ETV Bharat / state

ಪಿಎಫ್ಐ ಸಂಘಟನೆ ನಿಷೇಧಕ್ಕೆ ನಡೆಸಿದ ಹೋರಾಟದ ಫಲ ಈಗ ಲಭ್ಯವಾಗಿದೆ: ಬಿ ಎಸ್ ಯಡಿಯೂರಪ್ಪ - ಪ್ರಧಾನಿ ನರೇಂದ್ರ ಮೋದಿ

ಪಿಎಫ್ಐ ಸಂಘಟನೆ ನಿಷೇಧಕ್ಕೆ ಸತತ ಹೋರಾಟ ನಡೆದಿತ್ತು. ಹೋರಾಟದ ಫಲವಾಗಿ ಇಂದು ಜಯ ಸಿಕ್ಕಿದೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ
author img

By

Published : Sep 28, 2022, 5:02 PM IST

ಶಿವಮೊಗ್ಗ: ಪಿಎಫ್ಐ ಸಂಘಟನೆ ನಿಷೇಧಕ್ಕೆ ನಡೆಸಿದ ಹೋರಾಟದ ಫಲ ಈಗ ಲಭ್ಯವಾಗಿದೆ ಎಂದು ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಪಿಎಫ್​ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿ ಆದೇಶಿಸಿದೆ. ಸುಮಾರು ವರ್ಷಗಳಿಂದ ಈ ರಾಷ್ಟ್ರದಲ್ಲಿ ಭಯೋತ್ಪಾದಕ ಕೆಲಸಗಳನ್ನು ಎಸಗುತ್ತಿದ್ದವು. ಈ ಸಂಘಟನೆ ದೇಶಕ್ಕೆ ಮಾರಕವಾಗಿತ್ತು. ಈ ಸಂಘಟನೆ ನಿಷೇಧ ಮಾಡುವಂತೆ ಬಹುದಿನಗಳ ಬೇಡಿಕೆ ಆಗಿತ್ತು. ಸಂಘಟನೆ ನಿಷೇಧಕ್ಕೆ ಸತತ ಹೋರಾಟ ನಡೆದಿತ್ತು. ಹೋರಾಟದ ಫಲವಾಗಿ ಇಂದು ಜಯ ಸಿಕ್ಕಿದೆ ಎಂದರು.

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಮಾತನಾಡಿದರು

ಪಿಎಫ್​ಐ ಸಂಘಟನೆ ಸೇರಿದಂತೆ ಐದು ಸಂಘಟನೆಗಳನ್ನು ನಿಷೇಧ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜ್ಯದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಬಹಳ ಹಿಂದೆಯೇ ಈ ಕೆಲಸ ಆಗಬೇಕಿತ್ತು. ಈಗಲಾದರೂ ಈ ತೀರ್ಮಾನ ತೆಗೆದುಕೊಂಡಿದ್ದು ಸ್ವಾಗತಾರ್ಹ ಎಂದು ಹೇಳಿದರು.

ತಲೆ ತಿರುಕನಂತೆ ಮಾತನಾಡೋದು ಸ್ವಾಭಾವಿಕ: ಸಿದ್ದರಾಮಯ್ಯ ಯಾವಾಗಲೂ ತಲೆ ತಿರುಕನಂತೆ ಮಾತನಾಡುವುದು ಸ್ವಾಭಾವಿಕವಾಗಿದೆ. ಅವರಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ಕಲ್ಪನೆ ಇಲ್ಲದೇ ಮಾತನಾಡುತ್ತಾರೆ ಎಂದರು. ಇಡೀ ದೇಶದಲ್ಲಿ ಹಿಂದೂಗಳ ಸಂಘಟನೆ ಮಾಡುತ್ತಿರುವ, ಪ್ರಾಮಾಣಿಕ ಕೆಲಸ ಮಾಡುತ್ತಿರುವ ಸಂಘಟನೆ ಆರ್​ಎಸ್​ಎಸ್​ ಆಗಿದೆ. ಇಂತಹ ಆರ್​ಎಸ್ಎಸ್​ ಬಗ್ಗೆ ದೇಶದಲ್ಲಿ ನೂರಕ್ಕೆ ತೊಂಬತ್ತರಷ್ಟು ಜನ ಅಭಿಮಾನ ಹೊಂದಿದ್ದಾರೆ.

ಅಂತಹ ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡೋದು ಸಿದ್ದರಾಮಯ್ಯ ಯೋಗ್ಯತೆ ಬಗ್ಗೆ ತಿಳಿಸುತ್ತದೆ. ಅವರು ಏನೇ ಮಾತನಾಡಿದ್ರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರು ಈ ರೀತಿ ಹಗುರವಾಗಿ ಮಾತನಾಡಿ ಅವರ ಗೌರವ ಅವರೇ ಹಾಳು ಮಾಡಿಕೊಳ್ಳುತ್ತಾರೆ. ಪಿಎಫ್​ಐನಿಂದ ಏನೇನು ಅನಾಹುತ ಆಗಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿರುವ ಸಂಗತಿಯಾಗಿದೆ ಎಂದರು.

ಏನೇನು ಅನಾಹುತ ಆಗಿ ನಮ್ಮ ಕಾರ್ಯಕರ್ತರ ಕೊಲೆ ಆಗಿರುವುದು ಗೊತ್ತಿರುವ ಸಂಗತಿಯಾಗಿದೆ. ಕಾನೂನು ರೀತಿ ಏನೇನು ಕ್ರಮ ಕೈಗೊಳ್ಳಬಹುದೋ ಎಲ್ಲವನ್ನು ತೆಗೆದುಕೊಳ್ಳುತ್ತಿದ್ದೇವೆ. ಮುಂದೆಯೂ ಕ್ರಮ ಕೈಗೊಳ್ಳುತ್ತೇವೆ. ಸರಿಯಾದ ಪಾಠ ಕಲಿಸುತ್ತೇವೆ ಎಂದರು. ಈ ಸಂಘಟನೆಗಳು ಬೇರೆ ಯಾವುದೇ ರೀತಿಯಲ್ಲಿ ತಲೆ ಎತ್ತಲು ಬಿಡುವುದಿಲ್ಲ. ಹಾಗೇನಾದರೂ ತಲೆ ಎತ್ತುವ ಪ್ರಯತ್ನ ಮಾಡಿದ್ರೆ ಅದಕ್ಕೆ ತಕ್ಕಶಾಸ್ತಿಯನ್ನು ಪ್ರಧಾನಿ, ಗೃಹ ಸಚಿವರು ಕೈಗೊಳ್ಳುತ್ತಾರೆ ಎಂದು ಹೇಳಿದರು.

ಓದಿ: ಪಿಎಫ್ಐ ನಿಷೇಧ ಕೇಂದ್ರದ ಐತಿಹಾಸಿಕ ನಿಲುವು: ಸಂಸದ ಬಿ. ವೈ ರಾಘವೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.