ಶಿವಮೊಗ್ಗ: ಒಂದು ಕಾಲದಲ್ಲಿ ಜಿಲ್ಲೆಯ ಮಂಡಗದ್ದೆಯ ಜನಪ್ರಿಯ ಪಕ್ಷಿಧಾಮವು ಅತ್ಯಂತ ಪ್ರಖ್ಯಾತಿ ಪಡೆದಿತ್ತು. ಈಗ ಆ ಸ್ಥಳವು ಕಡಿಮೆ ವೈವಿಧ್ಯಮಯ ಪಕ್ಷಿಗಳನ್ನು ಹೊಂದಿರುವ ಸ್ಥಳವಾಗಿ ಮಾರ್ಪಟ್ಟಿದೆ.
ಪರಿಸರವಾದಿ ಅಜಯ್ ಕುಮಾರ್ ಶರ್ಮಾ ಪ್ರಕಾರ, ಹೊಲೆಲಕ್ಕಿ ಮರಗಳ ಕೊರತೆಯಿಂದಾಗಿ ವಲಸೆ ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೊಲೆಲಕ್ಕಿ ಮರಗಳು ಪಶ್ಚಿಮ ಘಟ್ಟದ ಸ್ಥಳೀಯ ಪ್ರಭೇದಗಳಾಗಿವೆ. ಈ ಭಾಗದಲ್ಲಿ ಇದನ್ನ ನೀರಿನ ನವಿಲಿನ ಕಾಲು ಮರ ಎಂದೇ ಕರೆಯಲಾಗುತ್ತದೆ . ಈ ಮರವು ಪಕ್ಷಿಗಳ ಗೂಡುಕಟ್ಟುವಿಕೆ ಮತ್ತು ಸಂತಾನೋತ್ಪತ್ತಿಗಾಗಿ ವಲಸೆ ಹಕ್ಕಿಗಳಿಗೆ ಆಶ್ರಯ ನೀಡುತ್ತದೆ.
ಒಂದು ದಶಕದಲ್ಲಿ, ಅಭಿವೃದ್ಧಿ ಚಟುವಟಿಕೆಗಳು, ರಸ್ತೆ ವಿಸ್ತರಣೆ, ಮರಳು ಹೊರತೆಗೆಯುವಿಕೆ ಮರದ ವೈವಿಧ್ಯತೆಗಳನ್ನ ನಾಶ ಮಾಡಿ ಬಿಟ್ಟಿದೆ. ಪರಿಣಾಮ ಕಾಡು ನಾಶ, ಅದರಲ್ಲೂ ಹೊಲೆಲಕ್ಕಿ ಮರಗಳ ಕೊರತೆಯಿಂದಾಗಿ ಪಕ್ಷಿಗಳು ಅನಿವಾರ್ಯ ಎಂಬಂತೆ ತಮ್ಮ ಸ್ಥಳಗಳನ್ನು ಬದಲಾಯಿಸುತ್ತಿವೆ ಎನ್ನುತ್ತಾರೆ ಅಜಯ್ ಕುಮಾರ್ ಶರ್ಮಾ.