ಶಿವಮೊಗ್ಗ: ಗ್ರಾಮೀಣಾಭಿವೃದ್ದಿ, ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.
ಮಲ್ಲೇಶ್ವರ ನಗರದ ಜಯಲಕ್ಷ್ಮಿ ನಿವಾಸದಲ್ಲಿ ಕುಟುಂಬ ಸಮೇತರಾಗಿ ಗೋ ಪೊಜೆ ಸಲ್ಲಿಸಿದರು. ತಾವೇ ಸಾಕಿರುವ ಹಸುವಿಗೆ ಪೊಜೆ ಸಲ್ಲಿಸಿ ಭಕ್ತಿಭಾವ ಮೆರೆದರು.
ಪತ್ನಿ ಜಯಲಕ್ಷ್ಮಿ, ಪುತ್ರ ಕಾಂತೇಶ್,ಸೊಸೆ ಶಾಲಿನಿ ಹಾಗೂ ಮೊಮ್ಮಕ್ಕಳು ಈ ವೇಳೆ ಸಂಭ್ರಮಪಟ್ಟರು.