ಶಿವಮೊಗ್ಗ: ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಜಿಲ್ಲೆಗೆ ಬಂದು ಆರ್ಎಎಫ್ ಘಟಕ ನಮ್ಮ ಕೊಡುಗೆ ಎಂದು ಸುಳ್ಳು ಹೇಳಿ ಹೋಗಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಕಿಡಿಕಾರಿದರು.
ನಿನ್ನೆ ವಿಐಎಸ್ಎಲ್ ಕುರಿತು ಮನವಿ ನೀಡಲು ಹೋದ ಕಾರ್ಮಿಕರನ್ನು ಹಾಗೂ ಕಾಂಗ್ರೆಸ್ ಮುಖಂಡರನ್ನು ಬಂಧಿಸಲಾಗಿದೆ. ಇವರು ನಮ್ಮ ಜಿಲ್ಲೆಗೆ ಬಂದು ನಮ್ಮ ಸಮಸ್ಯೆ ಕೇಳದೇ ಹೋದ್ರೆ ಇವರೆಂತಹ ಗೃಹ ಸಚಿವರು ಎಂದು ರೇಗಿದರು.
ರಾಜ್ಯದಲ್ಲಿ ವಿಪಕ್ಷ ಇಲ್ಲ ಎಂಬ ಕೆಲ ಬಿಜೆಪಿ ನಾಯಕರುಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಪ್ರತಿದಿನ ನಾವು ಟೀಕೆ ಮಾಡುತ್ತಲೇ ಬಂದಿದ್ದೇವೆ. ಅವರು ಕಿವಿಗೆ ಹಾಕಿಕೊಳ್ಳುವುದಿಲ್ಲ ಅಂದರೆ ಏನು ಮಾಡುವುದು. ನಮ್ಮ ಪಕ್ಷದಲ್ಲಿ ಪ್ರಬುದ್ಧ ನಾಯಕರಿರುವಂತೆ ಬಿಜೆಪಿ ಪಕ್ಷದಲ್ಲಿಲ್ಲ. ನಮ್ಮ ಪಕ್ಷದಲ್ಲಿ ಪ್ರತಿಯೊಬ್ಬರು ಲೀಡರ್ಗಳೇ ಅದನ್ನೇ ಗುಂಪುಗಾರಿಕೆ ಅಂದರೆ ಹೇಗೆ ಎಂದು ಪ್ರಶ್ನಿಸಿದರು.
ಇತ್ತೀಚಿಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಗೆಲುವು ಸಾಧಿಸಿದ್ದಾರೆ. ಆದರೆ, ಬಿಜೆಪಿಯವರು ನಾವು ಹೆಚ್ಚು ಗೆದ್ದಿದ್ದೇವೆ ಎಂದು ಸುಳ್ಳು ಅಂಕಿ-ಅಂಶಗಳನ್ನು ನೀಡುತ್ತಿದ್ದಾರೆ ಎಂದ್ರು.
ಇದನ್ನೂ ಓದಿ:ಅಮಿತ್ ಶಾ ಭೇಟಿಯಾದ ಅತೃಪ್ತ ಶಾಸಕ ಅರವಿಂದ ಬೆಲ್ಲದ: ದೆಹಲಿಗೆ ಬರುವಂತೆ ಸೂಚನೆ