ಶಿವಮೊಗ್ಗ: ರಂಗಕರ್ಮಿ, ಚಿತ್ರನಟ, ಪತ್ರಕರ್ತ ಹೀಗೆ ಬಹುಮುಖ ಪ್ರತಿಭೆಯಾಗಿದ್ದ ಮೈ.ನಾ. ಸುಬ್ರಮಣ್ಯ ಅವರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.
63 ವರ್ಷದ ಮೈ.ನಾ. ಸುಬ್ರಮಣ್ಯ ಅವರಿಗೆ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ನಗರದ ಹೊರವಲಯದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದರು. ಇಂದು ಮಧ್ಯಾಹ್ನ 3 ಗಂಟೆಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರ ಇಬ್ಬರು ಹೆಣ್ಣು ಮಕ್ಕಳು ಟಿವಿ ಸೀರಿಯಲ್ ನಟರಾಗಿದ್ದಾರೆ.
ಮೈ.ನಾ. ಸುಬ್ರಮಣ್ಯ ಅವರು ಆರ್ಯವೈಶ್ಯ ಸಮಾಜದಲ್ಲಿ ಹೆಚ್ಚು ಸಕ್ರಿಯವಾಗಿ ತಮ್ಮನ್ನು ತೂಡಗಿಸಿಕೊಂಡಿದ್ದರು. ಇವರು ಹಲವು ನಾಟಕಗಳಲ್ಲಿ ನಟಿಸಿದ್ದು, ನಾಟಕಗಳ ರಚನೆ ಸಹ ಮಾಡಿದ್ದರು. ಕನ್ನಡದ ಐದಾರು ಚಿತ್ರಗಳಲ್ಲಿ ನಟಿಸಿದ್ದು, ಶಿವಮೊಗ್ಗದ ಸ್ಥಳೀಯ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
ಮೈ.ನಾ. ಸುಬ್ರಮಣ್ಯ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.