ಶಿವಮೊಗ್ಗ: ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ಸಿಎಂ ಬಿಎಸ್ವೈ ಅವರಿಗೆ ತವರು ಜಿಲ್ಲೆಯಲ್ಲಿ ಸನ್ಮಾನ ಮಾಡಲಾಯಿತು.
ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂಗೆ ರೈತರಿಂದ ಹಸಿರು ಶಾಲು, ಅಡಿಕೆ ಹಾರ ಹಾಕಿ, ಧವಸ ಧಾನ್ಯ ನೀಡಿ ಗೌರವಿಸಲಾಯಿತು. ರಾಜ್ಯ ಬಿಜೆಪಿ ವಿಶೇಷ ಸಭೆಗೂ ಮುನ್ನ ಪೆಸೆಟ್ ಕಾಲೇಜು ಆವರಣದಲ್ಲಿ ಸಿಎಂ ಯಡಿಯೂರಪ್ಪನವರು ಪಕ್ಷದ ಧ್ವಜಾರೋಹಣ ನೆರವೇರಿಸಿದರು. ನಂತರ ಗೋ ಪೂಜೆ ನಡೆಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಎಂ, ಇಂದು ಬಿಜೆಪಿ ಕಟ್ಟಿದ ಹಿರಿಯ ನಾಯಕರ ಆಸೆಯಂತೆ ರಾಜ್ಯವನ್ನು ಅಭಿವೃದ್ಧಿಯ ದಿಕ್ಕಿನಡಿ ತೆಗೆದುಕೊಂಡು ಹೋಗಲಾಗುತ್ತಿದೆ. ಜನ ನೆಮ್ಮದಿಯಿಂದ ಜೀವನ ನಡೆಸುವಂತಹ ಕಾರ್ಯ ಮಾಡಲಾಗುತ್ತಿದೆ. ನಮ್ಮ ಪಕ್ಷದ ಹಿರಿಯರ ಅಪೇಕ್ಷೆಯಂತೆ ಬಿಜೆಪಿ ಇಂದು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ ಎಂದರು. ನಮ್ಮ ಮುಂದಿನ ಗುರಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಟ 150 ಸೀಟು ಪಡೆಯುವಂತೆ ಕಾರ್ಯಕರ್ತರು ಕೆಲಸ ಮಾಡಬೇಕಿದೆ ಎಂದರು.
ಓದಿ: ಬಿಜೆಪಿಯದ್ದು 'ಮನಿ'ವಾದ, ಆರ್ಎಸ್ಎಸ್ ಶನಿ ಸಂತಾನ: ಕಾಂಗ್ರೆಸ್ ಮುಖಂಡರ ಆಕ್ರೋಶ
ನಂತರ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಸಿಎಂ ಯಡಿಯೂರಪ್ಪನವರು ನುಡಿದಂತೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ನಮಗೆಲ್ಲ ಮೂರು ಜನ ತಾಯಿಯರಿದ್ದಾರೆ. ಮುಖ್ಯವಾಗಿ ತಾಯಿನಾಡು, ನಮ್ಮನ್ನು ಹೆತ್ತ ತಾಯಿ ಹಾಗೂ ಹುಟ್ಟಿನಿಂದ ಸಾಯುವ ತನಕ ನಮ್ಮನ್ನು ಸಾಕುವ ಗೋ ಮಾತೆ. ಇಂತಹ ಗೋವಿನ ಹತ್ಯೆಯನ್ನು ನಿಷೇಧ ಮಾಡಿದ್ದು ನಿಜಕ್ಕೂ ನಮಗೆಲ್ಲ ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸನ್ಮಾನ ಮಾಡಲಾಯಿತು. ಈ ವೇಳೆ ಜನಸಂಘದಿಂದ ಪಕ್ಷಕ್ಕಾಗಿ ದುಡಿದ ಹಳೆಯ ಕಾರ್ಯಕರ್ತರಿಗೆ ಸನ್ಮಾನಿಸಲಾಯಿತು.