ಶಿವಮೊಗ್ಗ: ಶಿವಮೊಗ್ಗದಲ್ಲೂ ವಿಧಿ ವಿಜ್ಞಾನ ಕೇಂದ್ರ ತೆರೆಯಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಇಂದು ಶಿಕಾರಿಪುರದಲ್ಲಿ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ದಿ ನಿಗಮದಿಂದ ಸುಮಾರು 20 ಕೋಟಿ ವೆಚ್ಚದ ಶಿಕಾರಿಪುರ ಪಟ್ಟಣದಲ್ಲಿ 60 ಹಾಗೂ ಶಿರಾಳಕೊಪ್ಪ ಪಟ್ಟಣದಲ್ಲಿ 12 ವಸತಿ ಗೃಹಕ್ಕೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ನಮ್ಮ ಪೊಲೀಸರು ಹಾಗೂ ಅವರ ಕುಟುಂಬದವರು ವಾಸ ಮಾಡುವ ಮನೆ ಚೆನ್ನಾಗಿರಬೇಕು. ಮನೆ ಚನ್ನಾಗಿದ್ರೆ, ನಮ್ಮ ಪೊಲೀಸರು ನಮ್ಮದಿಯಿಂದ ಕೆಲಸ ಮಾಡಬಹುದು ಎಂದರು.
ಕೆಲವೊಮ್ಮೆ ಪೊಲೀಸರು ಎರಡು ದಿನವಾದರೂ ತಮ್ಮ ಮನೆಗೆ ಹೋಗಲು ಆಗಲ್ಲ, ನಿದ್ದೆ ಮಾಡಲು ಆಗಲ್ಲ. ಊಟ ಸರಿಯಾಗಿ ಮಾಡಲು ಆಗಲ್ಲ ಎಂದರು. ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು, ಎಷ್ಟೇ ದುಡ್ಡುಕೊಟ್ಟರೂ ಪೊಲೀಸ್ ಕೆಲಸ ಬೇಡಪ್ಪ ಎನ್ನುವಂತೆ ಆಗುತ್ತದೆ. ಇದರಿಂದ ಅವರು ಕೆಲಸ ಮಾಡುವ ಜಾಗ ಹಾಗೂ ಮನೆ ಸರಿಯಾಗಿದ್ರೆ, ನೆಮ್ಮದಿಯಿಂದ ಕೆಲಸ ಮಾಡಬಹುದಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ರವರು, ಪೊಲೀಸ್ ಇಲಾಖೆಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. ಇಂದು ಶಿಕಾರಿಪುರ ತಾಲೂಕಿನ ಸುಮಾರು 60 ಕುಟುಂಬಗಳಿಗೆ ಅನುಕೂಲ ಮಾಡಿಕೊಡಲು ವಸತಿ ನಿಲಯಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ಗೃಹ ಸಚಿವರಿಗೆ ಅಭಿನಂದನೆಗಳು ಎಂದರು.
ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರಿಗೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ತಮ್ಮ ಮನೆಯಲ್ಲಿ ಸಾವು ಸಂಭವಿಸಿದ್ರು ಹೋಗಲಾದ ಕೋವಿಡ್ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಕೆಲಸ ನಿರ್ವಹಿಸಿದೆ ಎಂದರು. ಈ ವೇಳೆ ಎಸ್ಪಿ ವಿಥುನ್ ಕುಮಾರ್. ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಸೇರಿ ಇತರರು ಹಾಜರಿದ್ದರು.
ಇದನ್ನೂ ಓದಿ: ಎಸ್ಸಿ ಎಸ್ಟಿ ಮೀಸಲು ಹೆಚ್ಚಳ ಅನುಷ್ಠಾನ ಪ್ರಕ್ರಿಯೆ ಬಗ್ಗೆ ಸರ್ಕಾರದ ಮೌನ ಸರಿಯಲ್ಲ: ಸಿದ್ದರಾಮಯ್ಯ