ಶಿವಮೊಗ್ಗ : ಗ್ರಾಮೀಣ ಭಾಗದ ನೆಟ್ವರ್ಕ್ ಸಮಸ್ಯೆ ಬಗೆಹರಿಸಲು ಡಿಜಿಟಲ್ ವಿಲೇಜ್ ಯೋಜನೆ ಕಾರ್ಯಗತಗೊಳಿಸುವುದಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೊರೊನಾ ಕಾರಣದಿಂದಾಗಿ ದೊಡ್ಡ-ದೊಡ್ಡ ನಗರಗಳಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಹಳ್ಳಿಗಳಿಗೆ ಆಗಮಿಸಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆದರೆ, ಕುಗ್ರಾಮಗಳ ಉದ್ಯೋಗಿಗಳು ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಡಿಜಿಟಲ್ ವಿಲೇಜ್ ಕಾನ್ಸೆಪ್ಟ್ನಲ್ಲಿ 'ಭಾರತ್ ನೆಟ್' ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು.
ಇದನ್ನೂ ಓದಿ : ಸ್ವಂತ ಉದ್ಯಮ ಆರಂಭಿಸಿ, ಮಹಿಳೆಯರಿಗೆ ಉದ್ಯೋಗ ಕೊಟ್ಟ ಕಲಬುರಗಿಯ ಎಂಬಿಎ ಪದವೀಧರ
ಭಾರತಾದ್ಯಂತ 6 ಲಕ್ಷ ಗ್ರಾಮಗಳನ್ನು ಡಿಜಿಟಲೀಕರಣಗೊಳಿಸಲು ನಿರ್ಧರಿಸಲಾಗಿದೆ. ಮುಂದಿನ ಒಂದೆರಡು ವರ್ಷಗಳ ಒಳಗಾಗಿ 2 ಲಕ್ಷ ಗ್ರಾಮಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಶೀಘ್ರದಲ್ಲಿ ಪ್ರತಿ ಜಿಲ್ಲೆಯ ಒಂದೊಂದು ಗ್ರಾಮವನ್ನು ಡಿಜಿಟಲೀಕರಣಗೊಳಿಸುವುದಾಗಿ ರಾಜೀವ್ ಚಂದ್ರಶೇಖರ್ ಮಾಹಿತಿ ನೀಡಿದರು.
ಇದನ್ನೂ ಓದಿ:ಈ ರಾಜ್ಯದಲ್ಲಿ ಆನ್ಲೈನ್ನಲ್ಲೇ ಮದ್ಯ ಖರೀದಿಗೆ ಅವಕಾಶ.. ಇಂದಿನಿಂದ ಜಾರಿ!