ಶಿವಮೊಗ್ಗ: ಪ್ರಕರಣದ ಆರೋಪ ಪಟ್ಟಿಯಲ್ಲಿ ಹೆಸರು ಕೈ ಬಿಡಲು ಲಂಚ ಪಡೆಯುವಾಗ ಅರಣ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಶಿರಾಳಕೊಪ್ಪದ ಡಿಆರ್ಎಫ್ಒ ವೀರೇಶ್, ಎಸಿಬಿ ಬಲೆಗೆ ಬಿದ್ದ ಅಧಿಕಾರಿ ಎಂದು ತಿಳಿದು ಬಂದಿದೆ.
ಡಿಆರ್ಎಫ್ಓ ವೀರೇಶ್ ಈ ಹಿಂದೆ ಸೊರಬದಲ್ಲಿ ಕಾರ್ಯನಿರ್ವಹಿಸುವಾಗ ಇಡುವಾಣಿಯಲ್ಲಿ ಅರಣ್ಯ ಕಾಯ್ದೆಯಂತೆ ವೀರೇಶ್ ಎಂಬಾತನ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ಆರೋಪ ಪಟ್ಟಿಯಿಂದ ವ್ಯಕ್ತಿಯ ಹೆಸರು ಕೈಬಿಡಲು ಡಿಆರ್ಎಫ್ಓ ವೀರೇಶ್ ಅವರು 10 ಸಾವಿರ ರೂ ಲಂಚ ಕೇಳಿದ್ದರು. ಇದರಲ್ಲಿ 7 ಸಾವಿರ ರೂ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿ ಅಧಿಕಾರಿಗಳ ನಡೆ ಅನುಮಾನಕ್ಕೆ ಎಡೆ:
ನಿನ್ನೆ ರಾತ್ರಿ ಶಿರಾಳಕೊಪ್ಪದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ವೀರೇಶ್ರನ್ನು ಶಿಕಾರಿಪುರದ ಪ್ರವಾಸಿ ಮಂದಿರಕ್ಕೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಶಿರಾಳಕೊಪ್ಪದಲ್ಲಿ ಪ್ರವಾಸಿ ಮಂದಿರ ಇದ್ದರೂ ಸಹ ವಿಚಾರಣೆಗೆ ಶಿಕಾರಿಪುರಕ್ಕೆ ಕರೆತಂದಿದ್ದು ಯಾಕೆ? ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
ಇದನ್ನೂ ಓದಿ: ಭೂ ಅಕ್ರಮ ಆರೋಪ: ಮರು ತನಿಖೆ ಮಾಡುವಂತೆ ಆದೇಶ ಹೊರಡಿಸಿದ ಸರ್ವೇ ಇಲಾಖೆ