಲಿನ ಸಿಎಂ ಮೇಲಿನ ಬೇಸರದಿಂದ ಕಾಂಗ್ರೆಸ್ ಬರುವಂತಾಗಿದೆ. ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಮೂಲಕ ಮೋಸ ಮಾಡಿದ ರೀತಿ, ಮುಸ್ಲಿಂರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾದರೋ, ಅದೇ ರೀತಿ ಅಲ್ಲಿ ಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ತೆಲಂಗಾಣ ಗೆಲ್ಲಲು ಆಗಲ್ಲ. ಈಗ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಗೆದ್ದಿದ್ದೇವೆ. ಮುಂದಿನ ಚುನಾವಣೆಯಲ್ಲಿ ದೇಶ ಗೆಲ್ಲುತ್ತೇವೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗುತ್ತಾರೆ ಎಂದರು.

ಕರ್ನಾಟಕ ಮಾದರಿಯಲ್ಲಿ ಗ್ಯಾರಂಟಿ ಕೊಡುತ್ತೇವೆ ಅನ್ನುತ್ತಿದ್ದರು. ಕರ್ನಾಟಕದಲ್ಲಿ ಆರು ತಿಂಗಳಲ್ಲೇ ಗ್ಯಾರಂಟಿ ಭರವಸೆ ವಿಫಲವಾಗಿವೆ. ಗ್ಯಾರಂಟಿ ಯೋಜನೆ ಬಗ್ಗೆ ದೇಶದ ಜನರಿಗೆ ಭರವಸೆ ಇಲ್ಲ. ಗ್ಯಾರಂಟಿ ಯೋಜನೆ ಮೂಲಕ ಕಾಂಗ್ರೆಸ್ ಮತದಾರರಿಗೆ ಮೋಸ ಮಾಡಿದೆ. ಕಾಂಗ್ರೆಸ್ ತನ್ನ ಸಾಧನೆಗಿಂತ ಗ್ಯಾರಂಟಿಯ ಮೋಸದ ಭರವಸೆ ನೀಡುತ್ತಿದ್ದಾರೆ. ಇದು ತೆಲಂಗಾಣದ ಶಾಸಕರಿಗೆ‌ ಅರ್ಥವಾಗಿದೆ. ಮೂರು ರಾಜ್ಯದ ಜನ ಬಿಜೆಪಿ ಜೊತೆ ಇದ್ದಾರೆ. ನಾವು ಏಕೆ ಕಾಂಗ್ರೆಸ್ ಜೊತೆ ಹೋಗಬೇಕು ಅಂತಾ ಅನಿಸಿದೆ. ಹೇಗಾದರೂ ಮಾಡಿ ಕಾಂಗ್ರೆಸ್ ಶಾಸಕರನ್ನು ಕಟ್ಟಿ ಹಾಕಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಪ್ರಯತ್ನ ದೇಶದಲ್ಲಿ ಎಲ್ಲೂ ಸಫಲವಾಗಿಲ್ಲ ಎಂದರು.

ಬೆಂಗಳೂರಿನಲ್ಲಿ ಸಾಕಷ್ಟು ಗುಂಡಿಗಳಿವೆ. ಬಿಬಿಎಂಪಿ ನಿಮ್ಮ ಕೈಯಲ್ಲಿದೆ. ನೀವು ಬೆಂಗಳೂರಿಗೆ ಬಂದು ಗುಂಡಿ ತುಂಬಿಸುವ ಕೆಲಸ ಮಾಡಿ. ಮುಂದಿನ ಚುನಾವಣೆಯಲ್ಲಿ ಕನಕಪುರ ಜನ ಏನು ಮಾಡುತ್ತಾರೂ ಗೊತ್ತಿಲ್ಲ. ಕರ್ನಾಟಕದ ರಾಜಕಾರಣದ ಭವಿಷ್ಯದ ಬಗ್ಗೆ ನಾವು ಏನು ತಪ್ಪು ಮಾಡಿದ್ದೇವೆ ಎಂಬುದು ಹಿಂದಿನ ಚುನಾವಣೆಯಲ್ಲಿ ಗೊತ್ತಾಗಿದೆ. ಚುನಾವಣೆಯಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ‌ಕೇಂದ್ರದ ನಾಯಕರು ಸರಿ ಮಾಡ್ತಾರೆ ಎಂದು ತಿಳಿಸಿದರು.

ಚುನಾವಣಾ ಫಲಿತಾಂಶ ಲೋಕಸಭೆ ಚುನಾವಣೆಗೆ ದಿಕ್ಸೂಚಿ : ರಾಜ್ಯದ ಬಿಜೆಪಿ ನಾಯಕರು ಎಲ್ಲರೂ ಒಟ್ಟಾಗಿ ಮುಂದೆ ಚುನಾವಣೆಗೆ ಹೋಗುತ್ತೇವೆ. ಒಂದಿಬ್ಬರಲ್ಲಿ ಭಿನ್ನಾಭಿಪ್ರಾಯ ಇದೆ. ದೇಶದ ಹಿತಕ್ಕೋಸ್ಕರ ಮುಂದಿನ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ. ಮುಂದಿನ ಲೋಕಸಭೆ ಚುನಾವಣೆಗೆ ಈ ಚುನಾವಣಾ ಫಲಿತಾಂಶ ನೂರಕ್ಕೆ ನೂರರಷ್ಟು ದಿಕ್ಸೂಚಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ನಾಲ್ಕು ರಾಜ್ಯದ ಚುನಾವಣೆಯಲ್ಲಿ ಮೂರು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್​ಘಡದಲ್ಲಿ ಬಿಜೆಪಿಗೆ ಅಲ್ಲಿನ ಮತದಾರರು ಬಹುಮತವನ್ನು ನೀಡಿದ್ದಾರೆ. ಈ ಸಂಬಂಧ ಅಲ್ಲಿನ ಮತದಾರರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಮಧ್ಯಪ್ರದೇಶದಲ್ಲಿ ನಾವು ನೀಡಿದ ಸ್ವಚ್ಚ ಆಡಳಿತಕ್ಕೆ ಜನ ಮನ್ನಣೆ ನೀಡಿದ್ದಾರೆ.‌ ಇನ್ನೂ ರಾಜಸ್ಥಾನದಲ್ಲಿ ಆಡಳಿತ ಕಾಂಗ್ರೆಸ್ ವಿರೋಧಿ ಅಲೆ ನಮಗೆ ವರದಾನವಾಯಿತು. ಚುನಾವಣೋತ್ತರ ಸಮೀಕ್ಷೆಯಲ್ಲಿ ಛತ್ತೀಸ್​​ಘಡನಲ್ಲಿ ನಮಗೆ ಗೆಲುವು ಕಷ್ಟ ಎನ್ನುವಂತಿದ್ದರೂ, ಅಲ್ಲಿನ ಮತದಾರರು ನಮಗೆ ಆಶೀರ್ವಾದ ಮಾಡಿದ್ದಾರೆ. ಈ ಫಲಿತಾಂಶವನ್ನು ನೋಡಿದಾಗ, ದೇಶದ 12 ರಾಜ್ಯಗಳಲ್ಲಿ ನಾವು ಸ್ವತಂತ್ರವಾಗಿ ಆಡಳಿತ ನಡೆಸುತ್ತಿದ್ದೇವೆ. 15 ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದೇವೆ. ದೇಶದ 30 ರಾಜ್ಯಗಳಲ್ಲಿ 25 ರಾಜ್ಯಗಳಲ್ಲಿ ನಮ್ಮ ಬಿಜೆಪಿ ಆಡಳಿತದಲ್ಲಿದೆ. ಈ ಫಲಿತಾಂಶ ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದರು.

ಶಿವಮೊಗ್ಗ ಶಾಸಕ ಚನ್ನಬಸಪ್ಪ ಮಾತನಾಡಿ, ನಾಲ್ಕು ರಾಜ್ಯಗಳಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ. ಇದು ಕಾರ್ಯಕರ್ತರ ಸಂತೋಷಕ್ಕೆ ಕಾರಣವಾಗಿದೆ. ಈ ಫಲಿತಾಂಶವು ದೇಶದಲ್ಲಿ ನರೇಂದ್ರ ಮೋದಿ ಅವರ ಆಡಳಿತ ಹೇಗೆ ಇದೆ ಎಂಬುದನ್ನು ಸೂಚಿಸುತ್ತದೆ. ದೇಶದ ಮತದಾರರು ಇಂದು ಬಿಜೆಪಿ ಜೊತೆ ನಿಂತಿದ್ದಾರೆ ಇದು ತುಂಬ ಸಂತೋಷದ ವಿಚಾರ ಎಂದರು.

ಇದೇ ವೇಳೆ ಶಿವಮೊಗ್ಗ ಜಿಲ್ಲಾ ಬಿಜೆಪಿ‌ ಕಚೇರಿ ಎದುರು ಬಿಜೆಪಿ ನಾಯಕರಾದ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಅದೇ ರೀತಿ ತೀರ್ಥಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ : 'ಈ ದೇಶವನ್ನು ಆಳುವ ನಾಯಕತ್ವ ಬಿಜೆಪಿ ಬಿಟ್ಟು ಬೇರೆ ಪಕ್ಷಗಳಲ್ಲಿಲ್ಲ ': ಬಿಎಸ್​ವೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.