ETV Bharat / state

ವರದಕ್ಷಿಣೆ ಕಿರುಕುಳ: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ - ಗೃಹಿಣಿ ಆತ್ಮಹತ್ಯೆ

ಶಿವಮೊಗ್ಗದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

Dowry Harassment
ಮಹಿಳೆ ಆತ್ಮಹತ್ಯೆ
author img

By

Published : Jan 21, 2021, 3:07 PM IST

ಶಿವಮೊಗ್ಗ: ಗಂಡನ ಮನೆಯವರ ಕಿರುಕುಳದಿಂದ ಗೃಹಿಣಿ ಬೇಸತ್ತು‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ನ್ಯೂ ಮಂಡ್ಲಿಯ ಎರಡನೇ ಕ್ರಾಸ್​ ನಿವಾಸಿ ಸವಿತ (31) ಆತ್ಮಹತ್ಯೆಗೆ ಶರಣಾದ ಗೃಹಿಣಿ.

ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ಸವಿತ ಜಾವಳ್ಳಿಯವಳಾಗಿದ್ದು, ಈಕೆ ನ್ಯೂ ಮಂಡ್ಲಿ ನಿವಾಸಿಯಾದ ಆಟೋ ಚಾಲಕ ಹೇಮಂತ್​ ಎಂಬುವರನ್ನು 10 ವರ್ಷದ ಹಿಂದೆ ಮದುವೆಯಾಗಿದ್ಧಳು. ಮದುವೆಯಾದಾಗಿನಿಂದ ಹೇಮಂತ್​, ಆತನ ತಾಯಿ ಹಾಗೂ ಸಹೋದರಿಯರು ಕಿರುಕುಳ‌ ನೀಡುತ್ತಿದ್ದರು. ಪ್ರತಿದಿನ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ‌ ನೀಡುತ್ತಿದ್ದರು ಎನ್ನಲಾಗಿದೆ.

ಇವರಿಬ್ಬರಿಗೂ 7 ವರ್ಷದ ಮಗನಿದ್ದಾನೆ. ಕಳೆದ ಆರು ತಿಂಗಳ ಹಿಂದೆ ಹೇಮಂತ್​ ಸವಿತ ಮೈ ಮೇಲೆ ಬಿಸಿ ನೀರು ಎರಚಿದ್ದರು. ಇದರಿಂದ ಸವಿತರವರ ಎದೆ, ಕುತ್ತಿಗೆ ಭಾಗ ಸುಟ್ಟಿತ್ತು. ಈ ವೇಳೆ ಸವಿತ ತವರು ಮನೆಯವರು ಬಂದು ಚಿಕಿತ್ಸೆ ಕೊಡಿಸಿದ್ದರು. ತವರು ಮನೆಯವರು ಬಂದು ಕೇಳಿದಾಗ ಕಷ್ಟವನ್ನು ಕೇಳಿದ್ರೆ, ಸವಿತ ಯಾವುದೇ ವಿಚಾರವನ್ನು ಹೇಳುತ್ತಿರಲಿಲ್ಲ. ಆದರೆ ನಿನ್ನೆ ಮಧ್ಯಾಹ್ನ ಸವಿತ ತನ್ನ ಅಕ್ಕನ ಜೊತೆ ಪೋನ್​ನಲ್ಲಿ ಗಂಡ ಹಾಗೂ ತವರು ಮನೆಯವರು ನೀಡಿದ ಕಿರುಕುಳದ ಬಗ್ಗೆ ತಿಳಿಸಿದ್ದಾರೆ. ಸಂಜೆಯಾಗುವಷ್ಟರಲ್ಲಿ ಸವಿತ ಗಂಡ ಹೇಮಂತ್​ ಸವಿತ ಅಕ್ಕನಿಗೆ ಪೋನ್ ಮಾಡಿ, ನಿಮ್ಮ ತಂಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಬಂದು ಶವವನ್ನು ತೆಗೆದುಕೊಂಡು ಹೋಗಬೇಕೆಂದು ತಿಳಿಸಿದ್ದಾನೆ.

ಸವಿತ ಕುಟುಂಬಸ್ಥರು ಬರುವಷ್ಟರಲ್ಲಿ ಹೇಮಂತ್​ ಹೋಗಿ‌ ಪೊಲೀಸ್ ಠಾಣೆಯಲ್ಲಿ ಕುಳಿತುಕೊಂಡಿದ್ದಾನೆ. ಸದ್ಯ ಶವ ಪರೀಕ್ಷೆ ಮುಗಿಸಿ, ಶವವನ್ನು ಗಂಡನ ಮನೆ ಬಳಿ ತರಲಾಗಿದೆ. ಆದರೆ ಗಂಡನ ಮನೆಯವರು ಹೊರಗೆ ಬಾರದೆ ಮನೆಯ ಒಳಗೆ ಕುಳಿತುಕೊಂಡಿದ್ದಾರೆ. ಸದ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ. ಹೇಮಂತ್​ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸವಿತ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.