ETV Bharat / state

ತಾಂತ್ರಿಕ ದೋಷ: ಶಿವಮೊಗ್ಗದಿಂದ ಬೆಂಗಳೂರಿಗೆ ಹಾರಬೇಕಿದ್ದ ವಿಮಾನದ ಹಾರಾಟ ವಿಳಂಬ - ಶಿವಮೊಗ್ಗದ ನೂತನ ವಿಮಾನ ನಿಲ್ದಾಣ

ತಾಂತ್ರಿಕ ದೋಷದ ಹಿನ್ನೆಲೆ ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಬೇಕಾಗಿದ್ದ ವಿಮಾನದ ಹಾರಾಟ ವಿಳಂಬವಾಗಿದೆ.

flight-from-shimoga-to-bangalore-was-delayed
ತಾಂತ್ರಿಕ ದೋಷ: ಶಿವಮೊಗ್ಗದಿಂದ ಬೆಂಗಳೂರಿಗೆ ಹಾರಬೇಕಿದ್ದ ವಿಮಾನದ ಹಾರಾಟ ವಿಳಂಬ
author img

By ETV Bharat Karnataka Team

Published : Nov 1, 2023, 4:22 PM IST

ಶಿವಮೊಗ್ಗ: ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಬೇಕಾಗಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ವಿಮಾನ ಹಾರಾಟ ವಿಳಂಬವಾಗಿದೆ. 11.25ಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಹಾರಬೇಕಾಗಿದ್ದ 67732 ಸಂಖ್ಯೆಯ ಇಂಡಿಗೋ ವಿಮಾನ ತಾಂತ್ರಿಕ ದೋಷದಿಂದ ಹಾರಾಟ ನಿಲ್ಲಿಸಿದೆ. ಈ ವಿಮಾನದಲ್ಲಿ 50 ಜನ ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣ ಬೆಳೆಸಬೇಕಿತ್ತು.

ತಾಂತ್ರಿಕ ಸಮಸ್ಯೆಯನ್ನು ಪತ್ತೆಹಚ್ಚುವಲ್ಲಿ ಪರಿಣಿತರು ನಿರತರಾಗಿದ್ದಾರೆ. ವಿಮಾನ ವಿಳಂಬದಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಮತ್ತೊಂದೆಡೆ, ಪರಿಣಿತರು ವಿಮಾನದ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿ ವಿಮಾನ ಹಾರಾಟಕ್ಕೆ ಅನುವು ಮಾಡಿಕೊಡಲಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.‌ ವಿಮಾನ ಹಾರಾಟ ವಿಳಂಬವಾಗಿರುವುದರಿಂದ ಪ್ರಯಾಣಿಕರಿಗೆ ವಿಮಾನ ಸಂಸ್ಥೆಯು ಊಟದ ವ್ಯವಸ್ಥೆಯನ್ನು ಮಾಡಿದೆ.

ಇದನ್ನೂ ಓದಿ: ಚಳಿಗಾಲದ ಋತು: ಮಂಗಳೂರು ವಿಮಾನ‌ ನಿಲ್ದಾಣದಲ್ಲಿ ಶೇ 26ರಷ್ಟು ವಿಮಾನ ಹಾರಾಟ ಹೆಚ್ಚಳ

ಶಿವಮೊಗ್ಗ ವಿಮಾನ ನಿಲ್ದಾಣದ ಬಾಂಬ್​​ಥ್ರೆಟ್​ ಕಂಟೆಸ್ಸರಿ ಪ್ಲಾನ್ಅ​ನ್ನು ನವೀಕರಿಸಬೇಕು: ಇತ್ತೀಚಿಗೆ, ಶಿವಮೊಗ್ಗದ ನೂತನ ವಿಮಾನ ನಿಲ್ದಾಣದ ಬಾಂಬ್ ಥ್ರೇಟ್ ಕಂಟೆಸ್ಸರಿ ಪ್ಲಾನ್ ಅನ್ನು ಅದಷ್ಟು ಬೇಗ ನವೀಕರಿಸಬೇಕೆಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ್ದ ಅವರು, ಬೆಂಗಳೂರಿನಲ್ಲಿ ಬೃಹತ್ ಮತ್ತು ಮಧ್ಯಮ‌ ಕೈಗಾರಿಕ ಸಚಿವ ಎಂ ಬಿ ಪಾಟೀಲ್​ ಜೊತೆ ಬೆಂಗಳೂರಿನ ಕಚೇರಿಯಲ್ಲಿ ಸಭೆ ನಡೆಯಿತು.‌ ಈ ಸಭೆಯಲ್ಲಿ ಅಧಿಕಾರಿಗಳು ಹಾಜರಿದ್ದು, ವಿಮಾನ ನಿಲ್ದಾಣದ ಮುಂದಿನ ಅಭಿವೃದ್ಧಿ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಯಿತು. ಈಗ ಬೆಳಗ್ಗೆ ಒಂದು ವಿಮಾನ ಬೆಂಗಳೂರು- ಶಿವಮೊಗ್ಗ ಹಾರಾಟ ನಡೆಸುತ್ತಿದೆ. ಮುಂದಿನ ವಾರದಲ್ಲಿ ಸಂಜೆ ಇನ್ನೊಂದು ವಿಮಾನ ಹಾರಾಟ ನಡೆಸಲಿದೆ ಎಂದಿದ್ದರು.

ನವೆಂಬರ್​ 22 ರಿಂದ ಸ್ಟಾರ್ ಏರ್ ಲೈನ್ಸ್ ನವರು ತಿರುಪತಿ, ಗೋವಾ, ಹೈದರಾ​ಬಾದ್ ಸೇರಿದಂತೆ ಇತರೆ ಪ್ರದೇಶಗಳಿಗೆ ಹಾರಾಟ ನಡೆಸಲಿವೆ. ಏರೋಡ್ರೋಮ್ ಸೆಕ್ಯೂರಿಟಿ ಪ್ರೋಗ್ರಾಂ ಬಾಂಬ್ ಥ್ರೆಟ್ ಕಂಟೆಸ್ಸರಿ ಪ್ಲಾನ್​ದಡಿ ನವೆಂಬರ್ 23ರ ತನಕ ಲೈಸನ್ಸ್ ಅನುಮತಿ ಸಿಕ್ಕಿದೆ. ಈ ಲೈಸನ್ಸ್​ ರಿನಿವಲ್ ಮಾಡಿಸಬೇಕಿದೆ. ಮುಂದಿನ ತಿಂಗಳು ಸ್ಟಾರ್ ಏರ್​ಲೈನ್ಸ್​ ಹಾರಾಟ ಪ್ರಾರಂಭಿಸಿದರೆ, ಅವರಿಗೆ ಒಂದು ವಾರ ಕಾಲ ಮಾತ್ರ ಹಾರಾಟಕ್ಕೆ ಅವಕಾಶ ಸಿಕ್ಕಹಾಗೆ ಆಗುತ್ತದೆ. ಹೀಗಾಗಿ ಅದಷ್ಟು ಬೇಗ ಲೈಸನ್ಸ್ ರಿನಿವಲ್ ಮಾಡಬೇಕಿದೆ ಎಂದು ಹೇಳಿದ್ದರು.

ಕಾಯಂ ಆಗಿ ಬಾಂಬ್ ಥ್ರೆಟ್​​ ಕಂಟೆಸ್ಸರಿ ಪ್ರೋಗ್ರಾಂಗೆ ಬಜೆಟ್ 2.50 ಕೋಟಿ ಬಿಡುಗಡೆ ಮಾಡಲಾಗಿದೆ. ಈಗ ಮೊತ್ತ ಕಡಿಮೆ ಇದ್ರು ಸಹ ಟೆಂಡರ್ ಮಾಡಲು ಹೋದರೆ ತಡವಾಗುತ್ತದೆ. ಸದ್ಯ ಮಾತುಕತೆ ನಡೆಸಲಾಗಿದೆ. ಇದೇ ಲೈಸನ್ಸ್ ಅನ್ನು ಒಂದೆರಡು ತಿಂಗಳು ಮುಂದೂಡಲು ಕೋರಲಾಗಿದೆ ಎಂದು ಮಾಹಿತಿ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.