ETV Bharat / state

ತಾಳಗುಪ್ಪ- ಬೆಂಗಳೂರು ರೈಲಿನ ಇಂಜಿನ್-ಬೋಗಿಗಳ ಸಂಪರ್ಕ ಕಡಿತ; ತಡವಾಗಿ ಸಂಚಾರ - Bangalore Super Fast Train

ತಾಳಗುಪ್ಪದಿಂದ ಬೆಂಗಳೂರಿಗೆ ಹೊರಡುವ ತಾಳಗುಪ್ಪ- ಬೆಂಗಳೂರು ಸೂಪರ್ ಫಾಸ್ಟ್ ರೈಲು ಇಂಜಿನ್ ಹಾಗೂ ಬೋಗಿಗಳ ಸಂಪರ್ಕ ಕಡಿದುಕೊಂಡು ತಡವಾಗಿ ಸಂಚರಿಸಿದೆ.

train
ರೈಲು
author img

By

Published : May 26, 2023, 10:56 AM IST

Updated : May 26, 2023, 11:24 AM IST

ಶಿವಮೊಗ್ಗ: ತಾಳಗುಪ್ಪ- ಬೆಂಗಳೂರು ಸೂಪರ್ ಫಾಸ್ಟ್ ರೈಲಿನ ಇಂಜಿನ್ ಹಾಗೂ ಬೋಗಿಗಳ ನಡುವೆ ಸಂಪರ್ಕ ತಪ್ಪಿದ್ದು ತಡವಾಗಿ ಸಂಚರಿಸಿದೆ. ರೈಲು ಇಂದು ಬೆಳಗ್ಗೆ 7.15 ಕ್ಕೆ ಶಿವಮೊಗ್ಗ ನಿಲ್ದಾಣ ಬಿಟ್ಟಿತ್ತು. ಭದ್ರಾವತಿಗೆ ಬೆಳಗ್ಗೆ 7:40 ರ ಸುಮಾರಿಗೆ ತಲುಪಬೇಕಿತ್ತು. ಭದ್ರಾವತಿ ಪಟ್ಟಣ ಸಮೀಪದ ಬಿಳಕಿ ಕ್ರಾಸ್ ಬಳಿ ನಿಧಾನವಾಗಿ ಚಲಿಸುತ್ತಾ ನಿಂತು ಬಿಟ್ಟಿದೆ. ಪ್ರಯಾಣಿಕರು ಏನಾಯಿತು ಎಂದು ನೋಡುವಷ್ಟರಲ್ಲಿ ಇಂಜಿನ್ ಹಾಗೂ ಬೋಗಿಗಳ ನಡುವಿನ ಸಂಪರ್ಕ ತಪ್ಪಿದ್ದು ಗೋಚರಿಸಿದೆ. ಇದನ್ನರಿತ ಲೋಕೊ ಪೈಲಟ್ ಇಂಜಿನ್ ನಿಲ್ಲಿಸಿ, ವಾಪಸ್ ತಂದು ಬೋಗಿಗೆ ಜೋಡಿಸುವ ಯತ್ನ ಮಾಡಿದರೂ ಸಾಧ್ಯವಾಗಲಿಲ್ಲ.

ಮತ್ತೆ ಭದ್ರಾವತಿಯಿಂದ ಸಿಬ್ಬಂದಿಯನ್ನು ಕರೆಯಿಸಿ ತಾಂತ್ರಿಕ ದೋಷ ಸರಿಪಡಿಸಿಕೊಂಡು ಭದ್ರಾವತಿ ಪಟ್ಟಣಕ್ಕೆ ರೈಲು ತಲುಪಿದೆ. ಅಷ್ಟರಲ್ಲಿ ಬಿರೂರಿನಿಂದ ಇನ್ನೊಂದು ಇಂಜಿನ್ ಅನ್ನು ಭದ್ರಾವತಿಗೆ ಕರೆ ತಂದು ಸೇರಿಸಲಾಯಿತು. ಇದಾದ ನಂತರ ಭದ್ರಾವತಿಯಿಂದ ರೈಲು 8:40 ರ ಸುಮಾರಿಗೆ ಬೆಂಗಳೂರು ಕಡೆ ಪ್ರಯಾಣಿಸಿತು. ತಾಂತ್ರಿಕ ಸಮಸ್ಯೆ ಸರಿಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೂದಲೆಳೆ ಅಂತರದಲ್ಲಿ ರೈಲು ಡಿಕ್ಕಿಯಿಂದ ಆನೆ ಪಾರು.. ವಿಡಿಯೋ

ಗಾಬರಿಯಾದ ಪ್ರಯಾಣಿಕರು: ತುರ್ತು ಸೇರಿದಂತೆ ಇತರೆ ಕೆಲಸಗಳಿಗೆ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಜನರು ಘಟನೆಯಿಂದ ಆತಂಕಗೊಂಡಿದ್ದರು. ಆದರೆ, ರೈಲ್ವೆ ಅಧಿಕಾರಿಗಳ ಸಕಾಲಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅನಾಹುತ ತಪ್ಪಿಸಿದ್ದರು ಮಹಿಳೆ: ಮಂಗಳೂರಿನ ನಗರದ ಪಡೀಲ್‌- ಜೋಕಟ್ಟೆ ಮಧ್ಯೆ ಇರುವ ಪಚ್ಚನಾಡಿ ಸಮೀಪದ ಮಂದಾರದಲ್ಲಿ ಮಾರ್ಚ್ 21 ರ ಮಧ್ಯಾಹ್ನ 2.10 ರ ಸುಮಾರಿಗೆ ರೈಲ್ವೆ ಹಳಿಗೆ ಮರ ಉರುಳಿತ್ತು. ಅದೇ ಸಂದರ್ಭದಲ್ಲಿ ಮಂಗಳೂರಿನಿಂದ ಮುಂಬೈಗೆ ಮತ್ಸ್ಯಗಂಧ ರೈಲು ಚಲಿಸುತ್ತಿತ್ತು. ಅಪಾಯದ ಸೂಚನೆ ಅರಿತ ಚಂದ್ರಾವತಿ ಎಂಬ ಮಹಿಳೆ ಸಮಯ ಪ್ರಜ್ಞೆ ಮೆರೆದು, ಮನೆಯಲ್ಲಿದ್ದ ಕೆಂಪು ಬಟ್ಟೆಯನ್ನು ತಂದು ರೈಲು ಬರುವ ಸಮಯದ ವೇಳೆ ಪ್ರದರ್ಶಿಸಿದ್ದಾರೆ.​ ಅಪಾಯ ಅರಿತ ಲೋಕೊ ಪೈಲೆಟ್ ರೈಲಿನ ವೇಗ ಕಡಿಮೆ ಮಾಡಿ ರೈಲು ನಿಲ್ಲಿಸಿದ್ದಾರೆ. ಇದರಿಂದ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ರೈಲ್ವೆ ಇಲಾಖೆಯ ಕಾರ್ಮಿಕರು ಸೇರಿ ರೈಲು ಹಳಿ ಮೇಲೆ ಬಿದ್ದಿದ್ದ ಮರ ತೆರವು ಮಾಡಿದ್ದಾರೆ. ಚಂದ್ರಾವತಿಯವರ ಕಾರ್ಯಕ್ಕೆ ಎಲ್ಲೆಡೆಯಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ವಿಜಯಪುರದಲ್ಲಿ ಹಿಟ್​ &​ ರನ್ ಪ್ರಕರಣ​: ಅತ್ತೆ-ಅಳಿಯ ಸಾವು, ಇಬ್ಬರು ಮಕ್ಕಳಿಗೆ ಗಾಯ

ಬಿಹಾರದಲ್ಲಿ ಹಳಿ ತಪ್ಪಿದ ರೈಲು.. ತಪ್ಪಿದ ದೊಡ್ಡ ದುರಂತ

Last Updated : May 26, 2023, 11:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.