ETV Bharat / state

ವಿಡಿಯೋ ನೋಡಿಲ್ಲ, ಮಾಹಿತಿ ಪಡೆದು ಮಾತನಾಡುವೆ: ಡಿ.ಕೆ.ಶಿವಕುಮಾರ್​

author img

By

Published : Mar 14, 2021, 12:44 PM IST

Updated : Mar 14, 2021, 2:34 PM IST

ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸಂತ್ರಸ್ತ ಯುವತಿ ವಿಡಿಯೋ ಮಾಡಿ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಳು. ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಡಿಕೆ ಶಿವಕುಮಾರ್​
DK Shivakumar

ಶಿವಮೊಗ್ಗ: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸಂತ್ರಸ್ತ ಯುವತಿ ವಿಡಿಯೋ ಮಾಡಿ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಳು. ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ನಾನು ಆ ವಿಡಿಯೋ ನೋಡಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಇನ್ನೂ ಆ ವಿಡಿಯೋ ನೋಡಿಲ್ಲ. ಇವತ್ತು ಬೆಳಿಗ್ಗೆ ಪತ್ರಿಕೆಗಳಲ್ಲಿ ಈ ವಿಚಾರದ ಕುರಿತಾಗಿ ಓದಿದ್ದೇನೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ. ತನಿಖೆ ನಡೆಯುವ ವೇಳೆ ನಾನು ಆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ಇದನ್ನೂ ಓದಿ: ಸಾಹುಕಾರ್ ವಿರುದ್ಧ ದಾಖಲಾಗುತ್ತಾ ಎಫ್ಐಅರ್?: ಮತ್ತೆ ಐವರನ್ನು ವಿಚಾರಣೆಗೆ ಕರೆದ ಎಸ್ಐಟಿ

ಕಾಂಗ್ರೆಸ್ ಪಕ್ಷದವರು ಈ ಪ್ರಕರಣದಲ್ಲಿದ್ದಾರೆ ಎಂದು ಒಬ್ಬ ಮಂತ್ರಿ ಮಾತನಾಡಿದ್ದಾರೆ. ಹೀಗಾಗಿ ನಾವುಗಳು ಈ ಬಗ್ಗೆ ಚರ್ಚಿಸಿ ಮಾತನಾಡುತ್ತೇವೆ. ಯುವತಿ ಹೇಳಿಕೆ ನೀಡಿರುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ಮಹಿಳಾ ಆಯೋಗದವರೂ ಇದ್ದಾರೆ ಎಂದರು.

ರಾಜಕೀಯ ಹಿನ್ನೆಲೆ ಇಲ್ಲ ಎಂದು ಯುವತಿ ಹೇಳಿದ್ದು ಗೊತ್ತಿಲ್ಲ. ಯಾರು, ಯಾವಾಗ, ಹೇಗೆ ಏನು ಅಂತಾ ಗೊತ್ತಿಲ್ಲ ಎಂದರು.

ರಮೇಶ್​ ಅವರು ನಾನಲ್ಲ, ನನಗೆ ಗೊತ್ತೇ ಇಲ್ಲ ಎಂದು ಹೇಳಿದ್ದರು. ಈಗ ಎಲ್ಲವನ್ನು ಹೇಳುತ್ತಿದ್ದಾರೆ ಎಂದರು.

Last Updated : Mar 14, 2021, 2:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.