ಶಿವಮೊಗ್ಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ನೀರುಗಂಟಿಯೊಬ್ಬ ಸಾವನ್ನಪ್ಪಿರುವ ಘಟನೆ ಶಿಕಾರಿಪುರ ತಾಲೂಕು ಅಗ್ರಹಾರದ ಮುಚಡಿ ಗ್ರಾಮದಲ್ಲಿ ನಡೆದಿದೆ.
ಅಗ್ರಹಾರ ಮುಚಡಿಯ ಗ್ರಾಮ ಪಂಚಾಯತ್ನ ನೀರುಗಂಟಿಯಾದ ಮಲ್ಲೇಶಪ್ಪ ಬೆಳಗ್ಗೆ ನೀರು ಬಿಟ್ಟು ಬಂದಿದ್ದಾರೆ. ಆದರೆ ವಿದ್ಯುತ್ ಇಲ್ಲದ ಕಾರಣ ನೀರು ಬಂದಿರಲಿಲ್ಲ. ವಿದ್ಯುತ್ ಬಂದ ನಂತರ ಮೋಟಾರ್ ಆನ್ ಮಾಡಲು ಹೋದಾಗ ವಿದ್ಯುತ್ ತಗುಲಿ ನೀರುಗಂಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಲ್ಲೇಶಪ್ಪ ಹಲವು ವರ್ಷಗಳಿಂದ ನೀರುಗಂಟಿ ಕೆಲಸ ಮಾಡುತ್ತಿದ್ದ. ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.