ETV Bharat / state

ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆಗೆ ರೈತರಿಂದ ವಿರೋಧ: ಫೆ.5ಕ್ಕೆ ಬೃಹತ್ ಪ್ರತಿಭಟನೆ - Shivamogga Airport

ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಉದ್ಘಾಟನೆಗೆ ಭೂಮಿ ಕೊಟ್ಟ ರೈತರಿಂದಲೇ ವಿರೋಧ ವ್ಯಕ್ತವಾಗಿದೆ. ಸರ್ಕಾರ ಕೊಟ್ಟ ಭರವಸೆ ಈಡೇರಿಸದ ಕಾರಣ ರೈತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

Shivamogga Airport
ಶಿವಮೊಗ್ಗ ವಿಮಾನ ನಿಲ್ದಾಣ
author img

By

Published : Feb 1, 2023, 7:27 AM IST

ಈಡೇರದ ಭರವಸೆ..ಫೆ.5 ರಂದು ರೈತರಿಂದ ಬೃಹತ್ ಪ್ರತಿಭಟನೆ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಲಿರುವ ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆಗೆ ರೈತರಿಂದ ವಿರೋಧ ವ್ಯಕ್ತವಾಗಿದೆ. ಶಿವಮೊಗ್ಗ ತಾಲೂಕು ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ‌‌ ನಿಲ್ದಾಣ ಲೋಕಾರ್ಪಣೆಗೆ ಫೆ.27ರಂದು ದಿನಾಂಕ ನಿಗದಿಯಾಗಿದೆ. ಆದರೆ, ಸರ್ಕಾರ ಭೂಮಿ ಕೊಟ್ಟ ರೈತರಿಗೆ ಒಂದು‌ ನಿವೇಶನ ಹಾಗೂ ಉದ್ಯೋಗದ ಭರವಸೆ ನೀಡಿತ್ತು. ಕೊಟ್ಟ ಭರವಸೆ ಈಡೇರದ ಕಾರಣ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಬಿಎಸ್​​ವೈ ಕನಸಿನ ಕೂಸು: ಸೋಗಾನೆ ವಿಮಾನ ನಿಲ್ದಾಣವು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ 'ಕನಸಿನ ಕೂಸು' ಎಂದರೆ ತಪ್ಪಾಗಲಾರದು. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದ ವೇಳೆ ವಿಮಾನ‌ ನಿಲ್ದಾಣ ಮಾಡುವ ಕನಸು ಕಂಡಿದ್ದರು. ಇದಕ್ಕಾಗಿ ಸೋಗಾನೆಯ ಸರ್ವೆ ನಂಬರ್ 120ರಲ್ಲಿ ಇದ್ದ ಬಗರ್ ಹುಕುಂ ಭೂಮಿ ಸುಮಾರು 530.21 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲಾಗಿತ್ತು.

ಈ ಭಾಗ ಸಂಪೂರ್ಣ ಬಗರ್ ಹುಕುಂ ಜಾಗವಾದ ಕಾರಣ ಪ್ರತಿಯೊಬ್ಬ ರೈತರಿಗೆ‌ 4 ಎಕರೆ ಭೂಮಿ ಮೀರದಂತೆ ಎಕರೆಗೆ 2 ಲಕ್ಷ ರೂ ನೀಡುವ ತೀರ್ಮಾನದ ಜತೆಗೆ ಭೂಮಿ ಕಳೆದು ಕೊಳ್ಳುವವರಿಗೆ ಪರ್ಯಾಯ ನಿವೇಶನ ಸೇರಿದಂತೆ ಮನೆಗೊಂದು ಕೆಲಸ ನೀಡುವ ಭರವಸೆಯನ್ನು ನೀಡಿದ್ದರು. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕಳೆಗೆ ಇಳಿದ ನಂತರ ಇದು ಕುಂಟುತ್ತಾ ಸಾಗಿತು. ಶಿವಮೊಗ್ಗ ವಿಮಾನ ನಿಲ್ದಾಣದ ಜತೆಗೆ ಪ್ರಾರಂಭವಾದ ಕಲಬುಗಿ ವಿಮಾನ ನಿಲ್ದಾಣ ಕಾಮಗಾರಿ ಮುಕ್ತಾಯವಾಗಿ ಸಂಚಾರಕ್ಕೆ ಅವಕಾಶ ದೂರೆಯಿತು. ಆದರೆ, ಶಿವಮೊಗ್ಗ ವಿಮಾನ ನಿಲ್ದಾಣ ಕುಂಟುತ್ತಾ ಸಾಗಿತು.

ಫೆ.27 ರಂದು ಲೋಕಾರ್ಪಣೆ: ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಲೇ ಹಳೆಯ ಗುತ್ತಿಗೆದಾರನ್ನು ಬಿಟ್ಟು ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಡಲಾಯಿತು. ಹಾಲಿ ಇದರ ಕಾಮಗಾರಿಯನ್ನು ನ್ಯಾಷನಲ್ ಕನ್ಸಟ್ರಕ್ಷನ್​ಗೆ ವಹಿಸಲಾಗಿದ್ದು, ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿದೆ. ಫೆ.27 ರಂದು ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಾಗುವುದು. ಇದರ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರ‌ ಮೋದಿ ಆಗಮಿಸುತ್ತಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ಘೋಷಿಸಿದ್ದಾರೆ‌.

ವಿಮಾನ ನಿಲ್ದಾಣದ ವಿಶೇಷತೆ: ಮಲೆನಾಡಿನ ಪ್ರಥಮ ವಿಮಾನ ನಿಲ್ದಾಣ ಎಂಬ ಖ್ಯಾತಿ. ವಿಮಾನ ನಿಲ್ದಾಣ ಕಮಲಾಕೃತಿಯಲ್ಲಿದೆ. ಇದು ರಾಜ್ಯದ 2ನೇ ಅತಿ ದೊಡ್ಡದಾದ ವಿಮಾನದ ರನ್ ವೇ ಹೊಂದಿದೆ. ಆರಂಭದಲ್ಲಿ 1,200 ಮೀಟರ್ ರನ್ ವೇ ಆಗಿತ್ತು. ಈಗ 2050 ಮೀಟರ್ ಉದ್ದದ ರನ್ ವೇ ತಯಾರಾಗಿದೆ. ರಾತ್ರಿ ವೇಳೆಯಲ್ಲಿ ಸಹ ವಿಮಾನ‌ ಇಳಿಯುವ ಸೌಲಭ್ಯ ಒದಗಿಸಲಾಗಿದೆ.

ರೈತರ ವಿರೋಧ ಯಾಕೆ: ವಿಮಾನ ನಿಲ್ದಾಣ ನಿರ್ಮಾಣದ ಬಗರ್ ಹುಕುಂ ಭೂಮಿ ನೀಡಲು ಒಪ್ಪದ ರೈತರಿಗೆ ಪ್ರತಿ ಎಕರೆಗೆ 2 ಲಕ್ಷ ರೂ., ಒಂದು‌ ನಿವೇಶನ ಹಾಗೂ ಉದ್ಯೋಗದ ಭರವಸೆ ನೀಡಲಾಗಿತ್ತು. ಆದರೆ ಕೊಟ್ಟ ಭರವಸೆ ಇನ್ನೂ ಈಡೇರಿಲ್ಲ. ಕಳೆದ 15 ವರ್ಷಗಳಿಂದ ನಿವೇಶನಕ್ಕಾಗಿ ಮನವಿ ಸಲ್ಲಿಸುತ್ತಾ ಬಂದಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ರೈತರು ಈಗ ಹೈಕೊರ್ಟ್ ಮೇಟ್ಟಿಲೇರಿದ್ದಾರೆ.

ಕೋರ್ಟ್ ರೈತರಿಗೆ ನಿವೇಶನ ನೀಡುವಂತೆ ಸೂಚನೆ ನೀಡಿದ್ದರು ಸಹ ಜಿಲ್ಲಾಧಿಕಾರಿಗಳು ಕೋರ್ಟ್​ನಲ್ಲಿರುವ ಪ್ರಕರಣ ವಾಪಸ್ ತೆಗೆದುಕೊಂಡು ಬಂದರೆ, ನಿಮಗೆ ನಿವೇಶನ ನೀಡುವುದಾಗಿ ಹೇಳುತ್ತಿದ್ದಾರೆ. ಭೂಮಿ ಪಡೆಯುವಾಗ ಜಿಲ್ಲಾಡಳಿತ ಪ್ರತಿ ಎಕರೆಗೆ 2 ಲಕ್ಷ ರೂ ಹಣ, 60*40 ನಿವೇಶನ, ಆಶ್ರಯ ಯೋಜನೆಯಡಿ ಮನೆ ನಿರ್ಮಾಣ, ಗ್ರಾಮದಲ್ಲಿದ್ದ ವೃದ್ಧರಿಗೆ ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಹಾಗೂ ವಿಧಾವ ವೇತನ ನೀಡುವುದಾಗಿ ತಿಳಿಸಿದ್ದರು. ಆದರೆ ಈಗ 15 ವರ್ಷ ಕಳೆದರು ಸಹ ಯಾವುದೇ ಪ್ರಯೋಜನವಾಗಿಲ್ಲ.

ರನ್ ವೇಗಾಗಿ ವಶ ಪಡೆದ ಭೂಮಿ ಪಹಣಿ ರದ್ದು?: ವಿಮಾನ ನಿಲ್ದಾಣದ ರನ್ ವೇಗಾಗಿ ಮತ್ತೆ 40.18 ಎಕರೆ ಭೂಮಿಯನ್ನು 13 ಜನ ರೈತರಿಂದ ವಶಕ್ಕೆ ಪಡೆಯಲಾಯಿತು. ಪ್ರತಿ ಎಕರೆಗೆ 40 ಲಕ್ಷ ರೂ. ನಿಗದಿ ಮಾಡಲಾಯಿತು. ಇದೆಲ್ಲ ಹಾಲಿ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ‌ನಾಯ್ಕ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತೀರ್ಮಾನವಾಗಿತ್ತು.

ದ್ವಂದ್ವ ಆಡಳಿತ: ರನ್ ವೇಗಾಗಿ ಕೊಟ್ಟ ಭೂಮಿ ಬಗರ್ ಹುಕುಂ ಸಾಗುವಳಿ‌ ಮಾಡುವವರಿಗೆ ಸರ್ಕಾರ ಖಾತೆ ಪಾಣಿ ಮಾಡಿಸಿಕೊಟ್ಟಿತ್ತು. ರೈತರಿಗೆ ನೀಡಿದ ಭೂಮಿ ರನ್ ವೇಗೆ ಮಾರಾಟ ಮಾಡಿದ ನಂತರ ತಾಲೂಕು ಆಡಳಿತದಿಂದ ಬಗರ್ ಹುಕುಂ ಭೂಮಿಯನ್ನು ಯಾಕೆ? ರದ್ದು ಮಾಡಬಾರದು ಎಂದು ಪತ್ರ ಕಳುಹಿಸಿಕೊಡುತ್ತಾರೆ. ಬಿಜೆಪಿ ಶಾಸಕರು ನೀಡಿದ ಭೂಮಿಯನ್ನು ತಾಲೂಕು ಆಡಳಿತ ಯಾಕೆ ರದ್ದು ಮಾಡಬಾರದು ಎಂದು ಪತ್ರ ನೀಡುತ್ತದೆ. ಇದು ಬಿಜೆಪಿಯ ದ್ವಂದ್ವ ಆಡಳಿತ ಎಂದು ಹೋರಾಟಗಾರಾದ ವಿಜಯ್ ಕುಮಾರ್ ಕಿಡಿದ್ದಾರೆ.

ಹೋರಾಟ ಅನಿವಾರ್ಯ: "ನಾವು ಭೂಮಿ ನೀಡಿದಾಗಿಂದ ನಿವೇಶನ ನೀಡಿ ಎಂದು ಡಿಸಿ, ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಸೇರಿದಂತೆ ಎಲ್ಲಾರಿಗೂ ಮನವಿ ಸಲ್ಲಿಸಿ ಸಾಕಾಗಿದೆ.‌ ಇನ್ನೂ ನಮಗೆ ಹೋರಾಟ ಅನಿವಾರ್ಯ" ಎನ್ನುತ್ತಾರೆ ರೈತ ಶಿವಕುಮಾರ್. "ನಾವೆಲ್ಲ ಇವರ ಮೇಲೆ ನಂಬಿಕೆ ಇಲ್ಲದೆ ಹೈಕೋರ್ಟ್ ಮೊರೆ ಹೋಗಿದ್ದೃವೆ. ಈಗ ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಕೇಸ್​​ ವಾಪಸ್ ತೆಗೆದುಕೊಂಡು ಬಂದರೆ, ನಿವೇಶನ ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ ನಮಗೆ ಇವರ ಮಾತಿನ ಮೇಲೆ‌ ನಂಬಿಕೆ ಇಲ್ಲ. ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿ ನಾವೆಲ್ಲ ಬೀದಿ ಪಾಲಾಗಿದ್ದೇವೆ" ಎಂದು ರೈತ ಕೃಷ್ಣಪ್ಪ ಅಳಲು ತೋಡಿಕೊಂಡಿದ್ದಾರೆ.

ಫೆ.5ಕ್ಕೆ ಬೃಹತ್ ಪ್ರತಿಭಟನೆ: ಫೆ.27ರಂದು ವಿಮಾನ ನಿಲ್ದಾಣ ಉದ್ಘಾಟನೆಗೆ ಆತುರ ತೋರುವ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ನೊಂದ ರೈತರಿಗೆ ನಿವೇಶನ ನೀಡಲು ತಯಾರಿಲ್ಲ. ಇದರಿಂದ ಜಿಲ್ಲಾಡಳಿತಕ್ಕೆ ಫೆಬ್ರವರಿ 4ರ ವರೆಗೆ ಕಾಲಾವಕಾಶ ನೀಡಲಾಗಿದೆ. ನಮ್ಮ ಬೇಡಿಕೆ‌ ಈಡೇರದೆ ಹೋದರೆ ಫೆ.5 ರಂದು ಜಿಲ್ಲೆಯ ಹಿರಿಯ ರಾಜಕಾರಣಿಗಳ ಜತೆಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ‌ ಪಂಚಾಯತ್ ಮಾಜಿ ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಫೆ.27ರಂದು ಪ್ರಧಾನಿಗಳಿಂದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ: ಬಿ.ಎಸ್.ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.