ಶಿವಮೊಗ್ಗ: ತುಂಗಾ ಮೇಲ್ದಂಡೆ ಕಾಲುವೆಯ ಸುಮಾರು 80 ಅಡಿ ಅಳದ ಕಾಲುವೆಗೆ ಬಿದ್ದಿದ್ದ ವ್ಯಕ್ತಿಯನ್ನು ಅಗ್ನಿ ಶಾಮಕದಳದವರು ರಕ್ಷಣೆ ಮಾಡಿದ್ದಾರೆ.
ಶಿವಮೊಗ್ಗದ ಸಾಗರ ರಸ್ತೆಯ ಶರಾವತಿ ಡೆಂಟಲ್ ಕಾಲೇಜು ಬಳಿಯ ತುಂಗಾ ಮೇಲ್ದಂಡೆ ಕಾಲುವೆಗೆ ತ್ಯಾಗರ್ತಿ ಗ್ರಾಮದ ನಿವಾಸಿ ಸಂತೋಷ್ ಬಾಪಟ್ ಎಂಬಾತ ರಾತ್ರಿ 12 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆ ಮಾಡಲು ಹೋದಾಗ ಕಾಲು ಜಾರಿ ಬಿದ್ದಿದ್ದಾರೆ. ಇದನ್ನು ನೋಡಿದ ಹರ್ಷದ ಫರ್ನ್ ಹೋಟೆಲ್ ಸಿಬ್ಬಂದಿಗಳು ತಕ್ಷಣವೇ ತುಂಗಾನಗರ ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಅಗ್ನಿ ಶಾಮಕದಳದವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳದವರು ಸಂತೋಷ್ ಬಾಪಟ್ ಅವರನ್ನು ಹಗ್ಗ ಕಟ್ಟಿ ಸುರಕ್ಷಿತವಾಗಿ ಮೇಲಕ್ಕೆ ಎತ್ತಿದ್ದಾರೆ. ಸಂತೋಷ್ ಬಾಪಟ್ ತ್ಯಾಗರ್ತಿ ನಿವಾಸಿಯಾಗಿದ್ದು, ಅಡುಗೆ ಕೆಲಸ ಮಾಡುತ್ತಾರೆ. ಸದ್ಯ ಸಂತೋಷ್ ಮೆಗ್ಗಾನ್ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾತ್ರಿ ಸುಮಾರು 2 ಗಂಟೆ ತನಕ ಕತ್ತಲಲ್ಲಿ ಕಾರ್ಯಾಚರಣೆ ನಡೆಸಿ ಸಂತೋಷ್ನನ್ನು ರಕ್ಷಣೆ ಮಾಡಲಾಗಿದೆ.