ETV Bharat / state

ಶಿವಮೊಗ್ಗ: ಮಾ. 20ರಂದು ನಡೆಯಲಿದೆ ಬೃಹತ್​​ ರೈತ ಸಮಾವೇಶ

ಕೇಂದ್ರ ಸರ್ಕಾರದ ಜನ ವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರೈತ ಹೋರಾಟದ ಭೂಮಿ ಶಿವಮೊಗ್ಗದಿಂದಲೇ ಹೋರಾಟ ಪ್ರಾರಂಭವಾಗಬೇಕು ಎನ್ನುವ ಉದ್ದೇಶದಿಂದ ದಕ್ಷಿಣ ಭಾರತದ ಮೊದಲ ರೈತ ಬಹೃತ್ ಸಮಾವೇಶವನ್ನು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಮಾರ್ಚ್ 20 ರಂದು ಹಮ್ಮಿಕೊಳ್ಳಲಾಗಿದೆ.

Farmer convention program on march 20th at shimogga
ಶಿವಮೊಗ್ಗ: ಮಾ. 20ರಂದು ನಡೆಯಲಿದೆ ರೈತ ಸಮಾವೇಶ
author img

By

Published : Mar 18, 2021, 6:08 PM IST

ಶಿವಮೊಗ್ಗ: ದಕ್ಷಿಣ ಭಾರತದ ಮೊದಲ ರೈತ ಸಮಾವೇಶ ಮಾರ್ಚ್ 20ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ನಡೆಯಲಿದೆ ಎಂದು ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜನ ವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರೈತ ಹೋರಾಟದ ಭೂಮಿ ಶಿವಮೊಗ್ಗದಿಂದಲೇ ಹೋರಾಟ ಪ್ರಾರಂಭವಾಗಬೇಕು ಎನ್ನುವ ಉದ್ದೇಶದಿಂದ ದಕ್ಷಿಣ ಭಾರತದ ಮೊದಲ ರೈತ ಬಹೃತ್ ಸಮಾವೇಶವನ್ನು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಮಾರ್ಚ್ 20ರಂದು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್

ಸಮಾವೇಶದಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್, ದರ್ಶನ್ ಪಾಲ್, ಯದುವೀರ್ ಸಿಂಗ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಸಮಾವೇಶದ ಅಧ್ಯಕ್ಷತೆಯನ್ನು ರೈತ ಸಂಘದ ಮುಖಂಡ ಎನ್.ಡಿ.ಸುಂದರೇಶ್ ಅವರ ಧರ್ಮಪತ್ನಿ ಶೋಭಾ ಸುಂದರೇಶ್ ವಹಿಸಲಿದ್ದಾರೆ. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದ್ದು, ಕೋವಿಡ್​ನ ಎಲ್ಲಾ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು.

ಇದನ್ನೂ ಓದಿ: ಶ್ರೀ ಅಮೃತೇಶ್ವರಿ ಸನ್ನಿಧಿಯಲ್ಲಿ ತುಲಾಭಾರ ಮಾಡಿ ಹರಕೆ ತೀರಿಸಿದ ಮುಸ್ಲಿಂ ಕುಟುಂಬ

ಈ ಸಮಾವೇಶದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಮುಂದೆ ಯಾವ ರೀತಿಯಲ್ಲಿ ತೆಗೆದುಕೊಂಡು ಹೋಗಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ ಹಾಗೂ ದೇಶಕ್ಕೆ ಸಂದೇಶ ಸಾರುವ ಸಮಾವೇಶ ಇದಾಗಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.