ಶಿವಮೊಗ್ಗ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕೈ ತೊಳೆಯಲು ಹೆಚ್ಚು ನೀರು ಬಳಕೆಯಾಗುತ್ತಿದೆ. ಇದು ಅನಿವಾರ್ಯ ಸಹ ಆಗಿದೆ. ಆದರೆ ಜನರ ಈ ವೇಳೆಯಲ್ಲಿ ಅನಾವಶ್ಯಕವಾಗಿ ನೀರು ಪೋಲು ಮಾಡಬಾರದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ.ಯೋಗೀಶ್ ವಿನಂತಿಸಿ ಕೊಂಡಿದ್ದಾರೆ.
ಪಾಲಿಕೆ ಕಾಂಗ್ರೆಸ್ ಸದಸ್ಯರೊಂದಿಗೆ ನಗರಕ್ಕೆ ನೀರು ಪೊರೈಕೆ ಮಾಡುವ ಕೃಷ್ಣರಾಜೇಂದ್ರ ನೀರು ಸರಬರಾಜು ಮಂಡಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜನ ಲಾಕ್ ಡೌನ್ ಆಗಿದೆ ಮನೆಯಲ್ಲಿ ಇರ್ತಿವಿ ಎಂದು ಕಾರು, ಬೈಕ್ ತೊಳೆಯದೇ, ಅನಾವಶ್ಯಕವಾಗಿ ಕೈದೋಟಗಳಿಗೆ ನೀರು ಹಾಯಿಸಿ ನೀರು ಪೊಲು ಮಾಡಬಾರದು ಎಂದರು.
ಸದ್ಯ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿಗಾಗಿ ಈಗ 1.5 ಟಿಎಂಸಿ ನೀರು ಇದೆ. ಇದರಿಂದ ಈ ಬಾರಿಯ ಬೇಸಿಗೆಯಲ್ಲಿ ನೀರಿಗೆ ಸಮಸ್ಯೆ ಆಗುವುದಿಲ್ಲ. ಆದರೆ, ಜನರು ಸಹ ನೀರನ್ನು ಹಿತಮಿತವಾಗಿ ಬಳಕೆ ಮಾಡಬೇಕು ಎಂದು ಮನವಿ ಮಾಡಿ ಕೊಂಡರು.