ETV Bharat / state

ಬಿಜೆಪಿ ಕಡೆ ಮುಖ ಮಾಡಿದ ಸಾಗರದ ಕಾಂಗ್ರೆಸ್​ನ ‌ಕೆ ಎಸ್​ ಪ್ರಶಾಂತ್ - ಇಂಧನ ಸಚಿವ ಸುನೀಲ್ ಕುಮಾರ್

ಶಿವಮೊಗ್ಗದಲ್ಲಿ‌ ಹಿಂದೂ ಜಾಗರಣಾ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ತ್ರೈವಾರ್ಷಿಕ ಪ್ರಾಂತ ಸಮ್ಮೇಳನದ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಕೆ ಜಿ ಶಿವಪ್ಪ ಅವರ ಸುಪುತ್ರ ಕೆ ಎಸ್ ಪ್ರಶಾಂತ್ ಭಾಗಿಯಾಗಿದ್ದರು.

ಕರ್ನಾಟಕ ದಕ್ಷಿಣ ಪ್ರಾಂತ ತ್ರೈವಾರ್ಷಿಕ ಪ್ರಾಂತ ಸಮ್ಮೇಳನದ ಕಾರ್ಯಕ್ರಮದಲ್ಲಿ ಕೆ ಎಸ್​ ಪ್ರಶಾಂತ್

author img

By

Published : Nov 23, 2022, 5:31 PM IST

ಶಿವಮೊಗ್ಗ: ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ. ಕಳೆದ ವಾರ ಶಿಕಾರಿಪುರದ ಜೆಡಿಎಸ್ ಮುಖಂಡ ಹೆಚ್ ಟಿ ಬಳಿಗಾರ್ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಈಗ ಮಾಜಿ ಸಂಸದ ಕೆ ಜಿ ಶಿವಪ್ಪ ಅವರ ಸುಪುತ್ರ ಕೆ ಎಸ್ ಪ್ರಶಾಂತ್ ಅವರು ಸಂಘ ಪರಿವಾರವಾದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ಕೆ ಎಸ್ ಪ್ರಶಾಂತ್
ಕೆ ಎಸ್ ಪ್ರಶಾಂತ್

ಇಂದು ಶಿವಮೊಗ್ಗದಲ್ಲಿ‌ ಹಿಂದೂ ಜಾಗರಣಾ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ತ್ರೈವಾರ್ಷಿಕ ಪ್ರಾಂತ ಸಮ್ಮೇಳನದ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಪ್ರಶಾಂತ್ ಅವರು ಬಿಜೆಪಿ ಸೇರ್ಪಡೆ ಖಚಿತವಾದಂತೆ ಆಗಿದೆ. ಪ್ರಶಾಂತ್ ಅವರಿಗೆ ಸಾಗರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಅವಕಾಶ ಸಿಗಲಿದೆಯೇ? ಎಂಬ ಕುತೂಹಲ ಕೆರಳಿದೆ.

ಡಿ ಕೆ ಶಿವಕುಮಾರ್ ಜತೆ ಕೆ ಎಸ್​ ಪ್ರಶಾಂತ್
ಡಿ ಕೆ ಶಿವಕುಮಾರ್ ಜತೆ ಕೆ ಎಸ್​ ಪ್ರಶಾಂತ್

ಪ್ರಶಾಂತ್ ಅವರಿಗೆ ಸಾಗರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಅವಕಾಶ ಸಿಗಲಿದೆಯೇ? ಎಂಬ ಕುತೂಹಲ ಕೆರಳಿದೆ. ಪ್ರಶಾಂತ್ ಸಾಗರ ವಿಧಾನಸಭ ಕ್ಷೇತ್ರದ ಕಾಂಗ್ರೆಸ್ ಟಿಕೆಟ್​ಗಾಗಿ ಅರ್ಜಿಯನ್ನು ಸಲ್ಲಿಸಿಲ್ಲ. ಇದರಿಂದ ಪ್ರಶಾಂತ್ ಅವರು ಬಿಜೆಪಿಯಿಂದ ಸಾಗರದ ಅಭ್ಯರ್ಥಿಯಾಗುವ ಎಲ್ಲಾ ಲಕ್ಷಣಗಳಿವೆ. ಕೆ ಎಸ್ ಪ್ರಶಾಂತ್ ಅವರು ಇಂಧನ ಸಚಿವ ಸುನೀಲ್ ಕುಮಾರ್ ಅವರ ಸಂಬಂಧಿ ಆಗಿದ್ದಾರೆ.

ಓದಿ: ಚುನಾವಣಾ ಅರ್ಜಿ ಹಾಕುವ ಮೊದಲೇ ಟಿಕೆಟ್ ಘೋಷಣೆ: ಕೆ.ಎಸ್​ ಈಶ್ವರಪ್ಪ ಆಕ್ರೋಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.