ಶಿವಮೊಗ್ಗ: ಸೊರಬದ ತಹಶೀಲ್ದಾರ್ ಕಚೇರಿಯಲ್ಲಿ ನಕಲಿ ಸಾಗುವಳಿ ಪತ್ರ ತಯಾರು ಮಾಡಲಾಗುತ್ತಿದೆ ಎಂದು ಶಾಸಕ ಕುಮಾರ ಬಂಗಾರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಸೊರಬದ ಆಡಳಿತ ಭವನದಲ್ಲಿ ನಡೆದ ತಾಪಂ ಸಭೆಯಲ್ಲಿ ನಕಲಿ ಹಕ್ಕುಪತ್ರ ಪ್ರದರ್ಶಿಸಿದ ಶಾಸಕರು, ಈ ರೀತಿಯ ನಕಲಿ ಹಕ್ಕುಪತ್ರಗಳು ತಹಶೀಲ್ದಾರ್ ಕಚೇರಿಯಲ್ಲಿಯೇ ತಯಾರು ಆಗುತ್ತಿವೆ. ಇವಕ್ಕೆ ಇಲ್ಲೇ ಸೀಲು ಬೀಳುತ್ತಿದೆ. ಹಾಗಾಗಿ ಈ ರೀತಿಯ ನಕಲಿ ಹಕ್ಕುಪತ್ರ ಕಂಡು ಬಂದ್ರೆ, ತಕ್ಷಣ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಓದಿ: ಮಲೆನಾಡಿನಲ್ಲಿ 'ಸ್ಮಾರ್ಟ್' ಆದ ಸರ್ಕಾರಿ ಶಾಲೆಗಳು
ಅರಣ್ಯಾಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಬಡವರಿಗೆ ಸಹಾಯ ಮಾಡಲು ಆಗುವುದಿಲ್ಲ ಎಂದರು.