ಶಿವಮೊಗ್ಗ: ಮಾಜಿ ಸಿಎಂ, ವರ್ಣರಂಜಿತ ರಾಜಕಾರಣಿ ದಿವಂಗತ ಎಸ್. ಬಂಗಾರಪ್ಪನವರ 9ನೇ ಪುಣ್ಯ ಸ್ಮರಣೆಯ ಅಂಗವಾಗಿ ಪುತ್ರ ಕುಮಾರ್ ಬಂಗಾರಪ್ಪ ಇಂದು ವಿಶೇಷ ಪೂಜೆ ನೆರವೇರಿಸಿದರು.
ಸೊರಬದ ಬಂಗಾರ ಧಾಮದಲ್ಲಿನ ಬಂಗಾರಪ್ಪನವರ ಸಮಾಧಿಗೆ ಬೆಳಗ್ಗೆಯೇ ತೆರಳಿ ವಿಶೇಷ ಪೂಜೆ ನಡೆಸಿದರು. ನಂತರ ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಉದ್ಯಾನವನದಲ್ಲಿನ ಬಂಗಾರಪ್ಪನವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಬಂಗಾರಪ್ಪ ಅಭಿಮಾನಿಗಳು ಹಾಜರಿದ್ದರು. ಬಂಗಾರಪ್ಪನವರ ಇಬ್ಬರೂ ಪುತ್ರರು ಪ್ರತ್ಯೇಕವಾಗಿ ಪೂಜೆ ಸಲ್ಲಿಸುತ್ತಾರೆ.