ಶಿವಮೊಗ್ಗ: ಅರಣ್ಯ ಪ್ರದೇಶದಲ್ಲಿ ವೀಕೆಂಡ್ ಪಾರ್ಟಿ ಮಾಡುತ್ತಿದ್ದವರ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಶಿವಮೊಗ್ಗ ಅಬಕಾರಿ ರೇಂಜ್ ವ್ಯಾಪ್ತಿಯಲ್ಲಿ ಹಲವು ಕಡೆ ದಾಳಿ ನಡೆಸಿ ಸಾರ್ವಜನಿಕ ಪ್ರದೇಶ, ಅರಣ್ಯಗಳಲ್ಲಿ ಪಾರ್ಟಿ ಮಾಡುತ್ತಿದ್ದವರ ಕಿಕ್ ಇಳಿಸಿದ್ದಾರೆ. ಅರಣ್ದ ಹಲವು ಕಡೆ ಕೂಂಬಿಂಗ್ ಕೂಡ ನಡೆಸಲಾಗಿದೆ.
![weekend party in forest](https://etvbharatimages.akamaized.net/etvbharat/prod-images/kn-smg-01-abakari-elake-ka10011_08062020135758_0806f_1591604878_958.jpg)
25 ಕಡೆ ದಾಳಿ ನಡೆಸಿ 19 ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಡಾ.ಅಜಿತ್‌ಕುಮಾರ್ ಮಾಹಿತಿ ನೀಡಿದ್ದಾರೆ.
![weekend party in forest](https://etvbharatimages.akamaized.net/etvbharat/prod-images/kn-smg-01-abakari-elake-ka10011_08062020135758_0806f_1591604878_9.jpg)
ಅರಣ್ಯ ವ್ಯಾಪ್ತಿಯಲ್ಲಿ ಮತ್ತು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಮದ್ಯ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ 5.2 ಲೀಟರ್ ಬಿಯರ್ ಮತ್ತು 3.780 ಲೀಟರ್ ಐಎಂಎಲ್ ಮದ್ಯ ವಶಕ್ಕೆ ಪಡೆಯಲಾಗಿದೆ.