ಶಿವಮೊಗ್ಗ: ಸಾಗರ ತಾಲೂಕಿನ ಕಲ್ಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಸಕಸೆಕೊಡ್ಲುವಿನಲ್ಲಿ ಜೋಡಿ ಕೊಲೆ ನಡೆದಿದೆ.
ಕಸಕಸೆಕೊಡ್ಲು ಗ್ರಾಮದ ಬಂಗಾರಮ್ಮ (65) ಮತ್ತು ಪ್ರವೀಣ್ (36) ಕೊಲೆಯಾದವರು. ಇಬ್ಬರನ್ನು ಅವರ ಮನೆಯಲ್ಲಿಯೇ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕೊಲೆ ಇಂದು ಬೆಳಗಿನ ಜಾವ ನಡೆದಿದೆ ಎನ್ನಲಾಗ್ತಿದೆ.
ಪ್ರವೀಣ್ ಪತ್ನಿ ರೋಹಿಣಿ ಹಾಗೂ ಇವರ 10 ತಿಂಗಳ ಮಗುವಿನ ಎದುರೆ ಕೊಲೆ ನಡೆದಿದೆ. ಕೊಲೆಗೆ ಕೌಟುಂಬಿಕ ದ್ವೇಷ ಕಾರಣ ಎನ್ನಲಾಗ್ತಿದೆ.
ಸ್ಥಳಕ್ಕೆ ಎಸ್ಪಿ ಕೆ.ಎಂ. ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಳೆದ ತಿಂಗಳು ಸಾಗರ ಕರೂರು ಬಳಿ ದಂಪತಿಯ ಕೊಲೆ ನಡೆದಿತ್ತು. ಈಗ ಮತ್ತೊಂದು ಕೊಲೆ ನಡೆದಿರುವುದು ಈ ಭಾಗದ ಜನತೆಯಲ್ಲಿ ಆಂತಕ ಮೂಡಿಸಿದೆ.