ಶಿವಮೊಗ್ಗ : ನಾಲ್ಕು ದಿನಗಳ ಜಿಲ್ಲಾ ಪ್ರವಾಸಕ್ಕೆ ಆಗಮಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಸ್ವಾಗತಿಸಲಾಯಿತು. ಇದೇ ವೇಳೆ ಪೊಲೀಸ್ ಸಿಬ್ಬಂದಿಗೆ ವಿವಿಧ ಸೌಲಭ್ಯ ನೀಡಬೇಕೆಂದು ರಾಜ್ಯ ನಾಗರಿಕರ ರಕ್ಷಣಾ ಸಮಿತಿ ಡಿಜಿಪಿಗೆ ಮನವಿ ಸಲ್ಲಿಸಿತು.
ಪೊಲೀಸ್ ಸಿಬ್ಬಂದಿಯ ಮಕ್ಕಳ ವಿವಾಹ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ಪೊಲೀಸ್ ಕಲ್ಯಾಣ ಮಂಟಪಗಳನ್ನು ಸ್ಥಾಪಿಸಬೇಕು. ಬಂದೋಬಸ್ತ್ ಕರ್ತವ್ಯ ಮಾಡುವ ಪೊಲೀಸ್ ಸಿಬ್ಬಂದಿಗೆ ಶೌಚಾಲಯದ ವ್ಯವಸ್ಥೆ, ಕೂರಲು ಆಸನ ಇರುವುದಿಲ್ಲ. ಹಾಗಾಗಿ, ಅವರಿಗೆ ಸಂಚಾರಿ ಶೌಚಾಲಯದ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಓದಿ : ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ಸ್ಗೆ ಪೊಲೀಸ್ ಶಾಕ್.. ಪರಪ್ಪನ ಅಗ್ರಹಾರ ಜೈಲಿನ ಮೇಲೂ ದಾಳಿ
ಈ ಸಂದರ್ಭದಲ್ಲಿ ನಾಗರಿಕ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಕೆ. ಶೇಖರ್, ಮಹಿಳಾ ಅಧ್ಯಕ್ಷೆ ಉಷಾ ಉತ್ತಪ್ಪ, ಪದಾಧಿಕಾರಿಗಳಾದ ಆರ್. ರಾಘವೇಂದ್ರ, ವಿನೋದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.