ಶಿವಮೊಗ್ಗ: ಅಪಾಯವನ್ನೂ ಲೆಕ್ಕಿಸದೆ ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರು, ಸ್ವಚ್ಛತೆಗಾಗಿ ಶ್ರಮಿಸಿದ ಪೌರಕಾರ್ಮಿಕರಿಗೆ ನಗರದ ತಿನಿಸು ಅಂಗಳ ಮಾಲೀಕರಿಂದ ಸನ್ಮಾನ ಮಾಡಲಾಯಿತು.
ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರ ಶ್ರಮ ಅಮೂಲ್ಯವಾದದ್ದು, ಅವರ ಸೇವೆಗೆ ನಮ್ಮ ಕೃತಜ್ಞತೆಗಳು, ಹಾಗಾಗಿ ಅವರನ್ನು ಗುರುತಿಸಿ ಸನ್ಮಾನ ಮಾಡುತ್ತಿದ್ದೆವೆ ಎಂದು ತಿನಿಸು ಅಂಗಡಿ ಮಾಲಿಕರು ಅಭಿಪ್ರಾಯ ವ್ಯಕ್ತಪಡಿಸಿದರು.