ETV Bharat / state

ಎಸ್ ಬಂಗಾರಪ್ಪ 11ನೇ ಪುಣ್ಯಸ್ಮರಣೆ.. ಪುತ್ರ ಮಧು ಬಂಗಾರಪ್ಪರಿಂದ ಸಮಾಧಿಗೆ ಪೂಜೆ

ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುಣ್ಯತಿಥಿ- ಬಂಗಾರಧಾಮದಲ್ಲಿರುವ ಸಮಾಧಿಗೆ ಪುತ್ರ ಮಧು ಬಂಗಾರಪ್ಪ ಭೇಟಿ- ಪೂಜೆ ಸಲ್ಲಿಕೆ

former mla madhu bangarappa
ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುಣ್ಯತಿಥಿ
author img

By

Published : Dec 26, 2022, 12:38 PM IST

ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುಣ್ಯತಿಥಿ

ಸೊರಬ (ಶಿವಮೊಗ್ಗ): ಇಂದು ನಾಡು ಕಂಡ ವರ್ಣರಂಜಿತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ 11ನೇ ಪುಣ್ಯಸ್ಮರಣೆ. ಇದರ ಅಂಗವಾಗಿ ಸೋಮವಾರ ಪಟ್ಟಣದ ಬಂಗಾರಧಾಮದಲ್ಲಿರುವ ಅವರ ಸಮಾಧಿಗೆ ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ಮಧು ಬಂಗಾರಪ್ಪ ಆಗಮಿಸಿ, ಪೂಜೆ ಸಲ್ಲಿಸಿದರು. ಅವರ ಜೊತೆ ಪಕ್ಷದ ಮುಖಂಡರು ಹಾಗೂ ಸಂಬಂಧಿಗಳು ಆಗಮಿಸಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಎಸ್ ಮಧುಬಂಗಾರಪ್ಪ ಮಾತನಾಡಿದರು. ಎಸ್ ಬಂಗಾರಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ಬಡವರ, ಹಿಂದುಳಿದ ವರ್ಗಗಳ, ರೈತರ ಪರವಾದ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು. ಅವು ಇಂದಿಗೂ ಸಹ ಜನಮಾನಸದಲ್ಲಿ ಉಳಿದಿವೆ. ಅವರ ಆದರ್ಶ ರಾಜಕೀಯವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ಸದಾ ಜನ ಸೇವೆಯಲ್ಲಿ ತೊಡಗಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಾಗಿ ಮತಗಳು ಬರುವುದು ಒಬಿಸಿ ವರ್ಗದಿಂದ: ಮಧು ಬಂಗಾರಪ್ಪ

ಕಾರವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಜೋತಾಡಿ, ಮುಖಂಡರಾದ ಎಚ್. ಗಣಪತಿ, ಎನ್.ಜಿ. ನಾಗರಾಜ್, ಭಾಸ್ಕರ್ ಬರಗಿ, ರವಿ ಬರಗಿ, ಸಂಜೀವ ನೇರಲಿಗೆ, ಹಬೀಬುಲ್ಲಾ ಹವಾಲ್ದಾರ್, ಜಗದೀಶ್ ಕುಪ್ಪೆ, ಕುಮಾರಸ್ವಾಮಿ, ಯು. ಫಯಾಜ್ ಅಹಮ್ಮದ್, ಸಂತೋಷ್ ಕೊಡಕಣಿ, ಶ್ರೀಕಾಂತ ಚಿಕ್ಕಶಕುನ, ಪಾಂಡು ಕೊಡಕಣಿ, ಸಂಜಯ್ ದೇವತಿಕೊಪ್ಪ, ಮೋಹನ ಕುಪ್ಪೆ, ರವಿಕುಮಾರ್ ಶೆಟ್ಟಿ, ಲಕ್ಷ್ಮಣಪ್ಪ ಸೇರಿದಂತೆ ಇತರರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.