ಶಿವಮೊಗ್ಗ: ಆನಂದಪುರಂ ಗ್ರಾಮದಲ್ಲಿ ವಿಷಾಹಾರ ಸೇವನೆಯಿಂದಾಗಿ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರಲ್ಲಿ ವಾಂತಿ - ಭೇದಿ ಕಾಣಿಸಿಕೊಂಡಿತ್ತು. ನಿನ್ನೆ ರಾತ್ರಿ ಇಲ್ಲಿನ ಅಯ್ಯಪ್ಪ ಸ್ವಾಮಿ ಪೂಜೆಯ ವೇಳೆ ಪ್ರಸಾದ ಸೇವನೆ ಮಾಡಿದವರಲ್ಲಿ ವಾಂತಿ ಕಂಡು ಬಂದಿದೆ. ಇದರಲ್ಲಿ ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ.
ಇಂದು ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳು ಆನಂದಪುರಂನ ಆರೋಗ್ಯ ಕೇಂದ್ರಕ್ಕೆ ಬಂದು ವೈದ್ಯರ ಬಳಿ ತಪಾಸಣೆ ನಡೆಸಿಕೊಂಡಿದ್ದಾರೆ. ನಂತರ ವಯಸ್ಕರು ಸಹ ಬಂದು ವೈದ್ಯರ ಬಳಿ ತೋರಿಸಿಕೊಂಡು ಹೋಗಿದ್ದಾರೆ. ಕೆಲವರಿ ಗ್ಲೋಕೊಸ್ ಹಾಕಿಸಿಕೊಂಡು ಹೋಗಿದ್ದಾರೆ.
ಆದರೆ, ಯಾರಿಗೂ ಸಹ ಯಾವುದೇ ರೀತಿಯ ಅಪಾಯವಾಗಿಲ್ಲ, ಎಲ್ಲರೂ ಸಹ ಆರೋಗ್ಯವಾಗಿದ್ದು, ಎಲ್ಲೂರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕಾಂತೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಹಾಲು ಸೇವಿಸಿದ್ದ ತಾಯಿ - ಮಕ್ಕಳು ಅಸ್ವಸ್ಥ.. ಅಕ್ಕ- ತಮ್ಮ ಸಾವು, ಅಮ್ಮನ ಸ್ಥಿತಿ ಗಂಭೀರ!