ಶಿವಮೊಗ್ಗ : ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಜಿಲ್ಲಾ ಕಾಂಗ್ರೆಸ್ , ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಕ್ಷಣ ವಾಪಸ್ ಪಡೆಯಬೇಕು. ಇದು ದೇಶದ ಜನರನ್ನು ಬೇರ್ಪಡಿಸುವ ಕಾಯ್ದೆಯಾಗಿದೆ. ಇದರಿಂದ ದೇಶದ ಏಕತೆಗೆ ಧಕ್ಕೆ ಬಂದಂತೆ ಆಗುತ್ತದೆ. ಪಾಕಿಸ್ತಾನ, ಅಫ್ಘಾನಿಸ್ಥಾನ ಹಾಗೂ ಬಾಂಗ್ಲಾದೇಶಗಳಲ್ಲಿನ ಅಲ್ಪ ಸಂಖ್ಯಾತರಾದ ಹಿಂದೂ, ಸಿಖ್, ಜೈನ್, ಕ್ರಿಶ್ಚಿಯನ್ , ಪಾರ್ಸಿ, ಬೌದ್ದರಿಗೆ ಭಾರತ ದೇಶದ ಪೌರತ್ವ ಸಿಗುತ್ತದೆ. ಆದರೆ ಆ ದೇಶಗಳ ಮುಸ್ಲಿಂರಿಗೆ ಮಾತ್ರ ಭಾರತ ದೇಶದ ಪೌರತ್ವ ನೀಡುವುದಿಲ್ಲ ಎಂದಾದರೆ ಅದು ಅಲ್ಪ ಸಂಖ್ಯಾತರಿಗೆ ಮಾಡಿದ ಅಪಮಾನ ಎಂದು ಗುಡುಗಿದರು.
ಈ ದೇಶದಲ್ಲಿ ನಿರಾಶ್ರಿತರು, ವಲಸಿಗರಿಗೆ ಭಾರತ ದೇಶದ ಪೌರತ್ವ ಪಡೆಯಲು ಸಾಕಷ್ಟು ದಾಖಲೆ ಸಲ್ಲಿಸಬೇಕು. ಇದು ಕಷ್ಟಸಾಧ್ಯವಾಗುತ್ತದೆ. ಬಿಜೆಪಿ ದೇಶದ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ನೀಡುತ್ತದೆ. ಭಾರತ ಸಂವಿಧಾನದ ಮೂಲ ಲಕ್ಷಣಗಳಾದ ಜಾತ್ಯಾತೀತತೆ ನಾಶಕ್ಕೆ ಕಾರಣವಾಗುತ್ತದೆ. ಇದರಿಂದ ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭನೆಗೆ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಮಾಜಿ ಸಚಿರಾದ ಕಿಮ್ಕನೆ ರತ್ನಾಕರ್ ,ಶಾಸಕ ಸಂಗಮೇಶ್ವರ್ ,ಮಾಜಿ ಶಾಸಕ ಆರ್.ಪ್ರಸನ್ನ ಕುಮಾರ್ ,ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಸೇರಿದಂತೆ ಇನ್ನೂ ಅನೇಕ ಮುಖಂಡರು ಹಾಜರಿದ್ದರು.