ETV Bharat / state

ಹೊಸ ವರ್ಷಾಚರಣೆ ವೇಳೆ ಮಿಸ್ ಫೈರ್.. ಗುಂಡು ತಗುಲಿ ಯುವಕ ಬಲಿ, ಫೈರಿಂಗ್​ ಮಾಡಿದ ವ್ಯಕ್ತಿಯೂ ಸಾವು - ಹೊಸ ವರ್ಷವನ್ನು ಸ್ವಾಗತ ಮಾಡಲು ಪಾರ್ಟಿ

ಹೊಸ ವರ್ಷಾಚರಣೆ ವೇಳೆ ಮಿಸ್ ಫೈರ್- ಗುಂಡು ತಗುಲಿ ಯುವಕ ಬಲಿ-ಫೈರ್ ಮಾಡಿದ ವ್ಯಕ್ತಿ ಹೃದಯಾಘಾತದಿಂದ ಸಾವು

ಹೃದಯಘಾತದಿಂದ ವ್ಯಕ್ತಿ ಸಾವು
ಹೃದಯಘಾತದಿಂದ ವ್ಯಕ್ತಿ ಸಾವು
author img

By

Published : Jan 1, 2023, 12:46 PM IST

Updated : Jan 1, 2023, 5:19 PM IST

ಪ್ರಕರಣ ಕುರಿತು ಎಸ್ಪಿ ಮಿಥುನ್ ಕುಮಾರ್ ಮಾಹಿತಿ

ಶಿವಮೊಗ್ಗ: ಶನಿವಾರ ರಾತ್ರಿ ಹೊಸ ವರ್ಷವನ್ನು ಸ್ವಾಗತಿಸಲು ಸಂತೋಷ ಕೂಟ ಆಯೋಜಿಸಲಾಗಿತ್ತು. ಅಲ್ಲಿ ಎಲ್ಲರೂ ಸಂಭ್ರಮದಿಂದ ಸೇರಿದ್ದರು. ಈ ಸಂತಸ ಕೆಲವೇ ಕ್ಷಣಗಳಲ್ಲಿ ಮಾಯವಾಗಿ ಶೋಕ ಮಡುಗಟ್ಟಿತು. ಕಾರಣ ಸಂಭ್ರಮಾಚರಣೆ ಮಾಡುತ್ತಿರುವಾಗ, ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿ ಯುವಕನೊಬ್ಬ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇನ್ನು ಘಟನೆ ಬಳಿಕ ಗುಂಡು ಹಾರಿಸಿದ ವ್ಯಕ್ತಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ವಿದ್ಯಾನಗರದ ಮಂಜುನಾಥ್ ಓಲೇಕರ್ ಮತ್ತು ಹೊಸನಗರ ಮೂಲದ ವಿನಯ್ (34) ಮೃತರೆಂದು ತಿಳಿದುಬಂದಿದೆ. ಮಂಜುನಾಥ್ ಶಿವಮೊಗ್ಗದ ಗೋಪಾಲ ಗ್ಲಾಸ್ ಹೌಸ್​ನ ಮಾಲೀಕರಾಗಿದ್ದು, ತಮ್ಮ ಮನೆಯಲ್ಲೇ ಹೊಸ ವರ್ಷದ ಆಚರಣೆಗಾಗಿ ಶಾಮಿಯಾನ್ ಹಾಕಿಸಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಯಲ್ಲಿ ಮಂಜುನಾಥ್ ಅವರ ಮಗ ಮತ್ತು ಸ್ನೇಹಿತರೂ ಕೂಡ ಭಾಗಿಯಾಗಿದ್ದರು. ಈ ವೇಳೆ ಮಂಜುನಾಥ್​ ಅವರ ಬಳಿ ಇರುವ ಲೈಸೆನ್ಸ್​ ಹೊಂದಿರುವ ಗನ್​ನಿಂದ ಆಕಸ್ಮಿಕವಾಗಿ ಫೈರ್ ಆಗಿ ವಿನಯ್​ಗೆ ತಗುಲಿತ್ತು.

ಗುಂಡು ತಗುಲಿ ಮೃತಪಟ್ಟ ಯುವಕ ವಿನಯ್​
ಗುಂಡು ತಗುಲಿ ಮೃತಪಟ್ಟ ಯುವಕ ವಿನಯ್​

ಭಯದಿಂದ ಹೃದಯಾಘಾತ?: ರಾತ್ರಿ 12 ಗಂಟೆ ಆಗುತ್ತಿದ್ದಂತೆಯೇ ಮಂಜುನಾಥ್ ಓಲೇಕರ್ ತಮ್ಮ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಅದು ಮಿಸ್ ಆಗಿ ಪಾರ್ಟಿಗೆ ಬಂದಿದ್ದ ವಿನಯ್ ಎಂಬ ಯುವಕನಿಗೆ ತಾಗಿದೆ. ಗಾಯಗೊಂಡ ವಿನಯ್​ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾನು ಹಾರಿಸಿದ ಗುಂಡು ಪುತ್ರನ ಸ್ನೇಹಿತನಿಗೆ ತಾಗಿತು ಎಂದು ಆತಂಕಗೊಂಡ ಮಂಜುನಾಥ್ ಓಲೇಕರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮಂಜುನಾಥ್ ಅವರ ಬಳಿ ಗನ್​​ಗೆ ಲೈಸೆನ್ಸ್ ಇದೆಯಂತೆ. ವಿನಯ್ ಹೊಸನಗರ ಮೂಲದ ವಿನಯ್ ವಾಲಿಬಾಲ್ ಆಟಗಾರನಾಗಿದ್ದು, ಸದ್ಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಪಿಹೆಚ್​​ಡಿ ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಳೆ ವರ್ಷಕ್ಕೆ ಗುಡ್ ಬೈ, ಹೊಸ ವರ್ಷಕ್ಕೆ ಹಾಯ್! ಬೆಂಗಳೂರಿನಲ್ಲಿ ಮಧ್ಯರಾತ್ರಿ ಸಂಭ್ರಮ

ಎಸ್​​ಪಿ ಪ್ರತಿಕ್ರಿಯೆ: ಓಲೇಕರ್ ಮತ್ತು ಅವರ ಮಗ ಹಾಗೂ ಕೆಲವು ಸ್ನೇಹಿತರು ಹೊಸ ವರ್ಷಾಚರಣೆ ಹಿನ್ನೆಲೆ ಪಾರ್ಟಿ ಮಾಡಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದರು. 12 ಗಂಟೆ ಸುಮಾರಿಗೆ ಮಂಜುನಾಥ್​ ಓಲೇಕರ್​ ಗುಂಡನ್ನು ಹಾರಿಸಿದ್ದಾರೆ. ಆಗ ಅದು ಆಕಸ್ಮಿಕವಾಗಿ ವಿನಯ್​ ಅವರಿಗೆ ತಗುಲಿದೆ. ಅವರಿಗೆ 34 ವರ್ಷ ವಯಸ್ಸು. ಫೈರ್​ ಮಾಡಿದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಗನ್ ಲೈಸೆನ್ಸ್ ನಿಯಮ ಉಲ್ಲಂಘನೆ ಆಗಿರುವುದರಿಂದ ವೆಪನ್ ಸೀಸ್ ಮಾಡಲಾಗುವುದು ಎಂದು ನಗರದಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.

ರಾಮನಗರದಲ್ಲೂ ನಡೆದಿತ್ತು ದುರ್ಘಟನೆ.. ಇತ್ತೀಚೆಗೆ ರಾಮನಗರ ಜಿಲ್ಲೆಯಲ್ಲೂ ಸಹ ಗನ್​ನಿಂದ ಮಿಸ್​ ಫೈರ್​ ಆಗಿ ಬಾಲಕನೊಬ್ಬ ಅಚಾನಕ್​ ಆಗಿ ಟ್ರಿಗರ್​ ಒತ್ತಿದ್ದರಿಂದ ಅದರಿಂದ ಹಾರಿದ ಗುಂಡ ಬಾಲಕನ ಸಹೋದರನ ಪ್ರಾಣ ತೆಗೆದಿತ್ತು. ಈ ಸಂಬಂಧ ಗನ್​ ಹೊಂದಿದ್ದ ತೋಟದ ಮಾಲೀಕನನ್ನು ನಿರ್ಲಕ್ಷ್ಯ ವಹಿಸಿದ ಆರೋಪದಡಿ ಪೊಲೀಸರು ಬಂಧಿಸಿದ್ದರು.

ತೋಟದ ಕೆಲಸಕ್ಕೆ ಬಂದಿದ್ದ ಕುಟುಂಬ.. ಬೇರೆ ರಾಜ್ಯದಿಂದ ತೋಟದ ಕೆಲಸಕ್ಕೆ ತಮ್ಮಿಬ್ಬರು ಮಕ್ಕಳೊಂದಿಗೆ ದಂಪತಿ ಬಂದಿದ್ದರು. ಈ ವೇಳೆ ತೋಟದ ಮಾಲೀಕನ ಗನ್​ ಅನ್ನು ಆ ಮಕ್ಕಳು ಆಟಿಕೆ ವಸ್ತು ಎಂಬಂತೆ ಬಳಸಿದ ಪರಿಣಾಮ ಅದರಿಂದ ಮಿಸ್​ ಫೈರ್​ ಆಗಿ ಓರ್ವ ಬಾಲಕನ ಜೀವ ಹೋಗಿತ್ತು.

Last Updated : Jan 1, 2023, 5:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.