ಶಿವಮೊಗ್ಗ : ನಟ ಪುನೀತ್ ರಾಜ್‍ಕುಮಾರ್ ಅಭಿನಯದ ಕೊನೆಯ ಸಿನಿಮಾ ಗಂಧದಗುಡಿ ಚಲನಚಿತ್ರವನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕುಟುಂಬ ಸಮೇತರಾಗಿ ವೀಕ್ಷಿಸಿದರು.
ನಗರದ ಭಾರತ್ ಸಿನಿಮಾಸ್ ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಗಂಧದಗುಡಿ ಸಿನಿಮಾವನ್ನು ಬಿ.ಎಸ್ ಯಡಿಯೂರಪ್ಪ ನವರು ಸಂಸದ ಬಿ.ವೈ ರಾಘವೇಂದ್ರ, ಸೊಸೆ ತೇಜಸ್ವಿನಿ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸಿನಿಮಾ ವೀಕ್ಷಣೆ ಮಾಡಿದರು. ಈ ವೇಳೆಯಲ್ಲಿ ಯಡಿಯೂರಪ್ಪನವರೊಂದಿಗೆ ಸೆಲ್ಪಿಗಾಗಿ ಜನ ಮುಗಿಬಿದ್ದರು.
ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಗಂಧದ ಗುಡಿ ಸಿನೆಮಾ ಅಕ್ಟೋಬರ್ 28ರಂದು ವಿಶ್ವದಾದ್ಯಂತ ತೆರೆ ಕಂಡಿತ್ತು. ಅಭಿಮಾನಿಗಳು ಅಪ್ಪುವನ್ನು ಕಣ್ತುಂಬಿಕೊಳ್ಳಲು ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದು, ಸದ್ಯ ಗಂಧದಗುಡಿ ಸಿನೆಮಾ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುವ ಮೂಲಕ ಭರ್ಜರಿ ಯಶಸ್ಸು ಕಾಣುತ್ತಿದೆ.
ಇದನ್ನೂ ಓದಿ : ಮಲೆನಾಡಿನ ಅಂಟಿಗೆ-ಪಿಂಟಿಗೆ ಜಾನಪದ ಕಲೆ ಬಳಸಿ ಸರ್ಕಾರಿ ಶಾಲೆ ಅಭಿವೃದ್ಧಿ